ನವದೆಹಲಿ: WhatsApp Privacy Policy - ವಾಟ್ಸಾಪ್‌ನ ಹೊಸ ಗೌಪ್ಯತಾ ನೀತಿ ಪ್ರಶ್ನಿಸಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (CAIT) ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾ. ಶರದ್ ಅರವಿಂದ್ ಬೊಬ್ಡೆ ನೇತೃತ್ವದ ನ್ಯಾಯಪೀಠ ದೆಹಲಿ ಹೈಕೋರ್ಟ್‌ಗೆ ಹೋಗುವಂತೆ  ಸೂಚಿಸಿದೆ. ವಾಸ್ತವವಾಗಿ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ, ಅಥವಾ CAIT, ಫೇಸ್‌ಬುಕ್ ಮತ್ತು ವಾಟ್ಸಾಪ್‌ನಂತಹ ಆಪರೇಟಿಂಗ್ ಟೆಕ್ ಕಂಪನಿಗಳಿಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.


COMMERCIAL BREAK
SCROLL TO CONTINUE READING

ಜನವರಿ ತಿಂಗಳಿನಲ್ಲಿ ವಾಟ್ಸ್ ಆಪ್ ತನ್ನ ನೂತನ ಗೌಪ್ಯತಾ ನೀತಿಯನ್ನು ಪರಿಚಯಿಸಿತ್ತು. ಇದರಲ್ಲಿ ವಾಟ್ಸ್ ಆಪ್ ತನ್ನು ಹೇಗೆ ತನ್ನ ಬಳಕೆದಾರರ ದತಾಂಶಗಳನ್ನು ಪ್ರಕ್ರಿಯೆಗೊಳಿಸಿ, ಫೇಸ್ ಬುಕ್ ಜೊತೆಗೆ ಹೇಗೆ ಹಂಚಿಕೊಳ್ಳಲಿದೆ ಎಂಬುದನ್ನು ಹೇಳಿಕೊಂಡಿತ್ತು. ಅಷ್ಟೇ ಅಲ್ಲ ತನ್ನ ಈ ಹೊಸ ನೀತಿಯನ್ನು ಒಪ್ಪಿಕೊಳ್ಳಲು ಬಳಕೆದಾರರಿಗೆ ಫೆಬ್ರುವರಿ 8ರವರೆಗೆ ಕಾಲಾವಕಾಶ ನೀಡಿತ್ತು. ಆದರೆ ವಾಟ್ಸ್ ಆಪ್ ನ ಈ ನೂತನ ನಿಯಮಗಳ ಕುರಿತು ಟೀಕೆಗಳು ವ್ಯಕ್ತವಾದ ಹಿನ್ನೆಲೆ ಸ್ಪಷ್ಟನೆ ನೀಡಿದ್ದ ವಾಟ್ಸ್ ಆಪ್, ಫೆಬ್ರುವರಿ 8ರ ನಂತರವೂ ಕೂಡ ಯಾವುದೇ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸಲಾಗುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿತ್ತು. ಜೊತೆಗೆ ಮೇ ತಿಂಗಳಿನ ಬಳಿಕ ತನ್ನ ವಾಣಿಜ್ಯಾತ್ಮಕ ಯೋಜನೆಗಳನ್ನು ಹಿಂಪಡೆಯುವುದಾಗಿ ವಾಟ್ಸ್ ಆಪ್ ಹೇಳಿತ್ತು.


ಇದನ್ನು ಓದಿ- Whatsapp Malware 2021: ಸ್ವಯಂಚಾಲಿತವಾಗಿ ಕಾಂಟ್ಯಾಕ್ಟ್ ಗಳಿಗೆ ವರ್ಗಾವಣೆಯಾಗುವ ವಾಟ್ಸ್ ಆಪ್ ಮಾಲ್ವೇಯರ್ ಬಗ್ಗೆ ಎಚ್ಚರ


ಇದಕ್ಕೂ ಮೊದಲು ವಾಟ್ಸಾಪ್ನ ಹೊಸ ಗೌಪ್ಯತಾ (WhatsApp New Privacy Policy) ನೀತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ (Delhi High Court) ಬುಧವಾರ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ವಾಟ್ಸ್ ಅಪ್ ಗೆ ನೋಟಿಸ್ ಜಾರಿಗೊಳಿಸಿದ್ದು, ಮಾರ್ಚ್ ವೇಳೆಗೆ ಉತ್ತರಿಸುವಂತೆ ಸೂಚಿಸಿದೆ.


ಇದನ್ನು ಓದಿ-WhatsApp ಬಳಕೆದಾರರ ಮೇಲೆ Signal ಕಣ್ಣು ! ಏಕೆ ಈ ಪ್ರಶ್ನೆ?


ವಾಟ್ಸ್ ಆಪ್(WhatsApp) ನ ನೂತನ ಗೌಪ್ಯತಾ ನೀತಿ ಭಾರತೀಯ ದತ್ತಾಂಶ ರಕ್ಷಣೆ ಹಾಗೂ ಖಾಸಗಿತನತ್ವದ ಕಾನೂನಿನಲ್ಲಿರುವ ನ್ಯೂನ್ಯತೆಗಳನ್ನು ಎತ್ತಿ ತೋರಿಸುತ್ತದೆ ಎಂದು ಈ PIL ದಾಖಲಿಸಿರುವ ಸೀಮಾ ಸಿಂಗ್, ಮೇಘನಾ ಸಿಂಗ್ ಹಾಗೂ ವಿಕ್ರಂ ಸಿಂಗ್ ತಮ್ಮ ವಾದ ಮಂಡಿಸಿದ್ದರು. ಇದನ್ನು ಸುನಿಶ್ಚಿತಗೊಳಿಸಲು  ಸಚಿವಾಲಯ ಹಾಗೂ ವಾಟ್ಸ್ ಆಪ್ ಗೆ ನಿರ್ದೇಶನಗಳನ್ನು ನೀಡಲು ಅವರು ನ್ಯಾಯಪೀಠವನ್ನು ಕೋರಿದ್ದರು.  ಅಲ್ಲದೆ ವಾಟ್ಸ್ ಆಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಜೊತೆಗೆ ಹಂಚಿಕೊಳ್ಳುವುದರಿಂದ ತಡೆಯುವ ಆಯ್ಕೆಯನ್ನು ಕಂಪನಿ ಬಳಕೆದಾರರಿಗೆ ನೀಡಬೇಕು ಎಂದಿದ್ದರು.


ಇದನ್ನು ಓದಿ-WhatsApp New Features: WhatsAppನಲ್ಲಿಯೂ ಸಹ ಸೇರ್ಪಡೆಯಾಗಿವೆ ಹೊಸ ವೈಶಿಷ್ಟ್ಯಗಳು