ಟ್ರಾಫಿಕ್ ದಂಡದ ಮೇಲೂ ಬಂಪರ್ ಡಿಸ್ಕೌಂಟ್, 1000 ರೂಪಾಯಿ ಫೈನ್ ಹಾಕಿದರೆ ಪಾವತಿ ಮಾಡಬೇಕಾಗಿರುವುದು ಕೇವಲ 250 ರೂ.

ಈ ರಿಯಾಯಿತಿ ಯೋಜನೆಯಡಿ, ದ್ವಿಚಕ್ರ ವಾಹನ ಚಾಲಕರು ಒಟ್ಟು ದಂಡದ ಶೇಕಡಾ 25 ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ, ಆದರೆ ಲಘು ಮೋಟಾರು ವಾಹನಗಳು, ಕಾರುಗಳು, ಎಸ್‌ಯುವಿಗಳು ಮತ್ತು ಭಾರೀ ವಾಹನ ಚಾಲಕರು ದಂಡದ ಶೇಕಡಾ 50 ರಷ್ಟು ಪಾವತಿಸಬೇಕಾಗುತ್ತದೆ.

Written by - Ranjitha R K | Last Updated : Feb 24, 2022, 05:01 PM IST
  • ಟ್ರಾಫಿಕ್ ಚಲನ್ ಮೇಲೆ ಬಂಪರ್ ರಿಯಾಯಿತಿ
  • ಒಟ್ಟು ಮೊತ್ತದ ಮೇಲೆ 75% ವರೆಗೆ ಶುಲ್ಕ ರಿಯಾಯಿತಿ
  • ಈ ವಿಶೇಷ ರಿಯಾಯಿತಿಯು ಮಾರ್ಚ್ ಪೂರ್ತಿ ಇರುತ್ತದೆ
ಟ್ರಾಫಿಕ್ ದಂಡದ ಮೇಲೂ ಬಂಪರ್ ಡಿಸ್ಕೌಂಟ್, 1000 ರೂಪಾಯಿ ಫೈನ್ ಹಾಕಿದರೆ ಪಾವತಿ ಮಾಡಬೇಕಾಗಿರುವುದು ಕೇವಲ 250 ರೂ.  title=
ಟ್ರಾಫಿಕ್ ಚಲನ್ ಮೇಲೆ ಬಂಪರ್ ರಿಯಾಯಿತಿ (file photo)

ನವದೆಹಲಿ : ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡದ ಟ್ರಾಫಿಕ್ ಪೊಲೀಸರು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ನೋಂದಣಿ ಸಂಖ್ಯೆಯನ್ನು ಹೊಂದಿರುವ ವಾಹನಗಳಿಗೆ ಟ್ರಾಫಿಕ್ ದಂಡಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದ್ದಾರೆ (discount on traffic fine). ಮೂಲಗಳ ಪ್ರಕಾರ 600 ಕೋಟಿ ರೂಪಾಯಿ ಬಾಕಿ ಇರುವ ದಂಡಗಳನ್ನು ಗುರುತಿಸಿದ ನಂತರ ಈ ಹೊಸ ಘೋಷಣೆ ಮಾಡಲಾಗಿದೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು (traffic police)ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಾನವೀಯತೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ COVID-19  ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಪರಿಹಾರವನ್ನು ನೀಡಲಾಗಿದೆ.

ದ್ವಿಚಕ್ರ ವಾಹನ ಚಾಲಕರಿಗೆ 75% ರಿಯಾಯಿತಿ :
ಈ ರಿಯಾಯಿತಿ ಯೋಜನೆಯಡಿ, ದ್ವಿಚಕ್ರ ವಾಹನ ಚಾಲಕರು ಒಟ್ಟು ದಂಡದ ಶೇಕಡಾ 25 ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ, ಆದರೆ ಲಘು ಮೋಟಾರು ವಾಹನಗಳು, ಕಾರುಗಳು, ಎಸ್‌ಯುವಿಗಳು (SUV)ಮತ್ತು ಭಾರೀ ವಾಹನ ಚಾಲಕರು ದಂಡದ ಶೇಕಡಾ 50 ರಷ್ಟು ಪಾವತಿಸಬೇಕಾಗುತ್ತದೆ. RTC ಅಂದರೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಬಾಕಿ ಇರುವ  ದಂಡದ ಶೇಕಡಾ 30 ರಷ್ಟು ಪಾವತಿಸಬೇಕಾಗುತ್ತದೆ. ತೆಲಂಗಾಣ ಪೊಲೀಸರ (Telangana police)ಪ್ರಕಾರ, ಈ ರಿಯಾಯಿತಿಯ ಲಾಭವನ್ನು ಪಡೆಯಲು ಎಲ್ಲಾ ಚಾಲಕರಿಗೆ ಆನ್‌ಲೈನ್ ಪಾವತಿಯ (Online payment) ಆಯ್ಕೆಯನ್ನು ನೀಡಲಾಗಿದೆ.

ಇದನ್ನೂ ಓದಿ :  PM Ujjwala Yojana : 9 ಕೋಟಿ ಜನತೆಗೆ ಉಚಿತ LPG ಸಂಪರ್ಕ : ನೀವು ಲಾಭ ಪಡೆಯಬಹುದು! ಹೇಗೆ? ಇಲ್ಲಿದೆ ನೋಡಿ

ಒನ್ ಟೈಮ್ ಡಿಸ್ಕೌಂಟ್ : 
ಚಲನ್ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ಸಾಧ್ಯವಾಗದ ಟ್ರಾಫಿಕ್ ಡಿಫಾಲ್ಟರ್‌ಗಳಿಗೆ ಸಂಚಾರ ಪೊಲೀಸರು (traffic police) ಈ ರಿಯಾಯಿತಿಯನ್ನು ಒದಗಿಸಿದ್ದಾರೆ. ಚಾಲಕರ ಮೇಲೆ ವಿಧಿಸಲಾಗಿರುವ ದಂಡ ಪಾವತಿಸಲು  ಒನ್ ಟೈಮ್ ಡಿಸ್ಕೌಂಟ್  (one time disount) ನೀಡಲಾಗುತ್ತಿದೆ. ಮಾರ್ಚ್ 1 ರಿಂದ ಮಾರ್ಚ್ 31 ರ ನಡುವೆ ಸಂಚಾರ ಪೊಲೀಸರು ಈ ವಿಶೇಷ ಅವಕಾಶವನ್ನು ಚಾಲಕರಿಗೆ ನೀಡಲಿದ್ದಾರೆ. ಟ್ರಾಫಿಕ್ ದಂಡವನ್ನು (traffic fine)ಇನ್ನೂ ಪಾವತಿಸದ ಚಾಲಕರು ಮಾರ್ಚ್ ನಲ್ಲಿ ಪಾವತಿಸುವಂತೆ ಸಂಚಾರ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ:  New Ration Card Rule: ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ! ಹೊಸ ನಿಬಂಧನೆಗಳನ್ನು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News