ಲಡಾಖ್: ನಿಮಗೆ ಗೊತ್ತಿದೆ. ಚೀನಾ ಭಾರತ ನಡುವಣ ಲಡಾಖ್ ಬಿಕ್ಕಟ್ಟು (Ladhak Conflict) ಶಮನವಾಗುವ ಎಲ್ಲಾ ಲಕ್ಷಣಗಳಿವೆ. ಎರಡೂ ಸೇನೆಗಳು ಪರಸ್ಪರ ತಮ್ಮ ಮುಂಚೂಣಿ ನೆಲೆಗಳಿಂದ (LAC) ಸೇನೆಗಳನ್ನು ವಾಪಾಸ್ ಕರೆಯಿಸಿಕೊಳ್ಳುತ್ತಿವೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಲಡಾಖ್ ಅಷ್ಟೇ ಅಲ್ಲ ಪಾಕಿಸ್ತಾನಕ್ಕೆ ಹೊಂದಿಕೊಂಡ ಗಡಿಯಲ್ಲೂ (LOC) ಭಾರತವನ್ನು ಸುತ್ತುವರಿಯಲು ರಣತಂತ್ರ ರೂಪಿಸಿದ್ದ ಚೀನಾ (China) ಕೊನೆಗೂ ಹಿಂದೆ ಸರಿದಿದ್ದು ಏಕೆ..?. ಶಸ್ತ್ರಾಸ್ತ್ರ ಸಂಖ್ಯೆಯಲ್ಲಿ ಭಾರತ ಚೀನಾ ಸಮಬಲದಲ್ಲಿ ಇಲ್ಲ. ಹೀಗಿದ್ದೂ, ಚೀನಾ ಬರಿಗೈ ದಾಸನಂತೆ ವಾಪಸ್ ಹೋಗಲು ಕಾರಣ ಏನು.?
ಸೇನೆಗೆ ಸಿಕ್ಕಿತ್ತು ವಿಶೇಷ ಆದೇಶ :
ಲಡಾಖ್ ಹಿಮಶಿಖರದಲ್ಲಿ ಚೀನಾ (China) ಸೈನ್ಯದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಾರ್ಯಾಚರಣೆ ಶುರುಮಾಡಬೇಕೆಂಬ ಆದೇಶ ಸೇನೆಗೆ ದೆಹಲಿಯಿಂದ (Delhi) ರವಾನೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 29 ಮತ್ತು 30 ರಂದು ದಿಢೀರ್ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ (Indian Army), ಪೆಂಗಾಂಗ್ ಸರೋವರದ (Pangong Tso) ದಕ್ಷಿಣ ತಟದಲ್ಲಿ ಇರುವ ರೆಜಾಂಗ್ ಲಾ ಮತ್ತು ರೆಚಿನ್ ಲಾ ಶಿಖರವನ್ನು ಆಕ್ರಮಿಸಿಕೊಂಡು ಬಿಟ್ಟಿತು. ಈ ಶಿಖರ ಹೇಗಿದೆಯೆಂದರೆ, ಈ ಶಿಖರದ ಮೇಲೆ ಕುಳಿತರೆ ಎಲ್ಲಾ ದಿಕ್ಕಿನಲ್ಲೂ ಚೀನಾ ಸೇನಾ ನೆಲೆಯನ್ನು ಉಡಾಯಿಸಲು ಸಾಧ್ಯ ಇತ್ತು. ಯುದ್ಧವೇನಾದೂ (War) ನಡೆದರೆ ಈ ಎರಡೂ ಶಿಖರಗಳು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗ್ತಾ ಇತ್ತು.
ಇದನ್ನೂ ಓದಿ : Toolkit ಪ್ರಕರಣದ ಮಾಸ್ಟರ್ ಮೈಂಡ್ ನಿಖಿತಾ ಜಾಕೋಬ್: ಗ್ರೇಟಾ ಥಂಬರ್ಗ್ ಎಂಟ್ರಿ ಆಗಿದ್ದು ಹೇಗೆ?
ಕೈಲಾಸ ರೇಂಜ್ ವಶಪಡಿಸಿಕೊಳ್ಳಲು ಹವಣಿಸಿತ್ತು ಡ್ಯ್ರಾಗನ್.! :
ಆಗಸ್ಟ್ 30 ಭಾರತದ ಕಾರ್ಯಾಚರಣೆ (Indian Army operation) ಬಳಿಕ ಚೀನಾ ಸೇನೆ ಕೈಲಾಸ್ ರೇಂಜ ಲ್ಲಿ (Kailash Range) ಭಾರತಕ್ಕೆ ಹಿಮಮುಕ್ಕಿಸುವ ಕಾರ್ಯಾಚರಣೆಗೆ ಪ್ಲಾನ್ ಮಾಡಿತ್ತು. ಆದರೆ, ಕೈಲಾಸ್ ರೇಂಜಲ್ಲಿ ಭಾರತೀಯ ಸೇನೆ ಏಕ್ ದಂ ಯುದ್ದೋತ್ಸವದಲ್ಲಿತ್ತು. ಚೀನಾ ಬಳಿ ಸಮಯ ತೀರಾ ಕಡಿಮೆ ಇತ್ತು. ಇದನ್ನೆಲ್ಲಾ ಗಮನಿಸಿದ ಚೀನಾ ಸೇನೆ, ತನ್ನ ಕಾರ್ಯತಂತ್ರವನ್ನು ಡ್ರಾಪ್ ಮಾಡಿತ್ತು.
