ಮಥುರಾ: ಮಹಿಳೆಯೊಬ್ಬಳನ್ನು ಗಲ್ಲಿಗೇರಿಸಲು ಮಥುರಾದ ಕಾರಾಗೃಹದಲ್ಲಿ  (Mathura Jail ) ಸಿದ್ದತೆಗಳು ನಡೆಯುತ್ತಿವೆ.  ಹಾಗೇ ನೋಡಿದರೆ, ಸ್ವತಂತ್ರ ಭಾರತದಲ್ಲಿ ಮಹಿಳೆಯೊಬ್ಬಳನ್ನು ಗಲ್ಲಿಗೇರಿಸುತ್ತಿರುವುದು ಇದೇ ಮೊದಲು.  ಗಲ್ಲು ಶಿಕ್ಷೆಗೆ ಗುರಿಯಾಗಿರುವ ಆ ಮಹಿಳೆ ಯಾರು..? ಮಾಡಿರುವ ಘೋರ ಅಪರಾಧ ಏನು..? ಓದಿ Shabnam case


COMMERCIAL BREAK
SCROLL TO CONTINUE READING

ಶಭನಮ್ ಮಾಡಿದ್ದು ಘನಘೋರ ಕ್ರೈಮ್.!
ರಾಂಪುರ ಜೈಲಿನಲ್ಲಿ ನೇಣುಗಂಬಕ್ಕೆ ಏರಲಿರುವ ಆ ಮಹಿಳೆಯ ಹೆಸರು ಶಭನಮ್ (Shabnam) .  13 ವರ್ಷದ ಹಿಂದೆ ಶಭನಮ್ ತನ್ನ ಪ್ರಿಯಕರ ಸಲೀಮ್ ಜೊತೆ ಸೇರಿ ತನ್ನದೇ ಪರಿವಾರದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಚ್ಚಿ ನಿರ್ಮಾನುಷವಾಗಿ ಹತ್ಯೆಗೈದಿದ್ದಳು. ಈ ಅಪರಾಧಕ್ಕೆ ನೆಲದ ಎಲ್ಲಾ ಕೋರ್ಟ್ ಅವಳಿಗೆ ಗಲ್ಲು ಖಾಯಂ (Death Penalty) ಮಾಡಿದೆ. ಫೆ. 15 ರಂದು ಜೀವದಾನ  ನೀಡಲು ರಾಷ್ಟ್ರಪತಿ (President)ಕೂಡಾ ನಿರಾಕರಿಸಿದ್ದಾರೆ. ರಾಂಪುರ ಜೈಲಿನಲ್ಲಿ (Rampura jail) ಗಲ್ಲಿಗೇರಿಸುವ ದಿನ ಇನ್ನೂ ಪಕ್ಕಾ ಆಗಿಲ್ಲ. 


