ಆಂಧ್ರಪ್ರದೇಶ : ತಿರುಪತಿಗೆ ಹೋಗಬೇಕು ಎಂದುಕೊಂಡಿರುವ ಭಕ್ತರು ದಯವಿಟ್ಟು ಇಲ್ಲಿ ಗಮನಿಸಿ. ಚಂದ್ರಗ್ರಹಣ ನಿಮಿತ್ತವಾಗಿ ಇದೇ 8ರಂದು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಾಗಿಲನ್ನು 12 ಗಂಟೆಗಳ ಕಾಲ ಮುಚ್ಚಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ರೀತಿಯ ದರ್ಶನ ಸೌಲಭ್ಯಗಳನ್ನು ಮತ್ತು ಆರ್ಜಿತ ಸೇವೆಗಳನ್ನು ರದ್ದುಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಗ್ರಹಣದಿಂದಾಗಿ ನ.8ರಂದು ತಿರುಪತಿಯಲ್ಲಿ ನೀಡಬೇಕಿದ್ದ ಎಸ್‌ಎಸ್‌ಡಿ ಟೋಕನ್‌ಗಳನ್ನು ಸಹ ರದ್ದುಗೊಳಿಸಲಾಗಿದೆ. ಗ್ರಹಣ ಸಮಯದ ನಂತರ ವೈಕುಂಠ-2 ರಿಂದ ಮಾತ್ರ ಭಕ್ತರಿಗೆ ಪ್ರವೇಶ ನೀಡಲಾಗುವುದು. ಇದೇ ತಿಂಗಳ 8ರ ಮಂಗಳವಾರ ಮಧ್ಯಾಹ್ನ 2.39ರಿಂದ 6.27ರವರೆಗೆ ಚಂದ್ರಗ್ರಹಣವಿರುತ್ತದೆ. ಈ ಕಾರಣಕ್ಕಾಗಿ ಶ್ರೀವಾರಿ ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8.40 ರಿಂದ ಸಂಜೆ 7.20 ರವರೆಗೆ ಮುಚ್ಚಲಾಗುವುದು.


ಇದನ್ನೂ ಓದಿ: ಇಸ್ರೇಲ್ ಪ್ರಧಾನಿಯಾಗಿ ಮತ್ತೆ ಬೆಂಜಮಿನ್ ನೆತನ್ಯಾಹು ಆಯ್ಕೆ: ಶುಭಾಶಯ ತಿಳಿಸಿದ ಪ್ರಧಾನಿ ಮೋದಿ


ಸಾಮಾನ್ಯವಾಗಿ ಗ್ರಹಣದ ದಿನಗಳಲ್ಲಿ ಗ್ರಹಣ ಮುಗಿಯುವವರೆಗೆ ಅಡುಗೆ ಮಾಡುವುದಿಲ್ಲ. ತಿರುಮಲದಲ್ಲಿರುವ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನ, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ ಅನ್ನಪ್ರಸಾದ ವಿತರಣೆ ಇರುವುದಿಲ್ಲ. ರಾತ್ರಿ 8.30ರಿಂದ ಭಕ್ತರಿಗೆ ಅನ್ನಪ್ರಸಾದ ವಿತರಣೆ ಆರಂಭವಾಗಲಿದೆ. ಈ ವಿಷಯವನ್ನು ಭಕ್ತರು ಗಮನಿಸಬೇಕು ಎಂದು ಟಿಟಿಡಿ ಅಧಿಕಾರಿಗಳು ಸೂಚಿಸಿದ್ದಾರೆ. ಅಲ್ಲದೆ, ತಿರುಮಲ ಪ್ರವಾಸಕ್ಕೆ ಯಾವುದೇ ತೊಂದರೆಯಾಗದಂತೆ ಯೋಜನೆ ರೂಪಿಸುವಂತೆ ಮನವಿ ಮಾಡಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.