ನವದೆಹಲಿ: SBI Loan Apps Alert: ದೇಶದ ಹಲವು ನಗರಗಳಲ್ಲಿ ಇನ್ಸ್ಟಂಟ್ ಸಾಲ ನೀಡುವ ಆಪ್ ಗಳ ಮಹಾಪೂರವೇ ಕಂಡುಬರುತ್ತಿದೆ. ಹಲವು ಕಂಪನಿಗಳು ಜನರಿಗೆ ಮನೆಯಲ್ಲಿಯೇ ಕುಳಿತು ಕೇವಲ ಆಧಾರ್ ಕಾರ್ಡ್ ಹಾಗೂ ಪ್ಯಾನ್ ನಂಬರ್ ಗಳ ಆಧಾರದ ಮೇಲೆ ಸಣ್ಣ ಸಣ್ಣ ಸಾಲಗಳನ್ನು ನೀಡುತ್ತಿವೆ. ಆದರೆ, ಇವರ ಬಡ್ಡಿ ದರ ತುಂಬಾ ವಿಪರೀತವಾಗಿರುತ್ತದೆ. ಇಂತಹುದರಲ್ಲಿ ಹಲವು ಕಂಪನಿಗಳು ಜನರನ್ನು ವಂಚಿಸುತ್ತಿವೆ. ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಇಂತಹ ವಂಚನೆಯಿಂದ ದೂರ ಉಳಿಯಲು ಎಚ್ಚರಿಕೆ ನೀಡಿದೆ. ಇದಕ್ಕೂ ಮೊದಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡಿತ್ತು.


COMMERCIAL BREAK
SCROLL TO CONTINUE READING

ಟ್ವೀಟ್ ಮೂಲಕ ಮಾಹಿತಿ
ಈ ರೀತಿಯ ವಂಚನೆಯಿಂದ ಪಾರಾಗಲು ಸಲಹೆ ನೀಡಿ ಟ್ವೀಟ್ ಮಾಡಿರುವ SBI, 'ವಂಚನೆಯ ಇನ್ಸ್ಟಂಟ್ ಸಾಲ ನೀಡುವ ಆಪ್ಸ್ ಗಳ ಬಗ್ಗೆ ಎಚ್ಚರ! ಅನಧಿಕೃತ ಲಿಂಕ್ ಗಳನ್ನು ಕ್ಲಿಕ್ಕಿಸಬೇಡಿ ಹಾಗೂ SBI ಅಥವಾ ಇತರ ಯಾವುದೇ ಬ್ಯಾಂಕ್ ಕುರಿತು ಬರುವ ಫ್ರಾಡ್ ಕರೆಗಳಿಗೆ ತಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಡಿ. ನಿಮ್ಮ ಎಲ್ಲ ಹಣಕಾಸಿನ ಆವಶ್ಯಕತೆಗಳಿಗೆ  https://bank.sbi ಜಾಲತಾಣಕ್ಕೆ ಭೇಟಿ ನೀಡಿ' ಎಂದು ಹೇಳಿದೆ.


Refunding Failed Transactions: ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಗೆ ಪತ್ರ ಬರೆದ CCPA


ಲೋನ್ ಹೆಸರಿನಲ್ಲಿ ವಂಚನೆ ಎಸಗಲಾಗುತ್ತಿದೆ
ಅನಧಿಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಅಥವಾ ಮೊಬೈಲ್ ಆ್ಯಪ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಚ್ಚರಿಕೆ ನೀಡಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ, ಜನರು ತ್ವರಿತ ಸಾಲ ಪಡೆಯಲು ಹೋಗಿ  ಡಿಜಿಟಲ್ ಲೆಂಡಿಂಗ್ ಹಗರಣಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ.


ಇದನ್ನು ಓದಿ-ಎಚ್ಚರ: Pizza ಆಸೆಗೆ ಅಕೌಂಟ್ ಖಾಲಿಯಾಗದಿರಲಿ!


ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಂದ ಜನರು ಸಾಲ ಪಡೆಯುವುದನ್ನು ತಪ್ಪಿಸಬೇಕು ಎಂದು ಆರ್‌ಬಿಐ ಹೇಳಿದೆ, ಈ ಪ್ಲಾಟ್ ಫಾರ್ಮ್/ಆಪ್ ಗಳು ಯಾವುದೇ ದಾಖಲೆಗಳನ್ನು ಪಡೆಯದೇ ತ್ವರಿತ ಸಾಲವನ್ನು ನೀಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಆದ್ದರಿಂದ, ಅಂತಹ ಸಾಲ ನೀಡುವ ಕಂಪನಿಗಳ ಇತಿಹಾಸವನ್ನು ಪರಿಶೀಲಿಸಲು ಮರೆಯದಿರಿ ಎಂದು ಬ್ಯಾಂಕ್ RBI ಸಲಹೆ ನೀಡಿದೆ.


ಇದನ್ನು ಓದಿ-Account Opening Rules Changed: ಬ್ಯಾಂಕ್ ಖಾತೆ ತೆರೆಯುವ ನಿಯಮದಲ್ಲಿ ಬದಲಾವಣೆ ಮಾಡಿದ RBI, ಯಾರಿಗೆ ಲಾಭ ಇಲ್ಲಿ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.