ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತುಗೊಳಿಸಬಹುದೇ? ಹೈಕೋರ್ಟ್ ಹೇಳಿದ್ದೇನು?

High Court on Driving License: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಸಂಚಾರ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಬಹುದೇ? ಈ ವಿಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

Written by - Yashaswini V | Last Updated : Jul 20, 2022, 09:12 AM IST
  • ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತುಗೊಳಿಸಬಹುದೇ?
  • ಟ್ರಾಫಿಕ್ ಅಥವಾ ಸಿವಿಲ್ ಪೊಲೀಸರಿಗೆ ಡ್ರೈವಿಂಗ್ ಲೈಸೆನ್ಸ್ ರದ್ದುಗೊಳಿಸುವ ಹಕ್ಕಿದೆಯೇ?
  • ಡ್ರೈವಿಂಗ್ ಲೈಸೆನ್ಸ್ ಕುರಿತು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತುಗೊಳಿಸಬಹುದೇ? ಹೈಕೋರ್ಟ್ ಹೇಳಿದ್ದೇನು? title=
Calcutta High Court on Driving License

ಡ್ರೈವಿಂಗ್ ಲೈಸೆನ್ಸ್ ಕುರಿತು ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು: ಎಷ್ಟೇ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ನಮ್ಮಲ್ಲಿ ಬಹುತೇಕ ಜನರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಆದರೆ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಸಂಚಾರ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಬಹುದೇ? ಅಥವಾ ಅದನ್ನು ರದ್ದುಗೊಳಿಸಬಹುದೇ? ಈ ಕುರಿತಂತೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. 

ಟ್ರಾಫಿಕ್ ಅಥವಾ ಸಿವಿಲ್ ಪೊಲೀಸರು ಡ್ರೈವಿಂಗ್ ಲೈಸೆನ್ಸ್ ನೀಡುವುದಿಲ್ಲ, ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತು ಅಥವಾ ರದ್ದುಗೊಳಿಸುವ ಹಕ್ಕು ಸಹ ಅವರಿಗೆ ಇರುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಸ್ಪಷ್ಟಪಡಿಸಿದೆ.  ಸಂಚಾರ ಉಲ್ಲಂಘನೆಯ ಸಂದರ್ಭದಲ್ಲಿ ಪೊಲೀಸರು ಆರೋಪಿಯ ಚಲನ್ ಅನ್ನು ಕಡಿತಗೊಳಿಸಬಹುದು ಆದರೆ ಅವರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ- ಆರ್‌ಬಿಐನ ಹೊಸ ಆದೇಶ- ಈ ಬ್ಯಾಂಕ್‌ನಿಂದ 15,000 ಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಿಲ್ಲ

ಏನಿದು ಪ್ರಕರಣ?
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಡಿಎಲ್ ಅಮಾನತುಗೊಳಿಸಬಹುದೇ? ಎಂದು ಪ್ರಶ್ನಿಸಿ ಪ್ರಿಯಾಶಾ ಭಟ್ಟಾಚಾರ್ಯ ಎಂಬುವವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಾಸ್ತವವಾಗಿ,  ಪ್ರಿಯಾಶಾ ಭಟ್ಟಾಚಾರ್ಯ ಅವರು ಮೇ 19, 2022 ರಂದು ಸೌತ್ ಸಿಟಿ ಮಾಲ್‌ನಿಂದ ನ್ಯೂ ಅಲಿಪುರಕ್ಕೆ ಮನೆಗೆ ತೆರಳುತ್ತಿದ್ದರು. ಅದೇ ವೇಳೆ ಅವರ ಕಾರನ್ನು ತಡೆ ಹಿಡಿದ ಪೊಲೀಸರು  ಅತಿ ವೇಗದ ಚಾಲನೆ ಆರೋಪದ ಮೇಲೆ ಅವರ ಡ್ರೈವಿಂಗ್ ಲೈಸನ್ಸ್ ಜಪ್ತಿ ಮಾಡಿದ್ದಾರೆ. ಕೆಲವು ದಿನಗಳ ನಂತರ, ಅವನು ತನ್ನ ಡ್ರೈವಿಂಗ್ ಲೈಸೆನ್ಸ್ ಅನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ಇ-ಮೇಲ್ ಕಳುಹಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದ ಪೊಲೀಸರು ಪ್ರಿಯಾಶಾ ಭಟ್ಟಾಚಾರ್ಯ ಅವರ ಡ್ರೈವಿಂಗ್ ಲೈಸನ್ಸ್ ಅನ್ನು 90 ದಿನಗಳವರೆಗೆ ಅಮಾನತುಗೊಳಿಸಿರುವುದಾಗಿ ಮಾಹಿತಿ ನೀಡಿದ್ದರು.
ಇದನ್ನು ಪ್ರಶ್ನಿಸಿ ಭಟ್ಟಾಚಾರ್ಯ ಕೋರ್ಟ್ ಮೆಟ್ಟಿಲೇರಿದ್ದರು. 

