West Bengal Assembly Election 2021: ಪಶ್ಚಿಮ ಬಂಗಾಳದಲ್ಲಿ ಇಂದು ಆರನೇ ಹಂತದ ಮತದಾನ ನಡೆಯಲಿದ್ದು, 43 ವಿಧಾನಸಭಾ ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಗೆ ಆರನೇ ಹಂತದಲ್ಲಿ 4 ಜಿಲ್ಲೆಗಳಲ್ಲಿ 41 ಸ್ಥಾನಗಳಲ್ಲಿ ಮತ ಚಲಾಯಿಸಲಾಗುವುದು. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿರುವ ಮತದಾನ ಸಂಜೆ 6 ರವರೆಗೆ ಮುಂದುವರಿಯಲಿದೆ. ಆರನೇ ಹಂತದಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉತ್ತರ 24 ಪರಗಣ (17 ಸ್ಥಾನಗಳು), ನಾಡಿಯಾ ಜಿಲ್ಲೆ (9 ಸ್ಥಾನಗಳು), ಉತ್ತರ ದಿನಾಜ್‌ಪುರ ಜಿಲ್ಲೆ (9 ಸ್ಥಾನಗಳು) ಮತ್ತು ಪುರ್ಬಾ ಬರ್ಧಮನ್ (8 ಸ್ಥಾನಗಳು)ನಲ್ಲಿ ಇಂದು ಮತದಾನ ನಡೆಯಲಿದೆ.


COMMERCIAL BREAK
SCROLL TO CONTINUE READING

ಈ ಹಂತದ ಪ್ರಮುಖ ಅಭ್ಯರ್ಥಿಗಳಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ತೃಣಮೂಲ ಸಚಿವರಾದ ಜ್ಯೋತಿಪ್ರಿಯ ಮಲ್ಲಿಕ್ ಮತ್ತು ಚಂದ್ರಿಮ ಭಟ್ಟಾಚಾರ್ಯ ಮತ್ತು ಸಿಪಿಐ (ಎಂ) ಮುಖಂಡ ತನ್ಮಯ್ ಭಟ್ಟಾಚಾರ್ಯ ಸೇರಿದ್ದಾರೆ. ಇದಲ್ಲದೆ ಚಿತ್ರ ನಿರ್ದೇಶಕ ರಾಜ್ ಚಕ್ರವರ್ತಿ ಮತ್ತು ನಟಿ ಕೌಸಾನಿ ಮುಖರ್ಜಿ ಕೂಡ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ನಾಲ್ಕು ಜಿಲ್ಲೆಗಳ 43 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14,480 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.


Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್


ಕರೋನಾ ವೈರಸ್‌ನ (Coronavirus) ಎರಡನೇ ಅಲೆಯ ಮಧ್ಯೆ, ಚುನಾವಣಾ ಆಯೋಗದ ಅಧಿಕಾರಿಯೊಬ್ಬರು, ಹಿಂದಿನ ಹಂತಗಳಲ್ಲಿನ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ ಎಂದು ಹೇಳಿದರು. ನಾಲ್ಕನೇ ಹಂತದ ಮತದಾನದಲ್ಲಿ ಏಪ್ರಿಲ್ 10 ರಂದು ಕೂಚ್ ಬೆಹಾರ್‌ನಲ್ಲಿ ಐದು ಜನರು ಮೃತಪಟ್ಟರು. ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಆರನೇ ಹಂತದಲ್ಲಿ ಕೇಂದ್ರ ಪಡೆಗಳ ಕನಿಷ್ಠ 1,071 ತುಕಡಿಗಳನ್ನು ನಿಯೋಜಿಸಲು ಆಯೋಗ ನಿರ್ಧರಿಸಿದೆ ಎಂದು ಅವರು ಹೇಳಿದರು.  


