ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ

ಆರೋಗ್ಯ ಸೇತು ಆ್ಯಪ್ 'ಬ್ಯಾಕೆಂಡ್ ಕೋಡ್' ಅನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ, ಇದು ಕೋವಿಡ್ -19 ಸೋಂಕುಗಳ ಪತ್ತೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳ ಬಗ್ಗೆ ತಿಳಿಯಲು ಜನರಿಗೆ ಸಹಾಯ ಮಾಡುತ್ತದೆ.

Last Updated : Nov 21, 2020, 07:12 AM IST
  • ಕೇಂದ್ರ ಸರ್ಕಾರ ಈ ಆ್ಯಪ್ ಅನ್ನು ಏಪ್ರಿಲ್ 2 ರಂದು ಬಿಡುಗಡೆ ಮಾಡಿತು.
  • ಬ್ಯಾಕೆಂಡ್ ಕೋಡ್ ನೀಡುವುದರಿಂದ ಜನರು ಅಪ್ಲಿಕೇಶನ್‌ನ ಸಂಪೂರ್ಣ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
  • ಈಗ ಈ ಅಪ್ಲಿಕೇಶನ್ ಅನ್ನು ನಿರ್ವಹಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎಐಸಿ) ಕಾರ್ಯನಿರ್ವಹಿಸುತ್ತಿದೆ.
ಸರ್ಕಾರದಿಂದ Aarogya Setu 'ಬ್ಯಾಕೆಂಡ್ ಕೋಡ್' ಬಿಡುಗಡೆ  title=

ನವದೆಹಲಿ: ಸರ್ಕಾರವು ಶುಕ್ರವಾರ ಆರೋಗ್ಯ ಸೇತು ಆ್ಯಪ್ 'ಬ್ಯಾಕೆಂಡ್ ಕೋಡ್' ಅನ್ನು ಬಿಡುಗಡೆ ಮಾಡಿದೆ. ಇದು ಕೋವಿಡ್ -19 (Covid 19) ಸೋಂಕುಗಳ ಪತ್ತೆ ಮತ್ತು ಅದರ ಗೌಪ್ಯತೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಅಪ್ಲಿಕೇಶನ್‌ನ ಕಾರ್ಯಾಚರಣೆಯನ್ನು ಅರ್ಥಮಾಡಿಕೊಳ್ಳಲು ಜನರಿಗೆ ಸಹಾಯ ಮಾಡುತ್ತದೆ. 

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಹೇಳಿಕೆಯ ಪ್ರಕಾರ, ಆರೋಗ್ಯ ಸೇತು (Aarogya Setu) ಅಪ್ಲಿಕೇಶನ್‌ನ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳ ಕೋಡ್ ಅನ್ನು ಎಲ್ಲಾ ಕೋಡ್‌ಗಳನ್ನು ಹಂಚಿಕೊಳ್ಳುವ ಸರ್ಕಾರದ ನೀತಿಯಡಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು ಮತ್ತು ಈಗ ಬ್ಯಾಕೆಂಡ್ ಮೂಲ ಕೋಡ್ ಅನ್ನು ಬಿಡುಗಡೆ ಮಾಡಲಾಗಿದೆ. 

Aarogya Setu ಅಪ್ಲಿಕೇಶನ್‌ನಲ್ಲಿ ನಿಮ್ಮ ವೈಯಕ್ತಿಕ ಡೇಟಾ ಡಿಲೀಟ್ ಮಾಡಲು ಇಲ್ಲಿದೆ ಸುಲಭ ಮಾರ್ಗ

ಬ್ಯಾಕೆಂಡ್ ಕೋಡ್ ನೀಡುವುದರಿಂದ ಜನರು ಅಪ್ಲಿಕೇಶನ್‌ನ ಸಂಪೂರ್ಣ ಕಾರ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ. ಇದು ನಿಮ್ಮ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಬಗೆಗಿನ ಆತಂಕವನ್ನು ತೆಗೆದುಹಾಕುತ್ತದೆ ಎಂದು ಹೇಳಿಕೆ ನೀಡಲಾಗಿದೆ.

Watch: ಖುದ್ದು Covaxin ಪ್ರಯೋಗಕ್ಕೆ ಒಳಪಟ್ಟ ಹರಿಯಾಣ ಅರೋಗ್ಯ ಸಚಿವ ಅನಿಲ್ ವಿಜ್

ಇ-ಆಡಳಿತ ಅಪ್ಲಿಕೇಶನ್ ಮೂಲ ಕೋಡ್‌ನ ಹಂಚಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಸ್ಥಾಪಿಸಿರುವ ಓಪನ್ ಫೋರ್ಜ್ ಪ್ಲಾಟ್‌ಫಾರ್ಮ್‌ನಲ್ಲಿ ಆರೋಗ್ಯಾ ಸೇತು ಆ್ಯಪ್‌ನ (Aarogya Setu App) ಬ್ಯಾಕೆಂಡ್ ಕೋಡ್ ಅನ್ನು ಸಚಿವಾಲಯ ಬಿಡುಗಡೆ ಮಾಡಿದೆ. "ಆರೋಗ್ಯ ಸೇತು ಆ್ಯಪ್‌ಗೆ ಸಂಬಂಧಿಸಿದಂತೆ ಸರ್ಕಾರದ ಪ್ರಯತ್ನವು ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡುವುದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರ್ಕಾರ ಈ ಆ್ಯಪ್ ಅನ್ನು ಏಪ್ರಿಲ್ 2 ರಂದು ಬಿಡುಗಡೆ ಮಾಡಿತು. ಈಗ ಈ ಅಪ್ಲಿಕೇಶನ್ ಅನ್ನು ನಿರ್ವಹಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎಐಸಿ) ಕಾರ್ಯನಿರ್ವಹಿಸುತ್ತಿದೆ.
 

Trending News