ಭೋಪಾಲ್: ಮಧ್ಯಪ್ರದೇಶದ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ಖರೀದಿ ಟೆಂಡರ್ ಒಂಬತ್ತನೇ ಬಾರಿಗೆ ರದ್ದುಗೊಂಡಿದೆ. ಈ ಹಿನ್ನಲೆಯಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ  ಮೊಬೈಲ್ ಖರೀದಿಸಲು 10 ರೂಪಾಯಿಗಳನ್ನು ನೇರವಾಗಿ ಅವರ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದೆ. ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತರೂ ಈ ಹಣದಿಂದ 4 ಜಿ ಮೊಬೈಲ್ ಫೋನ್ ಖರೀದಿಸಬೇಕಾಗುತ್ತದೆ. ಅವರಿಗೆ ತಮ್ಮಿಷ್ಟದ ಮೊಬೈಲ್ ಫೋನ್ ಖರೀದಿಸುವ ಸ್ವಾತಂತ್ರ್ಯ ಇರುತ್ತದೆ.


COMMERCIAL BREAK
SCROLL TO CONTINUE READING

ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಮೊಬೈಲ್ ನೀಡಲು ನಿರ್ಧಾರ:
ಎರಡು ವರ್ಷಗಳ ಉಪಕ್ರಮ ಪೌಷ್ಟಿಕಾಂಶ ಅಭಿಯಾನದಡಿ ದೇಶದ ಅಂಗನವಾಡಿಗಳಲ್ಲಿ 6 ವರ್ಷದವರೆಗಿನ ಮಕ್ಕಳ ತೂಕ ಮತ್ತು ಎತ್ತರವನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಲು ನಿರ್ಧರಿಸಿದೆ. ಅದಾಗ್ಯೂ ಮಧ್ಯಪ್ರದೇಶ (Madhya Pradesh)ದಲ್ಲಿ ಈ ಯೋಜನೆಯನ್ನು ಇಲ್ಲಿಯವರೆಗೆ ಜಾರಿಗೆ ತರಲಾಗಿಲ್ಲ. ಇದಕ್ಕಾಗಿ 9 ಬಾರಿ ಟೆಂಡರ್‌ಗಳನ್ನು ಹಿಂಪಡೆಯಲಾಗಿದ್ದು, ಪ್ರತಿ ಬಾರಿಯೂ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಈಗ ಶಿವರಾಜ್ ಸರ್ಕಾರ ಅಂಗನವಾಡಿ ಕಾರ್ಯಕರ್ತರ ಬ್ಯಾಂಕ್ ಖಾತೆಗೆ ನೆರವಾಗಿ ಹಣ ಜಮಾ ಮಾಡಲು ಮುಂದಾಗಿದೆ. ಮೊಬೈಲ್ ಖರೀದಿಸಲು ರಾಜ್ಯದ 76,283 ಅಂಗನವಾಡಿ ಕಾರ್ಯಕರ್ತರಿಗೆ 10 ಸಾವಿರ ರೂಪಾಯಿಗಳನ್ನು ಕಳುಹಿಸಲು ನಿರ್ಧರಿಸಿದೆ. ಈ ರೀತಿಯಾಗಿ ಸುಮಾರು 76 ಕೋಟಿ ರೂ. ಖರ್ಚು ಮಾಡಲಾಗುವುದು.


