IPL 2022 : 'ಸಿಎಸ್‌ಕೆ ಕೆಟ್ಟ ಸ್ಥಿತಿಯನ್ನು ಕಂಡು ಸಿಟ್ಟಿಗೆದ್ದ ಸೆಹ್ವಾಗ್'

ಇದೀಗ ಚೆನ್ನೈನ ಕಳಪೆ ಪ್ರದರ್ಶನವನ್ನು ನೋಡಿದ ಅನುಭವಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟೀಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Channabasava A Kashinakunti | Last Updated : May 6, 2022, 05:34 PM IST
  • ಸಿಎಸ್‌ಕೆ ವಿರುದ್ಧ ಸೆಹ್ವಾಗ್ ಆಕ್ರೋಶ
  • ಹೆಚ್ಚಾಗಿ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡಿದ ಧೋನಿ
  • ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಸಿಎಸ್‌ಕೆ
IPL 2022 : 'ಸಿಎಸ್‌ಕೆ ಕೆಟ್ಟ ಸ್ಥಿತಿಯನ್ನು ಕಂಡು ಸಿಟ್ಟಿಗೆದ್ದ ಸೆಹ್ವಾಗ್' title=

Virender Sehwag on CSK : ಐಪಿಎಲ್ ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ (CSK) ಐಪಿಎಲ್ 2022 ನಲ್ಲಿ ತುಂಬಾ ಕಳಪೆ ಪ್ರದರ್ಶನ ತೋರಿಸಿದೆ. ಇದೇ ಕಾರಣದಿಂದ ಈ ತಂಡ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿದೆ. ಮೊದಲು ರವೀಂದ್ರ ಜಡೇಜಾ ತಂಡವನ್ನು ಮುನ್ನೆಡೆಸಿ ಮುಳುಗಿಸಿದರು, ನಂತರ ಟೀಮ್ ನಾಯಕತ್ವ ಕೈಗೆತ್ತಿಕೊಂಡ ಮಹೇಂದ್ರ ಸಿಂಗ್ ಧೋನಿಗೆ ಕೂಡ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದೀಗ ಚೆನ್ನೈನ ಕಳಪೆ ಪ್ರದರ್ಶನವನ್ನು ನೋಡಿದ ಅನುಭವಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟೀಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಸ್‌ಕೆ ವಿರುದ್ಧ ಸೆಹ್ವಾಗ್ ಆಕ್ರೋಶ

ಸಿಎಸ್‌ಕೆ ಕಳಪೆ ಪ್ರದರ್ಶನವನ್ನು ನೋಡಿದ ವೀರೇಂದ್ರ ಸೆಹ್ವಾಗ್ ಈ ತಂಡದ ಕೆಲವು ನಿರ್ಧಾರಗಳನ್ನು ತಪ್ಪು ಎಂದು ಹೇಳಿದ್ದಾರೆ. ಅದರಲ್ಲೂ ಈ ತಂಡ ಆರಂಭದಲ್ಲಿ ರವೀಂದ್ರ ಜಡೇಜಾಗೆ ನಾಯಕತ್ವ ಹಸ್ತಾಂತರಿಸಬಾರದಿತ್ತು ಎಂದು ಸೆಹ್ವಾಗ್ ಸಿಎಸ್‌ಕೆ ಟೀಮ್ ಅನ್ನು ಟೀಕಿಸಿದ್ದಾರೆ, 'ಋತುವಿನ ಆರಂಭದಲ್ಲಿ ಸಿಎಸ್‌ಕೆ ದೊಡ್ಡ ತಪ್ಪು ಮಾಡಿತ್ತು, ಮಹೇಂದ್ರ ಸಿಂಗ್ ಧೋನಿ ಬದಲಿಗೆ ರವೀಂದ್ರ ಜಡೇಜಾ ಈ ತಂಡದ ನಾಯಕರಾಗಿದ್ದು. ಅದು ಸರಿಯಾದ ನಿರ್ಧಾರವಾಗಿರಲಿಲ್ಲ. ಇದಲ್ಲದೇ ಆರಂಭದಲ್ಲಿ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ನೀಡಿದ್ದರೆ ತಂಡಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ, ಏಷ್ಯನ್ ಗೇಮ್ಸ್ 2022 ಮುಂದೂಡಿಕೆ...!