ಸೇನಾಧಿಕಾರಿಗಳ ಮಾತುಕತೆಯಲ್ಲೂ ಚೀನಾ ಮೇಲೆ ಒತ್ತಡ :
ಚೀನಾ ಇಷ್ಟೊಂದು ಬೇಗ ಸೇನೆ ಹಿಂದಕ್ಕೆ ತೆಗೆಯುತ್ತದೆ ಎಂಬ ವಿಶ್ವಾಸ ನಮ್ಮ ಸೈನ್ಯಕ್ಕೆ ಇರಲಿಲ್ಲ. ಆದರೆ, ರೆಜಾಂಗ್ ಲಾ ಮತ್ತು ರೆಚಿನ್ ಲಾ ಕಾರ್ಯಾಚರಣೆ ಬಳಿಕ ಚೀನಾ ಕಂಗೆಟ್ಟು ಹೋಗಿತ್ತು. ಎಷ್ಟರ ಮಟ್ಟಿಗೆ ಚೀನಾ ಪತರಗುಟ್ಟಿತ್ತು ಎಂದರೆ ಎರಡೂ ದೇಶಗಳ ನಡುವಣ ಸೇನಾಧಿಕಾರಿಗಳ ಮಟ್ಟದ ಮಾತುಕತೆಯಲ್ಲಿ (Commander Level Talk) ಭಾರತದ ಮುಂದೆ ತನ್ನ ವಾದವನ್ನು ಸಮರ್ಥವಾಗಿ ಮಂಡಿಸುವಲ್ಲಿಯೂ ವಿಫಲವಾಗಿತ್ತು. ಭಾರತದ ಟೀಂ ಯಾವುದೇ ವಿಷಯದಲ್ಲಿ ರಾಜಿಗೆ ತಯಾರಿರಲಿಲ್ಲ. ಜೊತೆಗೆ ಯಾವುದೇ ಪ್ರತಿಕೂಲ ಕ್ಷಣ ಎದುರಿಸಲೂ ನಾವು ಸಿದ್ದರಿದ್ದೇವೆ ಅನ್ನೋ ಮೆಸೆಜ್ (Message) ಚೀನಾಧಿಕಾರಿಗಳಿಗೆ ನೀಡಲಾಗಿತ್ತು. ಹಾಗಾಗಿ, ಹಲವು ಸುತ್ತಿನ ಮಾತುಕತೆ ಯಾವುದೇ ಫಲ ನೀಡಿರಲಿಲ್ಲ. ಯಾಕೆಂದರೆ, ಭಾರತ ಪಟ್ಟು ಸಡಿಲಿಸಲು ಸುತಾರಾಂ ಸಿದ್ದವಿರಲಿಲ್ಲ. ಕೊನೆಗೆ ಚೀನಾವೇ ಸರಿದಾರಿಗೆ ಬರಬೇಕಾಯಿತು. ಮುಂಚೂಣಿ ನೆಲೆಗಳಿಂದ (LAC) ಸೇನೆ ಹಿಂದಕ್ಕೆ ಪಡೆಯಲು ಒಪ್ಪಬೇಕಾಯಿತು.
ಇದನ್ನೂ ಓದಿ : CCL Recruitment 2021: ಯಾವುದೇ ಪರೀಕ್ಷೆಯಿಲ್ಲದೆ ಪಡೆಯಿರಿ Government Job
ಇವೆಲ್ಲಾ ಹೇಳಿದ್ದು ಯಾರು ಗೊತ್ತಾ..? :
ಈ ಎಲ್ಲಾ ಮಾಹಿತಿ ಕೊಟ್ಟಿದ್ದು ಲೆಫ್ಟಿನೆಂಟ್ ಜನರಲ್ ವೈಕೆ ಜೋಶಿ (Lt Gen YK Joshi). ಇವರು ನಾರ್ದನ್ ಕಮಾಂಡ್ ಚೀಫ್ (Northern Command) . ಲಡಾಖ್ ಕಾರ್ಯಾಚರಣೆ ಇವರ ಸುಪರ್ದಿಯಲ್ಲೇ ಬರುತ್ತದೆ. ಅವರ ಪ್ರಕಾರ, ಪೆಂಗಾಂಗ್ ಸರೋವರದ ದಕ್ಷಿಣ ತಟದಲ್ಲಿ ಇರುವ ರೆಜಾಂಗ್ ಲಾ ಮತ್ತು ರೆಚಿನ್ ಲಾ ಶಿಖರವನ್ನು ಆಕ್ರಮಿಸಿಕೊಂಡಿದ್ದೇ, ಭಾರತದ ಮಟ್ಟಿಗೆ ಟರ್ನಿಂಗ್ ಪಾಯಿಂಟ್. ಈ ಕಾರ್ಯಾಚರಣೆ, ಚೀನಾ ಮೇಲೆ ಬಲವಾದ ಸೈಕಲಾಜಿಕಲ್ ಒತ್ತಡ ಹೇರಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.