Challan For Honking In No Horn Place: ಎಲ್ಲರೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಾದ ಒಂದು ವಿಷಯವೆಂದರೆ, ನೀವು ಮೋಟಾರು ವಾಹನದೊಂದಿಗೆ ರಸ್ತೆಯಲ್ಲಿ ಸಂಚರಿಸಬೇಕಾದರೆ ನೀವು ಯಾವಾಗಲೂ ಸಂಚಾರ ನಿಯಮಗಳನ್ನು ಅನುಸರಿಸಬೇಕು. ಯಾವುದೇ ವ್ಯಕ್ತಿಯು ಯಾವುದೇ ರೀತಿಯಲ್ಲಿ ಯಾವುದೇ ರೀತಿಯ ಸಂಚಾರ ನಿಯಮವನ್ನು ಉಲ್ಲಂಘಿಸುವುದು ಕಂಡುಬಂದರೆ, ಅವನು ಕ್ರಮಕ್ಕೆ ಅರ್ಹನಾಗಿರುತ್ತಾನೆ ಮತ್ತು ಆ ವ್ಯಕ್ತಿಯನ್ನು ಅಧಿಕಾರಿಗಳು ಚಲನ್ ಮಾಡಬಹುದು. ಕೆಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಯ ಪ್ರಾವಧಾನ ಕೂಡ ಇದೆ. ವಾಹನದ ಹಾರ್ನ್ ಬಾರಿಸುವುದರಿಂದಲೂ ಕೂಡ ನಿಮಗೆ ಭಾರಿ ದಂಡ ಬೀಳುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತುಗೊಳಿಸಬಹುದೇ? ಹೈಕೋರ್ಟ್ ಹೇಳಿದ್ದೇನು?


'ನೋ ಹಾರ್ನ್ ಜೋನ್' ನಲ್ಲಿ ಹಾರ್ನ್ ಬಾರಿಸಬೇಡಿ
ಹೌದು, ಇದು ಇದು ಹಲವು ಬಾರಿ ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ನಿಮ್ಮ ಕಾರು ಅಥವಾ ಬೈಕಿನ ಹಾರ್ನ್ ಬಟನ್ ಅನ್ನು ಅಗತ್ಯವಿದ್ದಾಗ ಮಾತ್ರ ಬಹಳ ಎಚ್ಚರಿಕೆಯಿಂದ ಬಳಸಿ. ಹಿಂದೆ-ಮುಂದೆ ಯೋಚನೆ ಮಾಡದೆಯೇ ಹಾರ್ನ್ ಬಟನ್ ನೋಕ್ಕಬೇಡಿ. ನಗರ ಪ್ರದೇಶದ ಅನೇಕ ಸ್ಥಳಗಳಲ್ಲಿ ಹಾರ್ನ್ ಬಾರಿಸುವುದನ್ನು ನಿಷೇಧಿಸಲಾಗಿದೆ, ಇವುಗಳನ್ನು ಇಂಗ್ಲಿಷಿನಲ್ಲಿ 'ನೋ ಹಾರ್ನ್ ಪ್ಲೇಸ್' ಎಂದು ಕರೆಯುತ್ತಾರೆ. ಹೀಗಾಗಿ ‘ನೋ ಹಾರ್ನ್ ಜೋನ್’ ಎಂಬ ಫಲಕ ನೋಡಿದಾಗ, ತಕ್ಷಣವೇ ಎಚ್ಚೆತ್ತುಕೊಳ್ಳಿ ಮತ್ತು ಅಂತಹ ಸ್ಥಳಗಳಲ್ಲಿ ಹಾರ್ನ್ ಬಾರಿಸಬೇಡಿ. ಅಪ್ಪಿತಪ್ಪಿಯೂ ಕೂಡ ಇಂತಹ ಪ್ರದೇಶಗಳಲ್ಲಿ ನೀವು ಹಾರ್ನ್ ಬಾರಿಸಿದರೆ ಸಂಚಾರಿ ಪೊಲೀಸರು ನಿಮಗೆ ಚಲನ ವಿಧಿಸಬಹುದು. ಈ ಚಲನ್ ಸಾವಿರಾರು ರೂಪಾಯಿಗಳವರೆಗೆ ಇರುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-ಟ್ರಾಫಿಕ್ ದಂಡದ ಮೇಲೂ ಬಂಪರ್ ಡಿಸ್ಕೌಂಟ್, 1000 ರೂಪಾಯಿ ಫೈನ್ ಹಾಕಿದರೆ ಪಾವತಿ ಮಾಡಬೇಕಾಗಿರುವುದು ಕೇವಲ 250 ರೂ.


ಶಬ್ದ ಮಾಲಿನ್ಯ ಕಡಿಮೆ ಮಾಡಲು ಈ ನಿಯಮಗಳಿವೆ!
ವಿವಿಧ ನಗರಗಳು ಅಥವಾ ವಿವಿಧ ರಾಜ್ಯಗಳಲ್ಲಿ ದಂಡದ ಮೊತ್ತವು ವಿಭಿನ್ನವಾಗಿರಬಹುದು. ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು ಇಂತಹ ಚಲನ್‌ ವಿಧಿಸುವ ನಿಯಮಗಳನ್ನು ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲೆಲ್ಲಿ ‘ನೋ ಹಾರ್ನ್ ಪ್ಲೇಸ್’ ಇದೆಯೋ ಅಲ್ಲೆಲ್ಲ ‘ನೋ ಹಾರ್ನ್ ಜೋನ್’ ಎಂಬ ಫಲಕ ಹಾಕಲಾಗುತ್ತದೆ, ಇದರಿಂದ ಸಂಚಾರದಲ್ಲಿರುವ ಜನರಿಗೆ ಆ ಪ್ರದೇಶಗಳಲ್ಲಿ ಹಾರ್ನ್ ಬಾರಿಸುವುದು ನಿಷೇಧಿಸಲಾಗಿದೆ ಎಂಬುದು ಗೊತ್ತಾಗಲಿ ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.