ಭಾರತದ ಈ ಹಳ್ಳಿಯಲ್ಲಿ ಪ್ರತಿ ವ್ಯಕ್ತಿಗೂ ಕರೋನಾ ಸೋಂಕು!
ಈ ಗ್ರಾಮದಲ್ಲಿ ಕೋವಿಡ್ -19 ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದೆ.
ಮನಾಲಿ: ಇಡೀ ಪ್ರಪಂಚದಾದ್ಯಂತ ಕರೋನವೈರಸ್ ಕಾಳಗ ಮುಂದುವರೆದಿದೆ. ಈ ಮಧ್ಯೆ ಭಾರತದ ಹಿಮಾಚಲ ಪ್ರದೇಶದ ಲಾಹೌಲ್ ವಾಡಿ ಗ್ರಾಮದ ಪ್ರತಿ ನಾಗರೀಕರೂ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಅದರ ನಂತರ ಹಿಮಾಚಲ ಪ್ರದೇಶದಲ್ಲಿ (Himachal Pradesh) ಕರೋನಾವೈರಸ್ ಸಮುದಾಯ ಪರಿವರ್ತನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ವಾಸ್ತವವಾಗಿ ಲಾಹೌಲ್ ಕಣಿವೆಯ ಥೋರಾಂಗ್ ಗ್ರಾಮದ ಎಲ್ಲಾ ಜನರು ಕರೋನಾ ಸೋಂಕಿಗೆ ಒಳಗಾಗಿದ್ದು ಅಲ್ಲಿನ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಲ್ಲಿ ಕೋವಿಡ್ -19 (Covid 19) ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.
ದೇಶದ ಅನೇಕ ನಗರಗಳಲ್ಲಿ ಕರೋನಾದ ಹೊಸ 'ತರಂಗ', ಈ ಸೇವೆಗಳಿಗೆ ಬ್ರೇಕ್ ಬೀಳುವ ಸಾಧ್ಯತೆ
ಕರೋನಾ ಸಾಂಕ್ರಾಮಿಕ ರೋಗದ ಆರಂಭಿಕ ಹಂತದಲ್ಲಿ ಹಿಮಾಚಲ ಪ್ರದೇಶದಲ್ಲಿ ಕರೋನಾ ಸೋಂಕು ಅಷ್ಟಾಗಿ ಇರಲಿಲ್ಲ. ಆದರೆ ಲಾಕ್‌ಡೌನ್ (Lockdown) ಅನ್ನು ತೆಗೆದುಹಾಕಿದ ನಂತರ ಪ್ರಕರಣಗಳು ವೇಗವಾಗಿ ಬೆಳೆದವು. ಇಲ್ಲಿನ ಗ್ರಾಮವೊಂದು ಸಂಪೂರ್ಣವಾಗಿ ಕರೋನಾ ಹಿಡಿತದಕ್ಕೆ ಸಿಲುಕಿದೆ. ಆದರೆ ಚಳಿಗಾಲದ ಆರಂಭದಲ್ಲಿ ತಲೆದೋರಿರುವ ಈ ಪರಿಸ್ಥಿತಿ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
Coronavirus) ಸಮುದಾಯ ಪರಿವರ್ತನೆಯ ಊಹಾಪೋಹಗಗಳಿಗೆ ಪುಷ್ಟಿ ನೀಡಿದಂತಾಗಿದೆ.
ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ
ಗ್ರಾಮದಲ್ಲಿ ಕರೋನಾ ಹಿಡಿತಕ್ಕೆ ಸಿಲುಕದ ಏಕೈಕ ವ್ಯಕ್ತಿ ಭೂಷಣ್ ಠಾಕೂರ್-
ಲಾಹೌಲ್ ಸ್ಪಿತಿ ಜಿಲ್ಲೆಯ ಈ ಗ್ರಾಮದಲ್ಲಿ 52 ವರ್ಷದ ವ್ಯಕ್ತಿಯೊಬ್ಬರು ಸಾಮಾಜಿಕ ದೂರವನ್ನು ಪ್ರಾಮಾಣಿಕತೆಯಿಂದ ಅನುಸರಿಸಿದರೆ ಕರೋನಾವನ್ನು ತಪ್ಪಿಸಬಹುದು ಎಂದು ತೋರಿಸಿದರು. 52 ವರ್ಷದ ಭೂಷಣ್ ಠಾಕೂರ್ ಇಡೀ ಗ್ರಾಮದಲ್ಲಿ ಕರೋನಾವೈರಸ್ ಹಿಡಿತಕ್ಕೆ ಸಿಲುಕದ ಏಕೈಕ ವ್ಯಕ್ತಿ ಆಗಿದ್ದಾರೆ. ಆದರೆ ಭೂಷಣ್ ಅವರ ಪತ್ನಿ ಮತ್ತು ಇಡೀ ಕುಟುಂಬ ಸದಸ್ಯರಿಗೆ ಕರೋನಾ ದೃಢಪಟ್ಟಿದೆ.
ಪ್ರವಾಸಿಗರಿಗೆ ನಿಷೇಧ-
ಇನ್ನು ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಪ್ರವಾಸಿಗರ ಆಗಮನವನ್ನೂ ನಿಷೇಧಿಸಿದ್ದು ರೋಹ್ಟಾಂಗ್ ಸುರಂಗದ ಉತ್ತರ ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.