Viral Video: ಜಮೀನಿಗೆ ತೆರಳಿ ಕಡಲೆಕಾಯಿ ರುಚಿ ನೋಡಿದ ಪ್ರಧಾನಿ ಮೋದಿ..!

ಕಡಲೆಕಾಯಿ ರುಚಿ ನೋಡಿದ ಪ್ರಧಾನಿ ಮೋದಿಯವರ ಈ ವಿಡಿಯೋವನ್ನು ಸುದ್ದಿಸಂಸ್ಥೆ ANI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

Written by - Puttaraj K Alur | Last Updated : Feb 6, 2022, 01:34 PM IST
  • ಹೈದರಾಬಾದ್ ನಲ್ಲಿ ICRISAT ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ
  • ಹೈದರಾಬಾದ್ ಪ್ರವಾಸದ ವೇಳೆ ಜಮೀನಿಗೆ ತೆರಳಿ ಕಡಲೆಕಾಯಿ ರುಚಿ ನೋಡಿದ ಪಿಎಂ ಮೋದಿ
  • ಪ್ರೋಟೋಕಾಲ್ ಲೆಕ್ಕಿಸದೆ ಗದ್ದೆಗೆ ತೆರಳಿ ಕಡಲೆಕಾಯಿ ಸವಿದ ಪ್ರಧಾನಿಯವರ ವಿಡಿಯೋ ವೈರಲ್
Viral Video: ಜಮೀನಿಗೆ ತೆರಳಿ ಕಡಲೆಕಾಯಿ ರುಚಿ ನೋಡಿದ ಪ್ರಧಾನಿ ಮೋದಿ..! title=
ಕಡಲೆಕಾಯಿ ರುಚಿ ನೋಡಿದ ಪಿಎಂ ಮೋದಿ

ನವದೆಹಲಿ: ಪ್ರಧಾನಿ ಮೋದಿ ಅವರು ಶನಿವಾರ ಹೈದರಾಬಾದ್‌(PM Modi Hyderabad Visit)ನಲ್ಲಿ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರು. ತಮ್ಮ ಹೈದರಾಬಾದ್ ಪ್ರವಾಸದ ವೇಳೆ ಜಮೀನಿಗೆ ತೆರಳಿ ಕಡಲೆಕಾಯಿ ರುಚಿ ನೋಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ.

ಹೌದು, 1 ದಿನ ಮುಂಚಿತವಾಗಿಯೇ ಪ್ರಧಾನಿ ಮೋದಿ ಹೈದರಾಬಾದ್ ಪವಾಸಕ್ಕೆ ತೆರಳಿದ್ದರು. ಈ ವೇಳೆ ICRISAT(ಅರೆ-ಶುಷ್ಕ ಉಷ್ಣವಲಯಕ್ಕಾಗಿ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ) ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅವರ ಕಣ್ಣು ಇಕ್ರಿಸ್ಯಾಟ್ ಫಾರ್ಮ್‌ ನಲ್ಲಿ ಹೊಸದಾಗಿ ಬೆಳೆದ ಕಡಲೆಕಾಯಿ ಮೇಲೆ ಬಿದ್ದಿದೆ. ಪ್ರೋಟೋಕಾಲ್ ಅನ್ನು ಲೆಕ್ಕಿಸದೆ ಮೋದಿ ಹೊಲಕ್ಕೆ ತೆರಳಿ ಕಡಲೆಕಾಯಿ ರುಚಿ(PM Modi Chana Video) ನೋಡಿದ್ದಾರೆ.  

ಇದನ್ನೂ ಓದಿ: BARC Recruitment 2022: ಗ್ರೂಪ್ ಎ ಹುದ್ದೆಗಳಿಗೆ ವೃತ್ತಿಪರರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ(Narendra Modi) ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಜಮೀನಿನಲ್ಲಿ ಸಂಚರಿಸುತ್ತಾ, ಗಿಡಳಿಂದ ಕೆಲವು ಕಡಲೆ ಬೀಜಗಳನ್ನು ಕಿತ್ತು ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಕಡಲೆಬೀಜಗಳ ರುಚಿ ಸವಿದ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿಯವರು ಗದ್ದೆಯಲ್ಲಿ ಏನು ತಿಂದಿದ್ದಾರೆ ಅನ್ನೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಂತರ್ಜಾಲದಲ್ಲಿ ಚರ್ಚೆ ನಡೆದಿದೆ. ಪ್ರಧಾನಿ ಮೋದಿಯವರು ಒಡೆದು ತಿಂದಿದ್ದು ಏನು ಅಂತಾ ಇಂಟರ್‌ನೆಟ್‌ನಲ್ಲಿ ಜನರು ತೀವ್ರವಾಗಿ ಹುಡುಕಾಟ ನಡೆಸಿದ್ದಾರೆ.   

ಪ್ರಧಾನಿ ಮೋದಿಯವರ ಈ ವಿಡಿಯೋ(PM Modi Viral Video)ವನ್ನು ಸುದ್ದಿಸಂಸ್ಥೆ ANI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಇದರೊಂದಿಗೆ, ‘ಪ್ರಧಾನಿ ಮೋದಿ ಹೈದರಾಬಾದ್‌ನ ಇಕ್ರಿಸ್ಯಾಟ್ ಕ್ಷೇತ್ರದಲ್ಲಿ ಹಸಿರು ಧಾನ್ಯವನ್ನು ಆನಂದಿಸಿದ್ದಾರೆ’ ಎಂಬ ಕ್ಯಾಪ್ಶನ್ ಬರೆಯಲಾಗಿದೆ. ಪಿಎಂ ಮೋದಿ ಅವರು ಕಡಲೆಕಾಯಿ ಕಿತ್ತುಕೊಂಡು ಅದರ ಸಿಪ್ಪೆ ಸುಲಿದ ನಂತರ ತಿನ್ನುತ್ತಾರೆ. ಇದಾದ ಬಳಿಕ ಪ್ರಧಾನಿಯವರು ಕೆಲಕಾಲ ಗದ್ದೆಯತ್ತ ದೃಷ್ಟಿ ಹಾಯಿಸಿ ನಂತರ ನಿಗದಿತ ಕಾರ್ಯಕ್ರಮಕ್ಕೆ ತೆರಳುತ್ತಾರೆ.

ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಎರಡು ದಿನಗಳ ರಾಷ್ಟ್ರೀಯ ಶೋಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News