ನವದೆಹಲಿ: ಮಹಾರಾಷ್ಟ್ರದಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತ ವಿವಾದದ ನಡುವೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆಗೆ ರಾಜ್ಯ ಸರ್ಕಾರವು ಹೆದರಿದೆ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಮೇ 1 ರಂದು ಔರಂಗಾಬಾದ್ ರ್ಯಾಲಿಗಾಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಜ್ ಠಾಕ್ರೆಯನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದರು,ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುವುದನ್ನು ತಡೆಯುವುದು ಅಗತ್ಯವಾಗಿದೆ ಎಂದು ಹೇಳಿದರು


ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸೌರವ್ ಗಂಗೂಲಿ...? ಗಂಗೂಲಿ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿರುವ ಅಮಿತ್ ಶಾ..!


'ಔರಂಗಾಬಾದ್‌ನಲ್ಲಿ ನಡೆದ ರ್ಯಾಲಿಗಾಗಿ ಮಹಾರಾಷ್ಟ್ರ ಪೊಲೀಸರು 16 ಷರತ್ತುಗಳನ್ನು ಹಾಕಿದ್ದರು, ಅದರಲ್ಲಿ ಅವರು 12 ಅನ್ನು ಉಲ್ಲಂಘಿಸಿದ್ದಾರೆ.ಎರಡು ನ್ಯಾಯಾಲಯಗಳಲ್ಲಿ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್‌ಗಳಿವೆ. ಆದರೂ ಮುಂಬೈ ಪೊಲೀಸರು ಸುಮ್ಮನಿರುವುದೇಕೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ? ಬಹುಶಃ ಸರ್ಕಾರವು ರಾಜ್ ಠಾಕ್ರೆಗೆ ಹೆದರುತ್ತಿರುವಂತೆ ತೋರುತ್ತಿದೆ" ಎಂದು ಸಂಜಯ್ ನಿರುಪಮ್  ಹೇಳಿದ್ದಾರೆ. 


'ಇದಕ್ಕೆ ಸರ್ಕಾರ ಭಯಪಡಬಾರದು ಎಂದು ನಾನು ಆಗ್ರಹಿಸುತ್ತೇನೆ, ದೇಶ ಮತ್ತು ಮಹಾರಾಷ್ಟ್ರದಲ್ಲಿ ಕಾನೂನಿನ ಆಡಳಿತವಿದೆ ಮತ್ತು ಯಾರೇ ಕಾನೂನಿಗೆ ವಿರುದ್ಧವಾಗಿ ಸವಾಲು ಹಾಕುತ್ತಾರೋ ಅವರ ವಿರುದ್ಧ ದೃಢವಾಗಿ ವ್ಯವಹರಿಸಬೇಕು ಎಂದು ಅವರು ಹೇಳಿದರು.


ಇದನ್ನೂ ಓದಿ: IPL 2022 : 'ಸಿಎಸ್‌ಕೆ ಕೆಟ್ಟ ಸ್ಥಿತಿಯನ್ನು ಕಂಡು ಸಿಟ್ಟಿಗೆದ್ದ ಸೆಹ್ವಾಗ್'


ರಾಜ್ ಠಾಕ್ರೆ ಅವರು ಮೇ 1 ರಂದು ಔರಂಗಾಬಾದ್‌ನಲ್ಲಿ ರ್ಯಾಲಿಯನ್ನು ನಡೆಸಿ ಧ್ವನಿವರ್ಧಕಗಳ ವಿಚಾರವಾಗಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಅವರು ಮೇ 3 ಗಡುವನ್ನು ನಿಗದಿಪಡಿಸಿದ್ದರು.ಈ ಗಡುವಿನ ಅಂತ್ಯದ ವೇಳೆಗೆ, ಹನುಮಾನ್ ಚಾಲೀಸಾ ನುಡಿಸಲು ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ಹಾಕಲು ಯತ್ನಿಸಿದ ಆರೋಪದ ಮೇಲೆ ಹಲವಾರು ಎಂಎನ್ಎಸ್ ಕಾರ್ಯಕರ್ತರನ್ನು ಬಂಧಿಸಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.