ನವದೆಹಲಿ: WhatsApp Vs Signal - WhatsAppನ ನೂತನ ಗೌಪ್ಯತಾ ನೀತಿಯ ಕಾರಣ ಮತ್ತು ಅದಕ್ಕೆ ವಾಟ್ಸ್ ಆಪ್ ನೀಡಿರುವ ಸ್ಪಷ್ಟನೆಯ ಹೊರತಾಗಿಯೂ ಕೂಡ Signal App ಬಳಕೆದಾರರ ಸಂಖ್ಯೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಮಾರುಕಟ್ಟೆಯಲ್ಲಿ WhatsAppಗೆ ಸರಿಸಾಟಿ ಆಯ್ಕೆ ಸಾಬೀತಾಗಲು ಹಾಗೂ ಅದಕ್ಕೆ ತೀವ್ರ ಪೈಪೋಟಿ ನೀಡಲು ಸಿಗ್ನಲ್ ಹೊಸ-ಹೊಸ ವೈಶಿಷ್ಟ್ಯಗಳನ್ನೂ ಪರಿಚಯಿಸುತ್ತಲೇ ಇದೆ. ವಾಟ್ಸ್ ಆಪ್ ನಿಂದ ದೂರಾದ ಬಳಕೆದಾರರನ್ನು ತನ್ನತ್ತ ಸೆಳೆಯುವ ಯಾವುದೇ ಚಾನ್ಸ್ ಸಿಗ್ನಲ್ ಬಿಡುತ್ತಿಲ್ಲ.
ಈ ವೈಶಿಷ್ಟ್ಯಗಳ ಕಾರಣ ಮತ್ತೆ ಸುದ್ದಿಯಲ್ಲಿದೆ Signal
Signal App ಇತ್ತೀಚಿಗೆ ವ್ಯಾಲ್ಯೂ ಅಡಿಶನ್ ಮೂಲಕ ಮಾರುಕಟ್ಟೆಯ ಮೇಲೆ ಪಾರುಪತ್ತ್ಯ ಮೆರೆಯುವ ಪ್ರಯತ್ನದಲ್ಲಿದೆ. ಅತಿ ಹೆಚ್ಚು ಬಳಕೆದಾರರನ್ನು ತನ್ನತ್ತ ಸೆಳೆಯಲು ಈ ಆಪ್ ಹೊಸ ಹೊಸ ವೈಶಿಷ್ಯಗಳನ್ನು ಪರಿಚಯಿಸುತ್ತಿದೆ. ಇದೆ ಪ್ರಯತ್ನದಲ್ಲಿ Signal, WhatsAppಗೆ ಹೋಲಿಕೆಯಾಗುವ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಸೇರಿಸಲಾಗಿರುವ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಇದೀಗ ಸಿಗ್ನಲ್ ತನ್ನ 5.3 ಆವೃತ್ತಿಯಲ್ಲಿ ಅಂಡ್ರಾಯಿಡ್ ಹಾಗೂ iOS ಆಪ್ ಗಳಿಗೆ ಚಾಟ್ ವಾಲ್ ಪೇಪರ್ಸ್ ಸೇರಿಸಿದೆ. ಕರೆಯ ವೇಳೆ ಕಡಿಮೆ ಡೇಟಾ ಬಳಕೆಯಾಗಲು ಸೆಟ್ಟಿಂಗ್ ನಲ್ಲಿ ನೂತನ ವೈಶಿಷ್ಟ್ಯ ಸೇರಿಸಿದೆ.