ಇನ್ನು ಮುಂದುವರೆದು ಮಾತನಾಡಿದ ಸೆಹ್ವಾಗ್, ಸಿಎಸ್‌ಕೆ ಆರಂಭದಿಂದಲೂ ಯಾವುದೇ ಸ್ಥಿರವಾದ ಪ್ಲೇಯಿಂಗ್ 11 ಅನ್ನು ಹೊಂದಿರಲಿಲ್ಲ. ಗಾಯಕ್ವಾಡ್ ಅವರಂತಹ ಸ್ಟಾರ್ ಬ್ಯಾಟ್ಸ್‌ಮನ್ ಕಳಪೆ ಪ್ರದರ್ಶನ ನೀಡಿದರು. ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಮೊದಲಿನಿಂದಲೂ ರನ್ ಗಳಿಸಲಿಲ್ಲ ಮತ್ತು ಅಲ್ಲಿಂದ ತಂಡಕ್ಕೆ ಹಿನ್ನಡೆ ಶುರುವಾಯಿತು ಎಂದು ಹೇಳಿದ್ದಾರೆ.

ಕೈ ಚಲ್ಲಿದ ಜಡೇಜಾ

ಐಪಿಎಲ್ 2022 ನಲ್ಲಿ ಸಿಎಸ್‌ಕೆಯ ನಯಾ ಅವರನ್ನು ಈಗಾಗಲೇ ರವೀಂದ್ರ ಜಡೇಜಾ ಮುಳುಗಿಸಿದ್ದಾರೆ. ಋತುವಿನ ಮೊದಲ ಪಂದ್ಯಕ್ಕೂ ಮುನ್ನವೇ ಜಡೇಜಾ ಈ ತಂಡದ ನಾಯಕತ್ವವನ್ನು ಪಡೆದರು. ಜಡೇಜಾ 8 ಪಂದ್ಯಗಳಲ್ಲಿ ತಂಡದ ನಾಯಕರಾಗಿದ್ದರು. ಇದರಲ್ಲಿ ಸಿಎಸ್ ಕೆ ತಂಡ ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಉಳಿದ 6 ಪಂದ್ಯಗಳಲ್ಲಿ ಈ ತಂಡ ಸೋಲಬೇಕಾಯಿತು.

ಹೆಚ್ಚಾಗಿ ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡಿದ ಧೋನಿ

ಜಡೇಜಾ ನಾಯಕತ್ವದಲ್ಲಿ ಹೆಚ್ಚು ಸಕ್ರಿಯರಾಗಿ ಕಾಣಲಿಲ್ಲ ಮತ್ತು ಅವರು ಧೋನಿಯ ಕೈಗೆ ಎಲ್ಲವನ್ನೂ ನೀಡುವ ಮೂಲಕ ಹೆಚ್ಚಾಗಿ ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರನಿಗೆ ನಾಯಕತ್ವದ ಅಧಿಕಾರ ಇಲ್ಲ ಎಂಬುದು ಸ್ಪಷ್ಟವಾಗಿ ತಿಳಿಯಬಹುದು ಎಂದು ಹೇಳಿದರು. ಯಾವಾಗ ಈ ಆಟಗಾರ ಧೋನಿಯೊಂದಿಗೆ ತಂಡವನ್ನು ನಡೆಸಲಾಗಲಿಲ್ಲವೋ, ಆಗ ಈ ಆಟಗಾರನನ್ನು ಆಡಿಸುವುದು ತುಂಬಾ ಕಷ್ಟ ವಾಯಿತು ಎಂದರು.

ಇದನ್ನೂ ಓದಿ : GT vs MI: ಇಂದು ʼಅಗ್ರʼ ಗುಜರಾತ್‌ ಟೈಟಾನ್ಸ್‌ಗೆ ಮುಂಬೈ ಮುಖಾಮುಖಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News