Smriti Irani Pickle Recipe: ರಾಜಕೀಯದ ಜೊತೆಗೆ, ಅಡುಗೆಮನೆಯಲ್ಲೂ ಸ್ಮೃತಿ ಇರಾನಿ ಕೈ ಚಳಕ
Smriti Irani Pickle Recipe: ಕಿರುತೆರೆಯಿಂದ ಕೇಂದ್ರ ಸಚಿವೆ ಆಗುವವರೆಗೆ ಪಯಣ ಬೆಳೆಸಿರುವ ಸ್ಮೃತಿ ಇರಾನಿ ಅವರ ಪರಿಚಯವೇ ಬೇಕಿಲ್ಲ. ಇದೀಗ ಸ್ಮೃತಿ ಇರಾನಿ ತನ್ನ ಬಿಡುವಿಲ್ಲದ ಶೆಡ್ಯೂಲ್‌ನಿಂದ ಸಮಯವನ್ನು ತೆಗೆದುಕೊಂಡು ಉಪ್ಪಿನಕಾಯಿ ಮಾಡುವಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಅದರ ರೆಸಿಪಿಯನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Smriti Irani Pickle Recipe: ಕಿರುತೆರೆಯಿಂದ ಕೇಂದ್ರ ಸಚಿವೆ ಆಗುವವರೆಗೆ ಪಯಣ ಬೆಳೆಸಿರುವ ಸ್ಮೃತಿ ಇರಾನಿ ಅವರ ಪರಿಚಯವೇ ಬೇಕಿಲ್ಲ. ಅವರು ಈಗ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಿದ್ದರೂ ಸಹ, ಅವರು ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ, ಸ್ಮೃತಿ ಇರಾನಿ ತನ್ನ ಬಿಡುವಿಲ್ಲದ ಶೆಡ್ಯೂಲ್‌ನಿಂದ ಸಮಯವನ್ನು ತೆಗೆದುಕೊಂಡು ಉಪ್ಪಿನಕಾಯಿ ಮಾಡುವಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಅದರ ರೆಸಿಪಿಯನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಮೆಟ್ಟಿಲು ಇಳಿಯೋಕು ಈ ಬೆಕ್ಕಿಗೆ ಸೋಮಾರಿತನ: ಏನು ಮಾಡಿದೆ ಅಂತಾ ನೀವೆ ನೋಡಿ
ಚುಮು ಚುಮು ಚಳಿಗೆ ಪ್ರತಿಯೊಬ್ಬರೂ ವಿಶೆಷವಾದ ರುಚಿಯಾದ ಖಾದ್ಯವನ್ನು ಸವಿಯಲು ಬಯಸುತ್ತಾರೆ. ಇದೆಲ್ಲದರ ನಡುವೆ ಉಪ್ಪಿನಕಾಯಿ ಮರೆಯುವುದಾದರೂ ಹೇಗೆ? ಉಪ್ಪಿನಕಾಯಿಯಿಲ್ಲದೇ ಊಟವೇ ಅಪೂರ್ಣ. ಇದೀಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ಹೇಳಿಕೊಟ್ಟಿದ್ದಾರೆ. ತಮ್ಮ ಅಡುಗೆ ಮನೆಯಲ್ಲಿ ಉಪ್ಪಿನಕಾಯಿ ತಯಾರಿಸುತ್ತ ರೆಸಿಪಿಯನ್ನು ವಿವರಿಸಿದ್ದಾರೆ. ಸ್ಮೃತಿ ಇರಾನಿ ಪ್ರಸ್ತುತ ಅಮೇಥಿಯ ಸಂಸದರಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎದುರು ಭರ್ಜರಿ ಗೆಲುವು ಸಾಧಿಸಿದ್ದರು.
ನಟಿ ಕಮ್ ರಾಜಕಾರಣಿ ಸ್ಮೃತಿ ಇರಾನಿ ಅವರು ಮೊದಲು ಮಾವಿನ ಉಪ್ಪಿನಕಾಯಿ ತಯಾರಿಸಿ ನಂತರ ಮಿಕ್ಸ್ ಉಪ್ಪಿನಕಾಯಿ ಹೇಗೆ ತಯಾರಿಸಿದ್ದಾರೆ. Instagram ಸ್ಟೋರಯಲ್ಲಿ ಈ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅದನ್ನು ಅತ್ಯಂತ ಮೋಜಿನ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಇದನ್ನೂ ಓದಿ : ಅಸ್ಸಾಂನಲ್ಲಿ ಭಾರೀ ಅಗ್ನಿ ಅವಘಡ 200ಕ್ಕೂ ಹೆಚ್ಚು ಮನೆ, ಅಂಗಡಿಗಳು ಭಸ್ಮ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.