ನವದೆಹಲಿ: SC Asks For National Plan - ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿಕೆಯನ್ನು ಒಂದು ರಾಷ್ಟ್ರೀಯ ವಿಪತ್ತು ಎಂದು ಘೋಶಿಸಿರುವ ಸರ್ವೋಚ್ಛ ನ್ಯಾಯಾಲಯ, ಇಂತಹ ಪರಿಸ್ಥಿತಿಯಲ್ಲಿ ಮೂಕ ಪ್ರೇಕ್ಷಕನಾಗಿರುವುದು ಸಾಧ್ಯವಿಲ್ಲ ಎಂದಿದೆ.  ಇದಲ್ಲದೆ ಕೊರೊನಾ ನಿರ್ವಹಣೆಗೆ ರಾಷ್ಟ್ರೀಯ ನೀತಿ ರೂಪಿಸುವಂತೆ ಒತ್ತಾಯಿಸಲು ತಾನು ತೆಗೆದುಕೊಂಡಿರುವ  Suo Moto Cognizance, ಹೈಕೋರ್ಟ್ ಗಳಲ್ಲಿನ ಪ್ರಕರಣಗಳನ್ನು ಹತ್ತಿಕ್ಕುವುದು ಎಂದರ್ಥವಲ್ಲ ಎಂದಿದೆ. 


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠ,  ಪ್ರಾದೇಶಿಕ ಮಟ್ಟದಲ್ಲಿ ಸಾಂಕ್ರಾಮಿಕದ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಹೈಕೋರ್ಟ್ ಉತ್ತಮ ಸ್ಥಿತಿಯಲ್ಲಿವೆ ಎಂದು ಹೇಳಿದೆ.


ರಾಷ್ಟ್ರೀಯ ಮಟ್ಟದ ವಿಷಯಗಳಲ್ಲಿ ಹಸ್ತಕ್ಷೇಪ ಅಗತ್ಯ: SC
ಕೆಲ ಪ್ರಕರಣಗಳು ರಾಜ್ಯಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿರುವ ಕಾರಣ ರಾಷ್ಟ್ರೀಯ ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದ ಅವಶ್ಯಕತೆಯಿದೆ ಎಂದು ನ್ಯಾಯಪೀಠ ಹೇಳಿದೆ. "ನಾವು ಪೂರಕ ಪಾತ್ರವನ್ನು ವಹಿಸುತ್ತಿದ್ದೇವೆ, ಪ್ರಾದೇಶಿಕ ಮಿತಿಗಳಿಂದಾಗಿ ಪ್ರಕರಣಗಳನ್ನು ಆಲಿಸಲು ಹೈಕೋರ್ಟ್‌ಗಳಿಗೆ ಏನಾದರೂ ತೊಂದರೆ ಇದ್ದರೆ ನಾವು ಸಹಾಯ ಮಾಡುತ್ತೇವೆ" ಎಂದು ಪೀಠ ಸ್ಪಷ್ಟಪಡಿಸಿದೆ.


ಕರೋನಾದ ಎರಡನೇ ಅಲೆಯ ವಿರುದ್ಧ  (Corona Second Wave India) ದೇಶವು ಹೆಣಗಾಡುತ್ತಿರುವ ಹಿನ್ನೆಲೆ ಗುರುವಾರ ಸೂ ಮೋಟೋ ಕಾಗ್ನಿಜೆನ್ಸ್  ತೆಗೆದುಕೊಂಡಿದ್ದ ಸರ್ವೋಚ್ಛ ನ್ಯಾಯಾಲಯ, ದೇಶಾದ್ಯಂತ ಆಕ್ಸಿಜನ್ ಪೂರೈಕೆ ಹಾಗೂ ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಇದು ಅವಶ್ಯಕವಾಗಿದೆ ಮತ್ತು ಈ ಕುರಿತು ಒಂದು ರಾಷ್ಟ್ರೀಯ ಕ್ರಿಯಾ ಯೋಜನೆ ಸಾದರು ಪಡಿಸಬೇಕಾಗಿದೆ ಎಂದು ಹೇಳಿತ್ತು.


ಇದನ್ನೂ ಓದಿ- ರಾಜ್ಯದಲ್ಲಿ ಇಂದು ರಾತ್ರಿ 9 ರಿಂದ 'ಸಂಪೂರ್ಣ ಲಾಕ್‌ಡೌನ್' : ಯಾವುದುಕ್ಕೆಲ್ಲ ನಿರ್ಬಂಧವಿದೆ?


ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ
ಈ ನಡುವೆ ದೆಹಲಿ ಉಚ್ಛ ನ್ಯಾಯಾಲಯ ದೆಹಲಿಯಲ್ಲಿನ ರೆಮ್ದೆಸಿವಿರ್ ಕೊರತೆಯ ಕುರಿತು ಉತ್ತರಿಸುವಂತೆ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಕೊವಿಡ್ 19 ರೋಗಿಗಳಿಗೆ ದೇಶಾದ್ಯಂತ ವ್ಯಾಪಕ ಮಟ್ಟದಲ್ಲಿ ರೆಮ್ದೆಸಿವಿರ್ ಔಷಧಿಯ ಸಲಹೆ ನೀಡಲಾಗುತ್ತಿರುವ ಸಂದರ್ಭದಲ್ಲಿ ದೆಹಲಿಯಲ್ಲಿ ಈ ಔಷಧಿಯ ಕೊರತೆ ಏಕೆ ಎದುರಾಗಿದೆ ಎಂದು ಮಂಗಳವಾರ ಕೇಂದ್ರ ಹಾಗೂ ಆಪ್ ಸರ್ಕಾರವನ್ನು ನ್ಯಾಯಾಲಯ ಪ್ರಶ್ನಿಸಿದೆ.


ಇದನ್ನೂ ಓದಿ- ಮೇ 2 ರ ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ..!


ರೆಮ್ದೆಸಿವಿರ್ ಔಷಧಿಯನ್ನು ಕೇವಲ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಮಾತ್ರ ನೀಡಲು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಹಾಗೂ ಬೆಡ್ ಗಳು ಇಲ್ಲದಿರುವಾಗ ರೋಗಿಗಳು ಈ ಔಷಧಿಯನ್ನು ಹೇಗೆ ಸೇವಿಸಳು ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿದೆ.


ಇದನ್ನೂ ಓದಿ-RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.