Cat Funny Video: ಮೆಟ್ಟಿಲು ಇಳಿಯೋಕು ಈ ಬೆಕ್ಕಿಗೆ ಸೋಮಾರಿತನ: ಏನು ಮಾಡಿದೆ ಅಂತಾ ನೀವೆ ನೋಡಿ

Cat Funny Viral Video: ಕೆಲವೊಂದು ಬಾರಿ ನಾವು ಮನೆಯಲ್ಲಿರುವ ಮೆಟ್ಟಿಲುಗಳನ್ನು ಇಳಿಯಲು ಸಹ ಸೋಮಾರಿತನ ಪ್ರದರ್ಶಿಸುತ್ತೇವೆ, ಯಾಕಾದ್ರೂ ಇಳಿಬೇಕು? ಯಾಕಾದ್ರೂ ನಡಿಬೇಕಪ್ಪಾ ಎನ್ನುವಷ್ಟು ಉದಾಸೀನಾವನ್ನು ಕೆಲವರು ತೋರಿಸುತ್ತಾರೆ. ಅಂತೆಯೇ ಇಲ್ಲೊಂದು ಬೆಕ್ಕು ಉದಾಸೀನಾಕ್ಕೆ ಇನ್ನೊಂದು ಹೆಸರು ಎನ್ನುವಂತೆ ಮಾಡಿದೆ.

Written by - Bhavishya Shetty | Last Updated : Nov 24, 2022, 12:34 PM IST
    • ಸೋಮಾರಿತನಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್
    • ಈ ವಿಡಿಯೋದಲ್ಲಿ ಬೆಕ್ಕು ಮೆಟ್ಟಿಲುಗಳಿಂದ ಇಳಿಯಲು ಸಹ ಕಷ್ಟಪಡುತ್ತಿವೆ
    • ಇದನ್ನು ಕಂಡ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ
Cat Funny Video: ಮೆಟ್ಟಿಲು ಇಳಿಯೋಕು ಈ ಬೆಕ್ಕಿಗೆ ಸೋಮಾರಿತನ: ಏನು ಮಾಡಿದೆ ಅಂತಾ ನೀವೆ ನೋಡಿ
cat funny video

Cat Funny Viral Video: ಕೆಲವೊಂದು ಬಾರಿ ಸೋಮಾರಿತನ ನಮ್ಮನ್ನು ಯಾವ ಕೆಲಸ ಮಾಡಲು ಸಹ ಬಿಡುವುದಿಲ್ಲ. ಸೋಮಾರಿತನ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿ ಸೇರಿದಂತೆ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗಳನ್ನೂ ಕಾಡುವ ಸರ್ವೇ ಸಾಮಾನ್ಯ ಭಾವನೆ ಎನ್ನಬಹುದು.

ಇನ್ನು ಸೋಮಾರಿತನಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದರಲ್ಲಿ ಕೆಲವೊಂದಿಷ್ಟು ಸಖತ್ ಫನ್ನಿಯಾಗಿದ್ದು, ನೋಡುಗರನ್ನು ನಕ್ಕು ನಕ್ಕು ಸುಸ್ತಾಗುವಂತೆ ಮಾಡುತ್ತವೆ.

ಇದನ್ನೂ ಓದಿ: ಹುಡುಗನನ್ನು ಕಿಡ್ನಾಪ್ ಮಾಡಿ ಅತ್ಯಾಚಾರ ಮಾಡಿದ ನಾಲ್ವರು ಹುಡುಗಿಯರು..!

ಕೆಲವೊಂದು ಬಾರಿ ನಾವು ಮನೆಯಲ್ಲಿರುವ ಮೆಟ್ಟಿಲುಗಳನ್ನು ಇಳಿಯಲು ಸಹ ಸೋಮಾರಿತನ ಪ್ರದರ್ಶಿಸುತ್ತೇವೆ, ಯಾಕಾದ್ರೂ ಇಳಿಬೇಕು? ಯಾಕಾದ್ರೂ ನಡಿಬೇಕಪ್ಪಾ ಎನ್ನುವಷ್ಟು ಉದಾಸೀನಾವನ್ನು ಕೆಲವರು ತೋರಿಸುತ್ತಾರೆ. ಅಂತೆಯೇ ಇಲ್ಲೊಂದು ಬೆಕ್ಕು ಉದಾಸೀನಾಕ್ಕೆ ಇನ್ನೊಂದು ಹೆಸರು ಎನ್ನುವಂತೆ ಮಾಡಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬೆಕ್ಕು ಮೆಟ್ಟಿಲುಗಳಿಂದ ಇಳಿಯಲು ಸಹ ಕಷ್ಟಪಡುತ್ತಿವೆ. ಇದು ಕಷ್ಟವಲ್ಲ ಸೋಮಾರಿತನ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮೆಟ್ಟಿಲುಗಳಿಂದ ಜಾರಿಕೊಂಡೇ ಬರುತ್ತಿರುವ ಈ ಬೆಕ್ಕನ್ನು ಕಂಡರೆ ಯಾರಿಗಾದರು ನಗು ಬರದೆ ಇರದು.  

ಈ ವಿಡಿಯೋವನ್ನು ನೀವೊಮ್ಮೆ ನೋಡಿ: 

 

ಯೂಟ್ಯೂಬ್ ಚಾನೆಲ್ OTV News ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಬೂದು ಮತ್ತು ಬಿಳಿ ಬಣ್ಣದ ಈ ಬೆಕ್ಕು ನೋಡಲು ಸಖತ್ ಮುದ್ದಾಗಿದೆ. ಆದರೆ ಇದು ಮೆಟ್ಟಿಲುಗಳ ಮೇಲೆ ಮಲಗಿಕೊಂಡು ಅಲ್ಲಿಂದ ಜಾರಿಕೊಂಡು ಕೆಳಗೆ ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜಾರಿಕೊಂಡು ಬರುವಾಗ ಅದರ ದೇಹವು ಜೆಲ್ಲಿಯಂತೆ ಅಲುಗಾಡುತ್ತಿವೆ. ಇದನ್ನು ಕಂಡ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಜೊತೆಗೆ ನಾನಾ ತರದಲ್ಲಿ ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಗುಜರಾತ್ ಮತ್ತು ಇಡೀ ದೇಶವನ್ನು ಹಾಳು ಮಾಡಿದೆ: ನರೇಂದ್ರ ಮೋದಿ

ವ್ಯಕ್ತಿಯೊಬ್ಬರು “ನಾನೊಬ್ಬನೇ ಹೀಗೆ ಅಂದುಕೊಂಡಿದ್ದೆ” ಎಂದು ಬರೆದಿದ್ದಾರೆ. ಇನ್ನೊಬ್ಬರು “ಬೆಕ್ಕು ನೀರಾಗಿದೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. "ನಾನು ಬೆಳಿಗ್ಗೆ ಕೆಲಸಕ್ಕೆ ನನ್ನ ಕಾರಿಗೆ ಹತ್ತುವ ಸಂದರ್ಭದಲ್ಲಿ ಹೀಗೆಯೇ ಕಾಣುತ್ತೇನೆ" ಎಂದು ಮತ್ತೊಬ್ಬರು ತನ್ನ ದಿನಚರಿಯನ್ನು ನೆನಪಿಸಿಕೊಂಡಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News