ನವದೆಹಲಿ : ಕೆಲವು ಪಕ್ಷಿಗಳು ಬಹಳ ದೂರದಿಂದಲೇ ತಮ್ಮ ಬೇಟೆಯ ಮೇಲೆ ಕಣ್ಣಿಡುತ್ತವೆ. ಅವಕಾಶ ಸಿಕ್ಕ ತಕ್ಷಣ ಬೇಟೆಯ ಮೇಲೆ ದಾಳಿ ಮಾಡಿ ಬಿಡುತ್ತದೆ. ಇಂತಹ ಹಲವಾರು ವಿಡಿಯೋಗಳು (Viral video) ಜಗತ್ತಿನಲ್ಲಿ ಪ್ರತಿಯೊಬ್ಬರೂ ಅಧಿಕಾರ ಮತ್ತು ಪ್ರಾಬಲ್ಯಕ್ಕಾಗಿ ಹವಣಿಸುತ್ತಿರುತ್ತಾರೆ. ಈ ಜಗತ್ತಿನಲ್ಲಿ ಅಧಿಕಾರ ಇದ್ದರೆ ಎಲ್ಲವೂ ಇದೆ. ಕೈಯಲ್ಲಿ ಅಧಿಕಾರವಿದ್ದು, ನೀವು ಬಲಶಾಲಿಯಾಗಿದ್ದರೆ, ನಿಮ್ಮ ಬದುಕು ಸುಲಭವಾಗುತ್ತದಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ (animal viral video) ಆಗುತ್ತಿದೆ. ಅದರಲ್ಲಿ ಹಕ್ಕಿಯೊಂದು ಏಕಾಂಗಿಯಾಗಿ ಕಂಡ ಕೋಳಿಯ ಮೇಲೆ ದಾಳಿ ಮಾಡಲು ಯತ್ನಿಸಿದೆ. ಕೋಳಿಯ ಮೇಲೆ ಸುಲಭವಾಗಿ ದಾಳಿ ಮಾಡಿ ಗೆದ್ದು ಬಿಡಬಹುದು ಎಂದು ಹಕ್ಕಿ ಅಂದುಕೊಂಡಿತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ.. 


COMMERCIAL BREAK
SCROLL TO CONTINUE READING

ಜಗತ್ತಿನಲ್ಲಿ ಪ್ರತಿಯೊಬ್ಬರೂ ಅಧಿಕಾರ ಮತ್ತು ಪ್ರಾಬಲ್ಯಕ್ಕಾಗಿ ಹವಣಿಸುತ್ತಿರುತ್ತಾರೆ. ಈ ಜಗತ್ತಿನಲ್ಲಿ ಅಧಿಕಾರ ಇದ್ದರೆ ಎಲ್ಲವೂ ಇದೆ. ಕೈಯಲ್ಲಿ ಅಧಿಕಾರವಿದ್ದು, ನೀವು ಬಲಶಾಲಿಯಾಗಿದ್ದರೆ, ನಿಮ್ಮ ಬದುಕು ಸುಲಭವಾಗುತ್ತದೆ. ಇಲ್ಲವಾದರೆ ದುರ್ಬಲರನ್ನು ಈ ಸಮಾಜದಲ್ಲಿ ಮೆಟ್ಟಿ ನಿಲ್ಲುವವರೇ ಹೆಚ್ಚು. ಈ ಅಧಿಕಾರ ದರ್ಪ ಅನ್ನುವುದು ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಲ್ಲೂ (Animal Video) ಇದೆ.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಅದಕ್ಕೆ  ಸಾಕ್ಷಿ (Viral video).


ಇದನ್ನೂ ಓದಿ : Viral Video: ಜಮೀನಿಗೆ ತೆರಳಿ ಕಡಲೆಕಾಯಿ ರುಚಿ ನೋಡಿದ ಪ್ರಧಾನಿ ಮೋದಿ..!


ಕೋಳಿ ಮತ್ತು ಪಕ್ಷಿ ಕಾದಾಟ : 
ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹಕ್ಕಿಯೊಂದು ಹಾರಿ ಕೋಳಿ ಇರುವ ಜಾಗಕ್ಕೆ ಬರುತ್ತಿದೆ. ಕೋಳಿ ಒಬ್ಬಂಟಿಯಾಗಿದೆ ಅಂದು ಕೊಂಡ ಹಕ್ಕಿ ಕೋಳಿ ಮೇಲೆರಗಲು ಬರುತ್ತದೆ. ಆದರೆ ಹಕ್ಕಿ ಕೋಳಿಯ ಮೇಲೆ ದಾಳಿಯಿಡುತ್ತಿದ್ದಂತೆಯೇ, ರಕ್ಷಣೆಗೆ ಹುಂಜ ಧಾವಿಸಿ ಬಿಡುತ್ತದೆ. ಹೀಗೆ ಹುಂಜ ಮಧ್ಯೆ ಪ್ರವೇಶಿಸಿ ಬಿಡುತ್ತದೆ ಎಂದು ಆ ಹಕ್ಕಿ ಕನಸಿನಲ್ಲಿಯೂ ಅಂದು ಕೊಂಡಿರಲಿಕ್ಕಿಲ್ಲ. ನಂತರ ನಡೆಯುವ ಕಾಳಗದಲ್ಲಿ ಹಕ್ಕಿ ಸೋಲೋಪ್ಪಿಕೊಳ್ಳುತ್ತದೆ. ಬಂದ ದಾರಿಗೆ ಸುಂಕ ಇಲ್ಲ ಎಂದು ಕೊಂಡು ಹಕ್ಕಿ ಅಲ್ಲಿಂದ ಹಾರಿ ಹೋಗುತ್ತದೆ (Bird video).  


ಇಬ್ಬರ ಜಗಳದಲ್ಲಿ ಮುಂದೆ ಏನಾಯಿತು ಈ ವಿಡಿಯೋ ನೋಡಿ :


Viral Video: ಪೇಂಟಿಂಗ್ ಮಾಡುವ ಆನೆಯನ್ನು ಎಲ್ಲಾದರೂ ನೋಡಿರುವಿರಾ? ಇಲ್ಲಿದೆ ನೋಡಿ


ಪಕ್ಷಿಯನ್ನು ಓಡಿಸಿದ ಬಳಿಕವು ಹುಂಜ ತನ್ನ ಜೊತೆಗಾತಿಯ ಸುತ್ತಲೂ ಬಹಳ ಹೊತ್ತು  ಸುಳಿದಾಡುವುದನ್ನು ವೀಡಿಯೊದಲ್ಲಿ ಕಾಣಬಹುದು (Video). ಕೆಲ ಹೊತ್ತಿನ ನಂತರ ತನ್ನ ಜೊತೆಗಾತಿ ಸುರಕ್ಷಿತವಾಗಿದೆ ಎನ್ನುವುದು ಖಚಿತವಾದ ಮೇಲೆ, ಹುಂಜ ಅಲ್ಲಿಂದ ತೆರಳುತ್ತದೆ. 


ಈ ವೀಡಿಯೊವನ್ನು ಟ್ವಿಟ್ಟರ್ ನಲ್ಲಿ   Buitengebieden ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿವರೆಗೆ 6 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.