West Bengal) ಮುರ್ಷಿದಾಬಾದ್ ಜಿಲ್ಲೆಯ ಜುಂಗಿಪುರ ಮತ್ತು ಶಂಶರ್‌ಗಂಜ್ ಸ್ಥಾನಗಳಲ್ಲಿ ಏಪ್ರಿಲ್ 22 ರಂದು ನಡೆಯಬೇಕಿದ್ದ ಚುನಾವಣೆಯನ್ನು ಮೇ 13 ರಂದು ಚುನಾವಣೆ ನಡೆಸಲು ಚುನಾವಣಾ ಆಯೋಗವು ನಿರ್ಧರಿಸಿದೆ. ಕರೋನಾ ಸೋಂಕಿನಿಂದ ಮುರ್ಷಿದಾಬಾದ್ ಜಿಲ್ಲೆಯ ಶಂಶರ್‌ಗಂಜ್ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ರೆಜಾಲ್ ಹಕ್ ಏಪ್ರಿಲ್ 15 ರಂದು ನಿಧನರಾದರು. ಅದೇ ರೀತಿ ಕಾಂಗ್ರೆಸ್-ಎಡ ಯುನೈಟೆಡ್ ಫ್ರಂಟ್ ಅಭ್ಯರ್ಥಿ ಜಂಗೀಪುರ ಸ್ಥಾನದ ಪ್ರದೀಪ್ ನಂದಿ ಕೂಡ ಕರೋನಾದಿಂದ ನಿಧನರಾದರು. ಈ ಕಾರಣಕ್ಕಾಗಿ, ಚುನಾವಣಾ ಆಯೋಗವು ಇಲ್ಲಿ ಮತದಾನ ದಿನಾಂಕವನ್ನು ವಿಸ್ತರಿಸಿದೆ.


ಇದನ್ನೂ ಓದಿ - ಕೊರೊನಾ ತಡೆಗೆ 'Break the Chain'ನಡಿ ನಿರ್ಬಂಧಗಳನ್ನು ಘೋಷಿಸಿದ ಮಹಾರಾಷ್ಟ್ರ


180 ಸ್ಥಾನಗಳಿಗೆ ಮತದಾನ ನಡೆದಿದೆ:
ಪಶ್ಚಿಮ ಬಂಗಾಳದ 294 ವಿಧಾನಸಭಾ ಸ್ಥಾನಗಳಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಅದರಲ್ಲಿ ಐದು ಹಂತಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ. ಮಾರ್ಚ್ 27 ರಂದು ರಾಜ್ಯದಲ್ಲಿ ಮೊದಲು ಮಾರ್ಚ್ 27 ರಂದು ಮೊದಲ ಹಂತದಲ್ಲಿ 30 ವಿಧಾನಸಭಾ ಕ್ಷೇತ್ರಗಳು, ಏಪ್ರಿಲ್ 1 ರಂದು ಎರಡನೇ ಹಂತದಲ್ಲಿ 30 ಸ್ಥಾನಗಳು, ಏಪ್ರಿಲ್ 6 ರಂದು ಮೂರನೇ ಸ್ಥಾನದಲ್ಲಿ 31 ಸ್ಥಾನಗಳು, ಏಪ್ರಿಲ್ 10 ರಂದು ನಾಲ್ಕನೇ ಹಂತದಲ್ಲಿ 44 ಸ್ಥಾನಗಳು ಮತ್ತು ಏಪ್ರಿಲ್ 17 ರಂದು ಐದನೇ ಹಂತದಲ್ಲಿ 45 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇಂದು ಆರನೇ ಹಂತದಲ್ಲಿ ಮತದಾನ ನಡೆಯುತ್ತಿದ್ದು ನಂತರ, ಏಪ್ರಿಲ್ 26 ರಂದು ಏಳನೇ ಹಂತದಲ್ಲಿ 36 ಸ್ಥಾನಗಳು ಮತ್ತು ಏಪ್ರಿಲ್ 29 ರಂದು ಎಂಟನೇ ಹಂತದಲ್ಲಿ 35 ಸ್ಥಾನಗಳಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ಫಲಿತಾಂಶಗಳು ಮೇ 2 ರಂದು ಹೊರಬರಲಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.