Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್

Covishield Vaccine Price in India: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ಪ್ರಕಟಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ. ಬೆಲೆ ನಿಗದಿಗೊಳಿಸಿದೆ.

Written by - Yashaswini V | Last Updated : Apr 21, 2021, 01:55 PM IST
  • ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷ 95 ಸಾವಿರ 41 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ
  • ಈ ಅವಧಿಯಲ್ಲಿ 2023 ಜನರು ಪ್ರಾಣ ಕಳೆದುಕೊಂಡಿದ್ದಾರೆ
  • ದೇಶದಲ್ಲಿ ಪ್ರಸ್ತುತ ಕೋವಿಡ್ -19 ರ ಸಕ್ರಿಯ ರೋಗಿಗಳ ಸಂಖ್ಯೆ 21 ಲಕ್ಷ 57 ಲಕ್ಷ 538ಕ್ಕೆ ತಲುಪಿದೆ
Corona Vaccine- Covishield ಲಸಿಕೆಯ ದರ ನಿಗದಿಗೊಳಿಸಿದ ಸೀರಮ್ ಇನ್ಸ್ಟಿಟ್ಯೂಟ್   title=
Covishield Vaccine Price

ಪುಣೆ: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ, ವ್ಯಾಕ್ಸಿನೇಷನ್ ಅಭಿಯಾನವನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಸರ್ಕಾರ ಘೋಷಿಸಿದೆ. ಇದರ ನಂತರ, ಸೀರಮ್ ಸಂಸ್ಥೆ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ಘೋಷಿಸಿದೆ.

ಕೋವಿಶೀಲ್ಡ್ ಲಸಿಕೆ ವೆಚ್ಚ ಎಷ್ಟು?
ಭಾರತ ಸರ್ಕಾರದ ಸೂಚನೆಗಳನ್ನು ಅನುಸರಿಸಿ, ನಾವು ಕೋವಿಶೀಲ್ಡ್ ಲಸಿಕೆಯ (Covishield Vaccine) ಬೆಲೆಯನ್ನು ಪ್ರಕಟಿಸುತ್ತಿದ್ದೇವೆ. ಪ್ರತಿ ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ಬೆಲೆ ನಿಗದಿಗೊಳಿಸಲಾಗಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (Serum Institute of India) ಹೇಳಿಕೆ ನೀಡಿದೆ.

ಇದನ್ನೂ ಓದಿ - Oral Symptoms of Covid: ನಿಮ್ಮ ಬಾಯಿಯಲ್ಲಿ ಕಾಣುವ ಈ ಲಕ್ಷಣ ಕೋವಿಡ್ -19 ಸಂಕೇತವಾಗಿರಬಹುದು, ತಕ್ಷಣವೇ ಟೆಸ್ಟ್ ಮಾಡಿ!

ದೇಶಾದ್ಯಂತ ಇದುವರೆಗೆ 13.01 ಕೋಟಿ ಲಸಿಕೆ ನೀಡಲಾಗಿದೆ:
ಆರೋಗ್ಯ ಸಚಿವಾಲಯದ ಪ್ರಕಾರ, ಕರೋನಾ (Coronavirus) ಸೋಂಕನ್ನು ತಡೆಗಟ್ಟಲು, ದೇಶಾದ್ಯಂತ ಈವರೆಗೆ 13 ಕೋಟಿ 1 ಲಕ್ಷ 19 ಸಾವಿರ 310 ಡೋಸ್ ಲಸಿಕೆಗಳನ್ನು ಅನ್ವಯಿಸಲಾಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ದೇಶಾದ್ಯಂತ ಇದುವರೆಗೆ (ಏಪ್ರಿಲ್ 20) 27 ಕೋಟಿ 10 ಲಕ್ಷ 53 ಸಾವಿರ 392 ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ, ಅದರಲ್ಲಿ ಮಂಗಳವಾರ 16 ಲಕ್ಷ 39 ಸಾವಿರ 357 ಕರೋನಾ ಟೆಸ್ಟ್ ನಡೆಸಲಾಗಿದೆ.

ಇದನ್ನೂ ಓದಿ - Coronavirus: ಈವರೆಗಿನ ಎಲ್ಲಾ ದಾಖಲೆ ಮುರಿದ ಕರೋನಾ ಸುನಾಮಿ

24 ಗಂಟೆಗಳಲ್ಲಿ ದೇಶಾದ್ಯಂತ 2 ಸಾವಿರಕ್ಕೂ ಹೆಚ್ಚು ಸಾವುಗಳು:
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2 ಲಕ್ಷ 95 ಸಾವಿರ 41 ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದರೆ, ಈ ಅವಧಿಯಲ್ಲಿ 2023 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಂತರ, ಭಾರತದಲ್ಲಿ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 1 ಕೋಟಿ 56 ಲಕ್ಷ 16 ಸಾವಿರ 130 ಕ್ಕೆ ಏರಿದೆ ಮತ್ತು 1 ಲಕ್ಷ 82 ಸಾವಿರ 553 ಜನರು ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಪ್ರಸ್ತುತ ಕೋವಿಡ್ -19 ರ ಸಕ್ರಿಯ ರೋಗಿಗಳ ಸಂಖ್ಯೆ 21 ಲಕ್ಷ 57 ಲಕ್ಷ 538ಕ್ಕೆ ತಲುಪಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News