ಮಕ್ಕಳು ದುರ್ಬಲರಾಗಿದ್ದರೆ ದೇಶದ ಅಭಿವೃದ್ಧಿ ಕುಂಠಿತ: ಪ್ರಧಾನಿ ಮೋದಿ

ದುರ್ಬಲ ಅಡಿಪಾಯದ ಮೇಲೆ ಬಲವಾದ ಕಟ್ಟಡವನ್ನು ಕಟ್ಟಲಾಗುವುದಿಲ್ಲ. ಅದೇ ರೀತಿ, ದೇಶದ ಮಕ್ಕಳು ದುರ್ಬಲರಾಗಿದ್ದಾರೆ ಅದರ ಅಭಿವೃದ್ಧಿ ಕುಂಠಿತವಾಗಲಿದೆ.

Last Updated : Sep 11, 2018, 12:38 PM IST
ಮಕ್ಕಳು ದುರ್ಬಲರಾಗಿದ್ದರೆ ದೇಶದ ಅಭಿವೃದ್ಧಿ ಕುಂಠಿತ: ಪ್ರಧಾನಿ ಮೋದಿ title=
Pic: ANI

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ ಸಾವಿರಾರು ಅಂಗನವಾಡಿ ಮತ್ತು ಆಶಾ ಕಾರ್ಮಿಕರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಆ ಸಂದರ್ಭದಲ್ಲಿ ದೇಶದಲ್ಲಿ ಪೌಷ್ಟಿಕಾಂಶ ಮತ್ತು ಉತ್ತಮ ಆರೋಗ್ಯ ಸೇವೆಗಳ ಕುರಿತು ಕೇಂದ್ರ ಸರ್ಕಾರವು ಸಂಪೂರ್ಣ ಗಮನ ಹರಿಸುತ್ತಿದೆ ಎಂದು ತಿಳಿಸಿದ ಮೋದಿ, 'ಗರ್ಭಿಣಿ ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡುವ ವೈದ್ಯರಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ'. ದುರ್ಬಲ ಅಡಿಪಾಯದ ಮೇಲೆ ಬಲವಾದ ಕಟ್ಟಡವನ್ನು ಕಟ್ಟಲಾಗುವುದಿಲ್ಲ. ಅದೇ ರೀತಿ, ದೇಶದ ಮಕ್ಕಳು ದುರ್ಬಲರಾಗಿದ್ದಾರೆ ಅದರ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಹೇಳಿದರು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ವ್ಯಾಕ್ಸಿನೇಷನ್ ಅಭಿಯಾನ ವೇಗವಾಗಿ ನಡೆಯುತ್ತಿದೆ. ಈ ಅಭಿಯಾನ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ಮಕ್ಕಳನ್ನು ತಲುಪುವುದು ಬಹಳ ಮುಖ್ಯ ಎಂದರು.

ಪ್ರಸ್ತುತ, ಓರ್ವ ಆಶಾ ಕಾರ್ಯಕರ್ತೆ ಯಾವುದೇ ಮಗು ಜನಿಸಿದ ನಂತರ 42 ದಿನಗಳಲ್ಲಿ 6 ಬಾರಿ ಮಗುವಿನ ಬಳಿ ಹೋಗುತ್ತಾರೆ. ಈಗ ನಾವು ಈ ಸಮಯವನ್ನು 15 ತಿಂಗಳವರೆಗೆ ಹೆಚ್ಚಿಸುತ್ತಿದ್ದೇವೆ. ಇದರಿಂದ ಆಶಾ ಕಾರ್ಯಕರ್ತೆಯರು ಮಕ್ಕಳ ಆರೈಕೆಗಾಗಿ 15 ತಿಂಗಳುಗಳಲ್ಲಿ 11 ಬಾರಿ ಭೇಟಿ ಮಾಡಲು ಸಾಧ್ಯವಾಗುತ್ತದೆ. ನಿಮ್ಮ(ಆಶಾ ಕಾರ್ಯಕರ್ತೆಯರ) ಸ್ನೇಹ ಮತ್ತು ಪ್ರೀತಿಯಿಂದ ಒಬ್ಬರಿಗಿಂತ ಒಬ್ಬರು ಉತ್ತಮ ನಾಗರೀಕರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.

ಯಾವುದೇ ಶಿಶುವಿಗೆ ಜನನದ ನಂತರದ ಮೊದಲ ಸಾವಿರ ದಿನಗಳು ಮಹತ್ವಪೂರ್ಣದ್ದಾಗಿದೆ. ಈ ಸಮಯದಲ್ಲಿ ಸಿಗುವ ಪೌಷ್ಠಿಕ ಆಹಾರ, ಆಹಾರ ಪದ್ಧತಿ ಮಗುವಿನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಅದು ಮಗುವಿನ ಮಾನಸಿಕ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ದೇಶದ ನಾಗರೀಕನನ್ನು ಸರಿಯಾಗಿ ಪೋಷಿಸಿದರೆ ದೇಶದ ಅಭಿವೃದ್ಧಿಯನ್ನು ಯಾರೂ ನಿಲ್ಲಿಸಲಾರರು. ಆದ್ದರಿಂದ ದೇಶದ ಭವಿಷ್ಯದ ಭದ್ರತೆಗಾಗಿ ಪ್ರಬಲವಾದ ಯಾಂತ್ರಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

Trending News