ಅಯೋಧ್ಯೆ: ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯಗಳನ್ನು ಕಣ್ತುಂಬಿಕೊಂಡು ಪುನೀತರಾಗಲು ಬಯಸಿರುವ ರಾಮ ಭಕ್ತರಿಗೆ ನಿರಾಶೆಯಾಗುವ ಸುದ್ದಿಯಿದು. ಸುರಕ್ಷತೆಯ ಕಾರಣಗಳಿಂದಾಗಿ ಮಂದಿರ ನಿರ್ಮಾಣ ಕಾರ್ಯಗಳನ್ನು ನೋಡಲು ವೀಕ್ಷಕರಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ ತಿಳಿಸಿದೆ.


COMMERCIAL BREAK
SCROLL TO CONTINUE READING

'ರಾಮಭಕ್ತರು ರಾಮಮಂದಿ(Ram Mandir)ರ ನಿರ್ಮಾಣ ಕಾರ್ಯಗಳನ್ನು ನೋಡಲು ಬಯಸಿದ್ದಾರೆ. ಆದರೆ, ನಿರ್ಮಾಣ ಸ್ಥಳದಲ್ಲಿ ಬೃಹತ್‌ ಕ್ರೇನ್‌ಗಳು, ಕಲ್ಲು ಪುಡಿ ಮಾಡುವ ಭಾರೀ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿಗೆ ಪ್ರವೇಶಿಸಲು ವೀಕ್ಷಕರಿಗೆ ಅವಕಾಶ ನೀಡಿದರೆ ಅಪಘಾತಗಳು ಸಂಭವಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ನಿರ್ಮಾಣ ಕಾರ್ಯಗಳನ್ನು ಹತ್ತಿರದಿಂದ ನೋಡಲು ಅವಕಾಶ ನೀಡದೆ ಇರಲು ನಿರ್ಧರಿಸಲಾಗಿದೆ' ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ.


2.5 ಕೋಟಿ ರೈತರಿಗೆ ಸಿಗಲಿದೆ Kissan Credit Card.! ಈ ಕ್ರೆಡಿಟ್ ಕಾರ್ಡ್ ಲಾಭ ತಿಳಿಯಿರಿ


ರಾಮ ಮಂದಿರ ನಿರ್ಮಾಣ ಕಾರ್ಯವನ್ನು ರಾಮ ಭಕ್ತರು ನಿಗದಿತ ಸ್ಥಳದಿಂದ ನೋಡಲು ಅವಕಾಶ ನೀಡುವುದಾಗಿ ಈ ಹಿಂದೆ ಟ್ರಸ್ಟ್‌ ಹೇಳಿತ್ತು. ಆದರೆ, ಸುರಕ್ಷತೆಯ ಕಾರ್ಯದಿಂದ ಈ ಅವಕಾಶವನ್ನು ನೀಡದೆ ಇರಲು ನಿರ್ಧರಿಸಲಾಗಿದೆ. ದೇಗುಲ ನಿರ್ಮಾಣ ಕಾರ್ಯದ ಪ್ರಗತಿಯನ್ನು ಟ್ರಸ್ಟ್‌ ನಿಯಮಿತವಾಗಿ ಅಪ್‌ಡೇಟ್‌ ಮಾಡಲಿದೆ ಎಂದು ರಾಯ್‌ ಸ್ಪಷ್ಟಪಡಿಸಿದ್ದಾರೆ.


ರೈಲು 3 ಗಂಟೆ ಲೇಟಾಗಿ ಓಡುತ್ತಿತ್ತು. ಎಕ್ಸಾಂ ಮಿಸ್ಸಾಗ್ತಾ ಇತ್ತು.ಆಗ ಬಂತೊಂದು ಟ್ವೀಟ್..!ಮುಂದೇನಾಯ್ತ..?!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.