ನವದೆಹಲಿ: WhatsApp New Features - Signal App ನಿಂದ ಸಿಗುತ್ತಿರುವ ಭಾರಿ ಪೈಪೋಟಿಯ ನಡುವೆ WhatsApp Group ವೈಶಿಷ್ಟ್ಯಗಳಲ್ಲಿ ನೂತನ ವೈಶಿಷ್ಟ್ಯೇ ಸೇರಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ ಇನ್ಮುಂದೆ ಬಳಕೆದಾರರಿಗೆ ಈ ಮೊದಲಿಗಿಂತಲೂ ಹೆಚ್ಚು ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಈ ನೂತನ ಅಪ್ಡೇಟ್ ವಾಟ್ಸ್ ಆಪ್ ಅವತಾರಗಳಲ್ಲಿ ಡಿಸ್ಕ್ರಿಪ್ಶನ್, ಹೊಸ ನಿಯಂತ್ರಣಗಳು ಹಾಗೂ ತಂಡದ ಅಡ್ಮಿನ್ ಗಳಿಗೆ ಮೊದಲಿಗಿಂತ ಹೆಚ್ಚು ಅಧಿಕಾರಗಳು ಶಾಮೀಲಾಗಿವೆ.
ಇದನ್ನು ಓದಿ- WhatsApp ಬಳಕೆದಾರರ ಮೇಲೆ Signal ಕಣ್ಣು ! ಏಕೆ ಈ ಪ್ರಶ್ನೆ?
ಗ್ರೂಪ್ ಅಡ್ಮಿನ್ ಗಳಿಗೆ ನೂತನ ಅಧಿಕಾರಗಳು
WhatsApp ನೂತನ ವೈಶಿಷ್ಟ್ಯಗಳು ತಂಡ ರಚಿಸುವವರಿಗೆ ಡಿಸ್ಕ್ರಿಪ್ಶನ್ ಬರೆಯುವವರಿಗೆ ಸ್ವಾತಂತ್ರ್ಯ ನೀಡುವುದರ ಜೊತೆಗೆ ತಂಡದ ಇತರೆ ಸದಸ್ಯರಿಗೂ ಕೂಡ ಅದನ್ನು ಬದಲಾಯಿಸುವ ಅನುಮತಿ ನೀಡಬಹುದಾಗಿದೆ. ಇದಲ್ಲದೆ ಅವರು ನೀಡಿರುವ ಅನುಮತಿಯನ್ನು ತೆಗೆದುಹಾಕಲುಬಹುದು. ತಂಡದ ಐಕಾನ್ ಹಾಗೂ ಸಬ್ಜೆಕ್ಟ್ ಯಾರು ಬದಲಿಸಬಹುದು ಮತ್ತು ಯಾರು ಬದಲಾಯಿಸಬಾರದು ಎಂಬುದನ್ನು ಕೂಡ ಅವರು ನಿಯಂತ್ರಿಸಬಹುದು. ಹೊಸ ವ್ಯವಸ್ಥೆಯ ಅಡಿ ಗ್ರೂಪ್ ಅಡ್ಮಿನ್ ಗಳು ಬೇರೆಯೊಬ್ಬರಿಗೆ ನೀಡಲಾಗಿರುವ ಅಡ್ಮಿನ್ ಅನುಮತಿಯನ್ನು ಕೂಡ ತೆಗೆದುಹಾಕಬಹುದು.
'ಗ್ರೂಪ್ ಕ್ಯಾಪ್ ಅಪ್' ಲಾಭ
WhatsApp ಬಳಕೆದಾರರಿಗೆ ಇದೀಗ ಮೆನ್ಶನ್ ವೈಶಿಷ್ಟ್ಯದ ಲಾಭ ಸಿಗಲಿದ್ದು, ಇದಕ್ಕೆ ಗ್ರೂಪ್ ಕ್ಯಾಪ್ ಅಪ್ ಹೆಸರನ್ನಿಡಲಾಗಿದೆ. ಇದನ್ನು ಬಳಸಿ ಬಳಕೆದಾರರು ಯಾವ ಯಾವ ಸಂದೇಶಗಳಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬುದನ್ನು ತಿಳಿಯಬಹುದು. ಇದಕ್ಕಾಗಿ ಬಳಕೆದಾರರು ಕೇವಲ @ಗುಂಡಿಯನ್ನು ಟೈಪ್ ಮಾಡಬೇಕು. ಈ ಆಯ್ಕೆಯನ್ನು ನಿಮ್ಮ ಚಾಟ್ ಬಾಕ್ಸ್ ಎಡಭಾಗಕ್ಕೆ ನೀಡಲಾಗಿದೆ.
ಇದನ್ನು ಓದಿ- WhatsApp Feature: ವಾಟ್ಸ್ ಆಪ್ ನಲ್ಲಿ ಫಿಂಗರ್ ಪ್ರಿಂಟ್ ಲಾಕ್ ಅಳವಡಿಸುವುದು ಹೇಗೆ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.