ಇದನ್ನೂ ಓದಿ : ಅದೊಂದೇ ಆಪರೇಷನ್ ಗೆ ಚೀನಾದ ನಡು ನಡುಗಿತ್ತು.! ಓದಿ ಸೇನೆಯ ಲಡಾಖ್ ಡೈರಿ


`ಮಲಗಿದ್ದ ಅಪ್ಪ, ಅಮ್ಮ, ಅಣ್ಣನನ್ನೇ ಕೊಚ್ಚಿಕೊಚ್ಚಿ ಕೊಂದಳು':
ಶಭನಮ್ ಮಾಡಿದ ಘನಘೋರ ಕ್ರೈಮ್ (crime) ಕಥೆ ಕೇಳಿದರೆ ಎದೆ ನಡುಗುತ್ತದೆ. ಇದು 13 ವರ್ಷ ಹಿಂದಿನ ಕ್ರೈಮ್ ಕಥೆ. ಶಬನಮ್ ಮತ್ತು ಸಲೀಮ್ ಪ್ರೇಮ ಸಂಬಂಧದಲ್ಲಿದ್ದರು. ಅದು ಬೆಳೆದು ಶಬನಮ್ ಗರ್ಭವತಿಯಾಗುತ್ತಾಳೆ. ಆದರೆ, ಸಲೀಮ್ (Saleem) ಜೊತೆ ಶಭನಮ್ ನಿಖಾಗೆ ಮನೆಯವರು ಸಿದ್ದ ಇರುವುದಿಲ್ಲ. ಮದುವೆಗೆ (marraige) ಒಪ್ಪದಿರುವುದೇ ಮನೆಯವರು ಮಾಡಿದ ತಪ್ಪು. ಏಪ್ರಿಲ್ 5, 2008, ರಂದು ಈ ಶಭನಮ್ ತನ್ನ ಪ್ರಿಯಕರ ಸಲೀಮ್ ಜೊತೆ ಸೇರಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ಅತ್ತಿಗೆಯ ಹತ್ತು ವರ್ಷದ ಮಗು, ಸೋದರ ಸೊಸೆ, ಇನ್ನೋರ್ವ ಅಣ್ಣ ಸೇರಿ ಒಟ್ಟು 7 ಜನರಿಗೆ ಮೊದಲು ಮತ್ತು ಬರಿಸುವ ಔಷಧ (Sedatives) ನೀಡುತ್ತಾಳೆ. ಅನಂತರ ಸಲೀಂ ಜೊತೆ ಸೇರಿ ಮಲಗಿದ್ದ ಈ ಏಳೂ ಜನರನ್ನು ಅಮಾನುಷವಾಗಿ ಕೊಡಲಿಯಿಂದ ಕೊಚ್ಚಿ  ಕೊಲೆ (Murder) ಮಾಡುತ್ತಾಳೆ. ಪ್ರೀತಿಗಾಗಿ ಉತ್ತರಪ್ರದೇಶದ ಬಬನ್ಖೇಕಡಿ ಗ್ರಾಮದಲ್ಲಿ ನಡೆದ ಈ ಘನಘೋರ ಕ್ರೈಂಗೆ (sensational murder) ಸಂಪೂರ್ಣ ಉತ್ತರ ಭಾರತ ಬೆಚ್ಚಿ ಬಿದ್ದಿತ್ತು. ಈ ಅಪರಾಧಕ್ಕೆ ಗಲ್ಲು ಶಿಕ್ಷೆಯೇ ಸೂಕ್ತ ಎಂದು ದೇಶದ ಎಲ್ಲಾ ಕೋರ್ಟ್ ಗಳೂ  ತೀರ್ಪು ಓದಿದ್ದವು. 


ಜೈಲಿನಲ್ಲೇ ಗಂಡು ಮಗು ಹೆತ್ತ ಶಭನಮ್ :
2008 ರಂದು ಜೈಲಿನಲ್ಲೇ (Jail)ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಈ ಶಭನಮ್. ಏಳು ವರ್ಷದ ತನಕ ಜೈಲಿನಲ್ಲಿಯೇ ಅಮ್ಮನ ಜೊತೆಯೇ ಬೆಳೆಯುತ್ತದೆ ಆ ಮಗು. 2015 ರಲ್ಲಿ ತನ್ನ ಕಾಲೇಜು ಗೆಳೆಯ ಉಸ್ಮಾನ್ ಶಫಿಗೆ ಆ  ಮಗುವನ್ನು ಒಪ್ಪಿಸುತ್ತಾಳೆ ಶಭ್ನ ಮ್. ಆದರೆ, ಒಪ್ಪಿಸುವ ಮೊದಲು 2 ಷರತ್ತು ಹಾಕುತ್ತಾಳೆ.  ತನ್ನ ಮಗನನ್ನು ಯಾವತ್ತಿಗೂ ತನ್ನ ಹಳ್ಳಿಗೆ ಕರೆದುಕೊಂಡು ಹೋಗಬಾರದು. ಇದು ಮೊದಲ ಷರತ್ತು.  ಮಗನ ಹೆಸರು ಬದಲಾಯಿಸಬೇಕು. ಇದು ಎರಡನೇ ಷರತ್ತು. ಈ ಎರಡೂ ಷರತ್ತಿಗೆ ಒಪ್ಪಿದ್ದಾನೆ ಉಸ್ಮಾನ್ ಶಫಿ. ಬದಲಾದ ಹೆಸರಿನಲ್ಲಿ ಆ ಮಗು ಈಗ ಉಸ್ಮಾನ್ ಶಫಿ ಜೊತೆ ಬೆಳೆಯುತ್ತಿದೆ. ಮಾಡಿದ ಘನಘೋರ ತಪ್ಪಿಗೆ ತಾಯಿ ಗಲ್ಲು ಶಿಕ್ಷೆಗೆ ದಿನ ಎಣಿಸುತ್ತಿದ್ದಾಳೆ.


ಇದನ್ನೂ ಓದಿ : Farmer protest : ಇಂದು ದೇಶಾದ್ಯಂತ ರೈತರಿಂದ ರೈಲು ತಡೆ ಚಳವಳಿ, ಮಧ್ಯಾಹ್ನ ರೈಲು ಸಂಚಾರ ವ್ಯತ್ಯಯ ಸಾಧ್ಯತೆ


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.