JOB: ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ


ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಅನುಮೋದಿಸಬಹುದು:
ಪೌಷ್ಠಿಕಾಂಶ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತರಿಗೆ ಮೊಬೈಲ್ ನೀಡಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಕೋಟಿ ಬಜೆಟ್ ನೀಡಿದೆ. ಆದರೆ ಈ ಕೆಲಸ ಮಧ್ಯಪ್ರದೇಶದಲ್ಲಿ 2 ವರ್ಷಗಳಿಂದ ಬಾಕಿ ಉಳಿದಿದೆ. ಈಗ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chauhan) ಅವರ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 9 ನೇ ಬಾರಿಗೆ ಟೆಂಡರ್ ರದ್ದುಗೊಳಿಸಿದೆ. ಈ ಮೊತ್ತವನ್ನು ಡಿಬಿಟಿಯಿಂದ ಅಂಗನವಾಡಿ ಕಾರ್ಯಕರ್ತರ ಖಾತೆಗೆ ನೇರ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ಶಿವರಾಜ್ ಸರ್ಕಾರದ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಸ್ತಾಪವನ್ನು ಅನುಮೋದಿಸುವ ಸಾಧ್ಯತೆಯಿದೆ.


ಪ್ರಧಾನಿ ನರೇಂದ್ರ ಮೋದಿ ಅವರು 2018 ರಲ್ಲಿ ಪೌಷ್ಠಿಕಾಂಶ ಅಭಿಯಾನವನ್ನು ಪ್ರಾರಂಭಿಸಿದರು. ಎಲ್ಲಾ ರಾಜ್ಯಗಳಲ್ಲಿ 6 ವರ್ಷ ವಯಸ್ಸಿನ ಮಕ್ಕಳ ಪೋಷಣೆ ಮತ್ತು ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಅಂಗನವಾಡಿ ಕಾರ್ಯಕರ್ತರಿಗೆ (Anganwadi Workers) ಮೊಬೈಲ್ ಫೋನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಪ್ರತಿ ಅಂಗನವಾಡಿ ಕೇಂದ್ರದಲ್ಲಿ, ಪ್ರತಿ ಮಗುವಿನ ತೂಕ ಮತ್ತು ಎತ್ತರವನ್ನು ಪ್ರತಿ ತಿಂಗಳು ಮೊಬೈಲ್ ಫೋನ್‌ನಲ್ಲಿ ಕೇಂದ್ರದ ಸಾಮಾನ್ಯ ಅಪ್ಲಿಕೇಶನ್ ಸಾಫ್ಟ್‌ವೇರ್‌ಗೆ ಅಪ್‌ಲೋಡ್ ಮಾಡಬೇಕಾಗಿತ್ತು.


ಮಕ್ಕಳು ದುರ್ಬಲರಾಗಿದ್ದರೆ ದೇಶದ ಅಭಿವೃದ್ಧಿ ಕುಂಠಿತ: ಪ್ರಧಾನಿ ಮೋದಿ


ಅನೇಕ ರಾಜ್ಯಗಳಲ್ಲಿ ಡೇಟಾ ಅಪ್‌ಲೋಡ್‌ನೊಂದಿಗೆ ರಿಯಲ್ ಟೈಮ್ ಮಾನಿಟರಿಂಗ್ ಪ್ರಾರಂಭವಾಗಿದೆ. ಆದರೆ ಇನ್ನೂ ಅನೇಕ ರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ ಇನ್ನೂ ಮೊಬೈಲ್ ಫೋನ್ ನೀಡಲು ಸಾಧ್ಯವಾಗುತ್ತಿಲ್ಲ. 2021ರ ಜನವರಿಯ ವೇಳೆಗೆ ಮೊಬೈಲ್‌ನಿಂದ ಮಕ್ಕಳ ಮೇಲ್ವಿಚಾರಣೆ ಪ್ರಾರಂಭವಾಗದ ರಾಜ್ಯಗಳನ್ನು ವಿಫಲ ರಾಜ್ಯಗಳ ವಿಭಾಗದಲ್ಲಿ ಸೇರಿಸಲಾಗುವುದು ಎಂದು ಯೋಜನೆಯ ಪರಿಶೀಲನೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತು. ಇದರ ನಂತರ ಎಚ್ಚೆತ್ತಿರುವ ಶಿವರಾಜ್ ಸರ್ಕಾರ ಈ ಕ್ರಮ ಕೈಗೊಂಡಿದೆ.