ನವದೆಹಲಿ: ಯುಜಿಸಿ ಶನಿವಾರದಂದು  (ಫೆಬ್ರವರಿ 19, 2022) ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಡಿಸೆಂಬರ್ 2020 ಮತ್ತು ಜೂನ್ 2021 ಪರೀಕ್ಷೆಗಳ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಯುಜಿಸಿಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: By2Love: ಧನ್ವೀರ್‌-ಶ್ರೀಲೀಲಾ 'ಬೈ ಟು ಲವ್'ಗೆ ಪ್ರೇಕ್ಷಕ ಪ್ರಭು ಫಿದಾ.!


ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಡಿಸೆಂಬರ್-2020 UGC-NET ಪರೀಕ್ಷೆಯು ವಿಳಂಬವಾಗಿದೆ ಎಂಬುದು ಗಮನಾರ್ಹ. ವಿಳಂಬದ ನಂತರ, ಡಿಸೆಂಬರ್ 2020 ಮತ್ತು ಜೂನ್ 2021 ರ UGC-NET ಸೈಕಲ್‌ಗಳನ್ನು ನವೆಂಬರ್ 20, 2021 ಮತ್ತು ಜನವರಿ 5, 2022 ರ ನಡುವೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಒಟ್ಟಿಗೆ ನಡೆಸಿತು.UGC-NET  ಪರೀಕ್ಷೆಯನ್ನು ದೇಶದ 239 ನಗರಗಳಲ್ಲಿ 837 ಕೇಂದ್ರಗಳಲ್ಲಿ 81 ವಿಷಯಗಳಲ್ಲಿ ನಡೆಸಲಾಯಿತು.ಮೂರು ಹಂತಗಳಲ್ಲಿ ನಡೆದ UGC-NET ಪರೀಕ್ಷೆಗೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.


ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಗೆ ಗುಡ್ ನ್ಯೂಸ್.. ZEE5 ಒಟಿಟಿಯಲ್ಲಿ ಈ ದಿನದಂದು 'ದೃಶ್ಯ-2' ಸ್ಟ್ರೀಮಿಂಗ್!


UGC-NET ನ ಮೊದಲ ಹಂತವನ್ನು ನವೆಂಬರ್ 20, 2021 ರಿಂದ ಡಿಸೆಂಬರ್ 5, 2021 ರವರೆಗೆ ನಡೆಸಿದರೆ, ಮುಂದಿನದು ಡಿಸೆಂಬರ್ 23 ಮತ್ತು ಡಿಸೆಂಬರ್ 27, 2021 ರ ನಡುವೆ ನಡೆಯಿತು. ಕೊನೆಯ ಹಂತವನ್ನು ಜನವರಿ 4 ರಿಂದ ಜನವರಿ 5, 2022 ರವರೆಗೆ ನಡೆಸಲಾಯಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.