ಅನ್‌ಲಾಕ್ 2ವೇಳೆ ಯಾವ್ಯಾವುದಕ್ಕೆ ವಿನಾಯಿತಿ? ಯಾವುದಕ್ಕೆ ನಿರ್ಬಂಧ?
ಅನ್‌ಲಾಕ್ 2ನಲ್ಲಿ ಕಂಟೈನ್ಮೆಂಟ್ ವಲಯಗಳಲ್ಲಿನ ಚಟುವಟಿಕೆಗಳು ಹೇಗಿರಬೇಕೆಂದು ತಿಳಿಸಲಾಗಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಭಿಪ್ರಾಯದ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ನವದೆಹಲಿ: ಇಂದಿಗೆ ಅನ್‌ಲಾಕ್ 1 ಮುಕ್ತಾಯವಾಗಿ ನಾಳೆಯಿಂದ ಅನ್‌ಲಾಕ್ 2 (Unlock 2) ಜಾರಿಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಅನ್‌ಲಾಕ್ 2 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅನ್‌ಲಾಕ್ 2ನಲ್ಲಿ ಯಾವ ನಿರ್ಬಂಧಗಳಿರಲಿವೆ? ಯಾವ್ಯಾವುದಕ್ಕೆ ವಿನಾಯಿತಿಗಳಿರಲಿವೆ? ಎಂಬ ವಿವರ ಇಲ್ಲಿದೆ.
ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ; ಏನು ಮಾತನಾಡಬಹುದು?
ಅನ್‌ಲಾಕ್ 2ನಲ್ಲಿ ಕಂಟೈನ್ಮೆಂಟ್ ವಲಯಗಳಲ್ಲಿನ ಚಟುವಟಿಕೆಗಳು ಹೇಗಿರಬೇಕೆಂದು ತಿಳಿಸಲಾಗಿದೆ. ಹಂತಹಂತವಾಗಿ ಚಟುವಟಿಕೆಗಳು ಕಾರ್ಯಾರಂಭವಾಗುವ ಪ್ರಕ್ರಿಯೆ ವಿಸ್ತರಣೆಯಾಗಿದೆ. ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಅಭಿಪ್ರಾಯದ ಮೇರೆಗೆ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಅನ್‌ಲಾಕ್ 2 ಮುಖ್ಯಾಂಶಗಳು:
ಶಾಲಾ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು ಜುಲೈ 31ರವರೆಗೂ ಸ್ಥಗಿತ ಮುಂದುವರಿಕೆ.
ಆನ್‌ಲೈನ್ ಮತ್ತು ದೂರ ಶಿಕ್ಷಣಕ್ಕೆ ಅನುಮತಿ ನೀಡಬಹುದು.
ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಸಂಚಾರ ಇಲ್ಲ.
ಆದರೆ ಗೃಹ ಸಚಿವಾಲಯ ಅನುಮತಿ ನೀಡಿದ ವಿಮಾನಯಾನಕ್ಕೆ ಅವಕಾಶ ಇರುತ್ತದೆ
ಮೆಟ್ರೋ ಸಂಚಾರದ ನಿರ್ಬಂಧ ಮುಂದುವರಿಯುತ್ತದೆ.
ಸಿನಿಮಾ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಎಂಟರ್ಟೈನ್ಮೆಂಟ್ ಪಾರ್ಕ್, ಥಿಯೇಟರ್, ಬಾರ್, ಆಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಹೆಚ್ಚು ಜನ ಸೇರುವ ಸ್ಥಳಗಳ ಸ್ಥಗಿತ ಮುಂದುವರಿಯುತ್ತದೆ.
ಈಗಿನಂತೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಹೆಚ್ಚು ಜನ ಸೇರುವ ಕಾರ್ಯಕ್ರಮ ಮಾಡುವಂತಿಲ್ಲ.
ರೈಲು ಸಂಚಾರ ಹಾಗೂ ದೇಶಿಯ ವಿಮಾನ ಈಗಿನಂತೆ ನಿಯಮಿತವಾಗಿ ಮಾತ್ರ ಕಾರ್ಯಾಚರಣೆ ಮಾಡಲಿವೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ದೇಶಾದ್ಯಂತ ಜನರ ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ನಿರ್ದೇಶಿಸಲಾಗಿದೆ ಜೊತೆಗೆ ರಾತ್ರಿ ಕರ್ಫ್ಯೂ ಮುಂದುವರೆಸಲಾಗುತ್ತಿದೆ.
Covid-19: ದೆಹಲಿಯ ಆಸ್ಪತ್ರೆಗಳಲ್ಲಿ 40% ಬೆಡ್‌ಗಳ ಹೆಚ್ಚಳ- ಸಿಎಂ ಅರವಿಂದ ಕೇಜ್ರಿವಾಲ್
ಇದಲ್ಲದೆ ಅನ್‌ಲಾಕ್ 2 ವೇಳೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ. ಅವು ಯಾವ್ಯಾವು ಎಂದರೆ...
ಸಾರ್ವಜನಿಕ ಸ್ಥಳಗಳಲ್ಲಿ, ಕಚೇರಿಗಳಲ್ಲಿ ಹಾಗೂ ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.
ಕನಿಷ್ಠ 6 ಅಡಿ ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿರಲಿದೆ.
ಅಂಗಡಿ ಅಥವಾ ಮತ್ತಿತರ ವಾಣಿಜ್ಯ ಮಳಿಗೆಗಳಲ್ಲಿ ಒಮ್ಮೆಲೆ 5ಕ್ಕಿಂತ ಹೆಚ್ಚಿನ ಜನ ಇರುವಂತಿಲ್ಲ.
ಮದುವೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಪಾಲ್ಗೊಳ್ಳುವಂತಿಲ್ಲ.
ಅಂತ್ಯಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ಗುಟ್ಕಾ, ಲಿಕ್ಕರ್, ತಂಬಾಕು ಸೇವನೆ ನಿಷೇಧ ಮಾಡಬೇಕು.