ನವದೆಹಲಿ: ಉತ್ತರಾಖಂಡದ ಅನೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಿದ್ದರಿಂದಾಗಿ ರಾಜ್ಯದಲ್ಲಿ ಹಲವಾರು ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ.ಈಗಾಗಲೇ ಗಂಗಾದಲ್ಲಿ ನೀರಿನ ಮಟ್ಟ ಏರಿದೆ ಎಂದು ಎಚ್ಚರಿಕೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ - Covaxin, Covishield ಇವೆರಡರಲ್ಲಿ ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ? ಸಂಶೋಧನೆ ಹೇಳಿದ್ದೇನು?


ಉತ್ತರದಖಂಡ (Uttarakhand) ದ ಗಂಗಾ ಮತ್ತು ಭಾಗೀರಥಿ ನದಿಗಳು ಶನಿವಾರ ಬೆಟ್ಟಗಳಲ್ಲಿ ಮೂರು ದಿನಗಳ ಕಾಲ ಸುರಿಯುತ್ತಿರುವ ಮಳೆಯ ನಂತರ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದವು.ಈ ಎರಡು ನದಿಗಳ ತೀರದಲ್ಲಿರುವ ಹಳ್ಳಿಗಳಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.ನದಿಗಳ ದಂಡೆಯಲ್ಲಿರುವ ಹಳ್ಳಿಗಳ ನಿವಾಸಿಗಳನ್ನು ಜಿಲ್ಲಾಡಳಿತ ನಡೆಸುವ ಆಶ್ರಯ ಮತ್ತು ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!


ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಭಾರಿ ಮಳೆಯಾಗಿದ್ದು, ಶನಿವಾರ ಚಮೋಲಿಯಲ್ಲಿ 142 ಮಿ.ಮೀ ಮಳೆಯಾಗಿದ್ದರೆ, ಕರ್ಣಪ್ರಯಾಗದಲ್ಲಿ 136 ಮಿ.ಮೀ ಮಳೆಯಾಗಿದೆ. ಇದನ್ನು ಪೌರಿ ಜಿಲ್ಲೆಯ ಶ್ರೀ ನಗರದಲ್ಲಿ 128 ಮಿ.ಮೀ, ರುದ್ರಪ್ರಯಾಗದಲ್ಲಿ 103.8 ಮಿ.ಮೀ, ಜೋಶಿಮಠದಲ್ಲಿ 97.2 ಮಿ.ಮೀ ಮತ್ತು  ಋಷಿಕೇಶದಲ್ಲಿ 53 ಮಿ.ಮೀ ಮಳೆಯಾಗಿದೆ.


"ರಸ್ತೆಗಳನ್ನು ಮುಚ್ಚುವುದರ ಜೊತೆಗೆ, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಸಹ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿದೆ" ಎಂದು ಅಲ್ಮೋರಾದ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ರಾಕೇಶ್ ಜೋಶಿ ಪಿಟಿಐ ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಆದರೆ, ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಭೂಕುಸಿತಗಳು ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಮತ್ತು 84 ಮೋಟಾರು ರಸ್ತೆಗಳನ್ನು ದಿಬ್ಬಗಳ ಕಲ್ಲುಮಣ್ಣುಗಳಿಂದ ನಿರ್ಬಂಧಿಸಿವೆ.


ಇದನ್ನೂ ಓದಿ: ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.