BJP ಯಲ್ಲಿ ಹೊಸ ಅಧ್ಯಕ್ಷರಿಗಾಗಿ ಚುನಾವಣೆ ಇಲ್ಲ, ಜೆ.ಪಿ ನಡ್ದಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಕೆ!

BJP Party President: ಮೊದಲ ಏಳು ತಿಂಗಳು ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಇದರ ನಂತರ, 20 ಜನವರಿ 2020 ರಂದು ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಅದರಂತೆ, ಅವರ ಮೂರು ವರ್ಷಗಳು 20 ಜನವರಿ 2023 ರಂದು ಪೂರ್ಣಗೊಳ್ಳುತ್ತಿವೆ. 

Written by - Nitin Tabib | Last Updated : Sep 26, 2022, 04:43 PM IST
  • ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಒಂದೆಡೆ ಭಾರಿ ಕುತೂಹಲ ಮುಂದುವರೆದಿದ್ದರೆ,
  • ಇನ್ನೊಂದೆಡೆ ಬಿಜೆಪಿಯಲ್ಲಿ ಪಕ್ಷದ ಮುಖ್ಯಸ್ಥರ ಆಯ್ಕೆ ನಡೆಯುತ್ತಿಲ್ಲ.
  • ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು 2024 ರವರೆಗೆ ವಿಸ್ತರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
BJP ಯಲ್ಲಿ ಹೊಸ ಅಧ್ಯಕ್ಷರಿಗಾಗಿ ಚುನಾವಣೆ ಇಲ್ಲ, ಜೆ.ಪಿ ನಡ್ದಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಕೆ! title=
JP Nadda

BJP Party President: ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಒಂದೆಡೆ ಭಾರಿ ಕುತೂಹಲ ಮುಂದುವರೆದಿದ್ದರೆ, ಇನ್ನೊಂದೆಡೆ ಬಿಜೆಪಿಯಲ್ಲಿ ಪಕ್ಷದ ಮುಖ್ಯಸ್ಥರ ಆಯ್ಕೆ ನಡೆಯುತ್ತಿಲ್ಲ. ಜೆಪಿ ನಡ್ಡಾ ಅವರ ಅಧಿಕಾರಾವಧಿಯನ್ನು 2024 ರವರೆಗೆ ವಿಸ್ತರಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರ ಅಧಿಕಾರಾವಧಿಯು 20 ಜನವರಿ 2023 ರಂದು ಮುಕ್ತಾಯಗೊಳ್ಳುತ್ತಿದೆ. ಮೊದಲ ಏಳು ತಿಂಗಳು ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ. ಇದರ ನಂತರ, 20 ಜನವರಿ 2020 ರಂದು ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಅದರಂತೆ, ಅವರ ಮೂರು ವರ್ಷಗಳು 20 ಜನವರಿ 2023 ರಂದು ಪೂರ್ಣಗೊಳ್ಳುತ್ತಿವೆ. ಆದರೆ, 2024ರ ಸಾರ್ವತ್ರಿಕ ಚುನಾವಣೆಯವರೆಗೂ ಬಿಜೆಪಿಯ ಅಧಿಕಾರ ಅವರ ಕೈಯಲ್ಲಿಯೇ ಇರಲಿದೆ ಎನ್ನಲಾಗಿದೆ.

ಇದನ್ನೂ ಓದಿ-1 October 2022: ಅಕ್ಟೋಬರ್ 1 ರಿಂದ ಬದಲಾಗಲಿದೆ ಹಲವು ನಿಯಮಗಳು: ನಿಮ್ಮ ಜೇಬಿಗೆ ನೇರ ಪರಿಣಾಮ ಗ್ಯಾರಂಟಿ

RSS ಜೊತೆಗೆ ನಿಕಟ ಸಂಬಂಧ
ತನ್ನ ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಸಕ್ರೀಯರಾಗಿರುವ ಜೆಪಿ ನಡ್ದಾ ತಮ್ಮ ಕ್ಲೀನ್ ಇಮೇಜ್ ಗಾಗಿ ಹೆಸರುವಾಸಿಯಾಗಿದ್ದಾರೆ. ಇದಲ್ಲದೆ ಅವರು RSS ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಅವರು ಕೇಂದ್ರದಲ್ಲಿ ಅಷ್ಟೇ ಅಲ್ಲ ಹಿಮಾಚಲ ಪ್ರದೇಶದಲ್ಲಿಯೂ ಕೂಡ ಸಚಿವರಾಗಿದ್ದರು. 1998ರಿಂದ 2003ರವರೆಗೆ ಅವರು ಹಿಮಾಚಲ ಪ್ರದೇಶದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ಬಳಿಕ 2008ರಿಂದ 2012ರವರೆಗೆ ಅವರು ಧುಮಾಲ ಸರ್ಕಾರದಲ್ಲಿಯೂ ಕೂಡ ಮಂತ್ರಿಯಾಗಿದ್ದರು. 2012 ರಲ್ಲಿ ಮೊಟ್ಟಮೊದಲ ಬಾರಿಗೆ ಅವರು ರಾಜ್ಯಸಭಾ ಸಂಸದರಾಗಿ ಆಯ್ಕೆಗೊಂಡಿದ್ದಾರೆ. ಮೋದಿ ಸರ್ಕಾರದಲ್ಲಿ ಅವರು ಆರೋಗ್ಯ ಸಚಿವರಾಗಿಯೂ ಕೂಡ ಕಾರ್ಯನಿರ್ವಹಿಸಿದ್ದಾರೆ.

ಇದನ್ನೂ ಓದಿ-ಸಚಿನ್ ಪೈಲೆಟ್ ಗೆ ರಾಜಸ್ತಾನದ ಸಿಎಂ ಪಟ್ಟ?

ಇನ್ನೊಂದೆಡೆ ರಾಜಸ್ಥಾನದಲ್ಲಿ ಮುಂದುವರೆದಿರುವ ರಾಜಕೀಯ ಸಂಕಷ್ಟದ ನಡುವೆಯೇ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಗಾಗಿ ತಮ್ಮ ಬಳಿ ಇಡೀ ದೇಶದ ಪಕ್ಷದ ಕಾರ್ಯಕರ್ತರ ಬೆಂಬಲವಿದೆ ಎಂದು ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News