ಕಂಪನಿ ಟ್ವೀಟ್ ಮಾಡುವ ಮೂಲಕ ಹೊಸ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದೆ
Chat wallpapers have arrived! Customize wallpapers for each of your chats or just set a default background for everyone if your patience is wallpaper thin. Now available in Signal 5.3 for Android and iOS. pic.twitter.com/IxAxQUCm9n
— Signal (@signalapp) January 28, 2021
ಚಾಟ್ ವಾಲ್ಪೇಪರ್ ಗಳ ಚರ್ಚೆ
Signal App ಬಳಕೆದಾರರು ಇದೀಗ ಅಂಡ್ರಾಯಿಡ್ ಹಾಗೂ iOS App ನಲ್ಲಿ ತಮ್ಮ ಚಾಟ್ ವಾಲ್ ಪೇಪರ್ ಗಳನ್ನು ಬದಲಾಯಿಸಬಹುದು. ಈ ವೈಶಿಷ್ಟ್ಯದ ಅಡಿ ಬಳಕೆದಾರರು ಇದೀಗ ಪ್ರತಿಯೊಂದು ಚಾಟ್ ಗಾಗಿ ವಿಭಿನ್ನ ವಾಲ್ ಪೇಪರ್ ಗಳನ್ನು ಅಳವಡಿಸಬಹುದು. ಇದಕ್ಕಾಗಿ ಕೇವಲ ನೀವು ನಿಮ್ಮ ಸಿಗ್ನಲ್ ಆಪ್ ಗೆ ಭೇಟಿ ನೀಡಿ ಅಲ್ಲಿರುವ ಸೆಟ್ಟಿಂಗ್ಸ್ ವಿಭಾಗದಲ್ಲಿ Appearance ಆಯ್ಕೆಯ ಮೇಲೆ ಕ್ಲಿಕ್ಕಿಸಬೇಕು. ನಂತರ ಚಾಟ್ ವಾಲ್ ಪೇಪರ್ ಮೇಲೆ ಕ್ಲಿಕ್ಕಿಸಬೇಕು.
'About' ಆಪ್ಶನ್
Signal ಆಪ್ WhatsApp About ಆಯ್ಕೆಯನ್ನು ಡಿಟ್ಟೋ ಕಾಪಿ ಮಾಡಿದೆ. ಇದು ಬಳಕೆದಾರರಿಗೆ ಕಾಂಟಾಕ್ಟ್ ಹಾಗೂ ಸ್ಟೇಟಸ್ ಸೆಟ್ ಮಾಡುವ ಆಯ್ಕೆ ನೀಡಲಿದೆ. ಸೆಟ್ಟಿಂಗ್ ವಿಭಾಗಕ್ಕೆ ಭೇಟಿ ನೀಡಿ ನೀವು ಇದನ್ನು ಸೆಟ್ ಮಾಡಬಹುದು.
ಇದನ್ನು ಓದಿ- WhatsApp ಚ್ಯಾಟ್ ಹಿಸ್ಟರಿಯನ್ನು Telegramಗೆ ವರ್ಗಾಯಿಸುವುದು ಬಲು ಸುಲಭ , ಇಲ್ಲಿದೆ ಮಾಹಿತಿ
Low Data Mode ಆಯ್ಕೆಯನ್ನು ಸಹ ಸೇರಿಸಲಾಗಿದೆ
SignalApp ತನ್ನ ಸೆಟ್ಟಿಂಗ್ಸ್ ವಿಭಾಗದಲ್ಲಿ Low Data Mode ಆಯ್ಕೆಯನ್ನು ಸಹ ಜೋಡಿಸಿದೆ. ಅಂದರೆ ಇನ್ಮುಂದೆ ನೀವು ತುಂಬಾ ಕಡಿಮೆ ಡೇಟಾ ಬಳಸಿ ಕರೆ ಸೌಲಭ್ಯ ಬಳಸಬಹುದು. ಇದಕ್ಕಾಗಿ ಸಿಗ್ನಲ್ ಬಳಕೆದಾರರಿಗೆ ಮೊಬೈಲ್ ಡೇಟಾ ಅಥವಾ WiFi ಮೂಲಕ ಕಾಲಿಂಗ್ ಸೌಲಭ್ಯ ಸಿಗಲಿದೆ. ಈ ನೂತನ ವೈಶಿಷ್ಟ್ಯ ಸೇರಿಸಲು ಅಂಡ್ರಾಯಿಡ್ ಬಳಕೆದಾರರು ಪ್ರೊಫೈಲ್ ಮೇಲೆ ಟ್ಯಾಪ್ ಮಾಡಬೇಕು. ನಂತರ ಡೇಟಾ ಅಂಡ್ ಸ್ಟೋರೇಜ್ ಆಯ್ಕೆ ಮಾಡಬೇಕು.
ಇದನ್ನುಓದಿ- ಏನಿದು Signal? ಜನರೇಕೆ WhatsApp ತೊರೆಯುತ್ತಿದ್ದಾರೆ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.