ಪ್ರಿಯಾಶಾ ತನ್ನ ವಕೀಲರಾದ ಫಿರೋಜ್ ಎಡುಲ್ಜಿ ಮತ್ತು ಅಮೃತಾ ಪಂಜಾ ಮೌಲಿಕ್ ಮೂಲಕ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.  ಫಿರೋಜ್ ಎಡುಲ್ಜಿ, ಮೋಟಾರು ವಾಹನ ಕಾಯ್ದೆ ಮತ್ತು ವಿವಿಧ ನ್ಯಾಯಾಲಯಗಳ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ನಿಯಮಗಳ ಉಲ್ಲಂಘನೆಗಾಗಿ ಚಾಲನಾ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸಂಚಾರ ಪೊಲೀಸರಿಗೆ ಇದೆ, ಆದರೆ ನಂತರ ಚಾಲನಾ ಪರವಾನಗಿಯನ್ನು ಮೋಟಾರು ವಾಹನ ಇಲಾಖೆಗೆ ಹಸ್ತಾಂತರಿಸಬೇಕು. ಚಾಲನಾ ಪರವಾನಿಗೆ ನೀಡುವುದು ಮೋಟಾರು ವಾಹನ ಇಲಾಖೆಯೇ ಆಗಿರುವುದರಿಂದ ಪರವಾನಗಿಯನ್ನು ಅಮಾನತುಗೊಳಿಸಬೇಕೋ ಅಥವಾ ರದ್ದುಗೊಳಿಸಬೇಕೋ ಎಂಬುದನ್ನು ನಿರ್ಧರಿಸಬೇಕು ಎಂದು ವಾದ ಮಂಡಿಸಿದ್ದರು. ಕೋಲ್ಕತ್ತಾ ಟ್ರಾಫಿಕ್ ಪೊಲೀಸರು ಸಹ ಪ್ರತಿವಾದ ಮಂಡಿಸಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ- Electric Vehicles: ಎಲೆಕ್ಟ್ರಿಕ್ ವಾಹನ ಖರೀದಿಸಲು ಇದು ಸೂಕ್ತ ಸಮಯವೇ..?

ಎರಡೂ ಕಡೆಯ ವಾದ-ವಿವಾದವನ್ನು ಆಲಿಸಿದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಗಳು,  ಸಂಚಾರಿ ಪೊಲೀಸರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವ ಅಧಿಕಾರ ಇಲ್ಲದಿರುವುದರಿಂದ ಅದನ್ನು ಅಮಾನತುಗೊಳಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದ್ದಾರೆ. ವಶಪಡಿಸಿಕೊಂಡ ಪರವಾನಗಿಗಳನ್ನು ಅವರು ಯಾವುದೇ ಬೆಲೆಯಲ್ಲಿ ಮೋಟಾರು ವಾಹನ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ. ಆ ನಂತರ ಆ ಇಲಾಖೆ ಅರ್ಹತೆ ಮತ್ತು ನ್ಯೂನತೆಗಳ ಆಧಾರದ ಮೇಲೆ ಪರವಾನಗಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಲ್ಕತ್ತಾ ಹೈಕೋರ್ಟ್ ಟ್ರಾಫಿಕ್ ಪೊಲೀಸರಿಗೆ 2 ವಾರಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಅರ್ಜಿದಾರರಿಗೆ  ಹಿಂದಿರುಗಿಸುವಂತೆ ಆದೇಶಿಸಿದೆ. ವಾಹನ ಚಲಾಯಿಸುವಾಗ ಹೆಚ್ಚಿನ ಜವಾಬ್ದಾರಿಯನ್ನು ತೋರಿಸಬೇಕು ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ರೀತಿಯ ತಪ್ಪನ್ನು ಮಾಡಬಾರದು ಎಂದು ನ್ಯಾಯಾಲಯವು ಅರ್ಜಿದಾರರಿಗೆ ಸಲಹೆ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News