Covid-19: ದೆಹಲಿಯ ಆಸ್ಪತ್ರೆಗಳಲ್ಲಿ 40% ಬೆಡ್‌ಗಳ ಹೆಚ್ಚಳ- ಸಿಎಂ ಅರವಿಂದ ಕೇಜ್ರಿವಾಲ್

ಸಿಎಂ ಕೇಜ್ರಿವಾಲ್ ಮಾತನಾಡಿ, 'ಆಸ್ಪತ್ರೆಗಳಲ್ಲಿ ಶೇಕಡಾ 40 ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಹದಿಮೂರುವರೆ ಸಾವಿರ ಹಾಸಿಗೆಗಳಿವೆ ಎಂದು ಮಾಹಿತಿ ನೀಡಿದ್ದಾರೆ.

Last Updated : Jun 27, 2020, 01:36 PM IST
Covid-19: ದೆಹಲಿಯ ಆಸ್ಪತ್ರೆಗಳಲ್ಲಿ 40% ಬೆಡ್‌ಗಳ ಹೆಚ್ಚಳ- ಸಿಎಂ ಅರವಿಂದ ಕೇಜ್ರಿವಾಲ್ title=

ನವದೆಹಲಿ: ರಾಜ್ಯದ  ಕರೋನಾವೈರಸ್ (Coronavirus) ಸ್ಥಿತಿ-ಗತಿ ಕುರಿತಂತೆ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮೇ 15ರ ನಂತರ ದೆಹಲಿಯಲ್ಲಿ ಕರೋನಾ ವೇಗವಾಗಿ ಹೆಚ್ಚಾಗಿದೆ. ದೆಹಲಿಯಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಕರೋನಾ ಅಂಕಿ ಅಂಶಗಳು ಹೆಚ್ಚಾಗಿದೆ. ಲಾಕ್‌ಡೌನ್‌ನಿಂದಾಗಿ ಕರೋನಾವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ  ಕೋವಿಡ್-19 (Covid-19) ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಗೂ ಚಿಕಿತ್ಸೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಅರವಿಂದ್ ಕೇಜ್ರಿವಾಲ್ ಆಸ್ಪತ್ರೆಗಳಲ್ಲಿ ಶೇಕಡಾ 40ರಷ್ಟು ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಹದಿಮೂರುವರೆ ಸಾವಿರ ಹಾಸಿಗೆಗಳಿವೆ. ಅರ್ಧಕ್ಕಿಂತ ಹೆಚ್ಚು ಹಾಸಿಗೆಗಳು ಇಲ್ಲಿ ಖಾಲಿಯಾಗಿವೆ. 'ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ' ಎಂದು ಹೇಳಿದರು.

ಜಗತ್ತಿನಲ್ಲಿ ಕರೋನಾ ವೇಗವಾಗಿ ಹರಡುತ್ತಿರುವಾಗ ಇತರ ದೇಶಗಳಲ್ಲಿ ಸಿಕ್ಕಿಬಿದ್ದ ಭಾರತೀಯರು ತಮ್ಮ ದೇಶಗಳಿಗೆ ಬರಲು ಬಯಸುವ ನಾಗರೀಕರಿಗಾಗಿ ಕೇಂದ್ರ ಸರ್ಕಾರವು ವಿಮಾನ ಹಾರಾಟಕ್ಕೆ ವ್ಯವಸ್ಥೆ ಮಾಡಿ ಅವರನ್ನು ವಾಪಸ್ ಕರೆಸಿತು. ಮಾರ್ಚ್ ತಿಂಗಳಲ್ಲಿ 35 ಸಾವಿರ ಜನರು ದೆಹಲಿಗೆ (Delhi) ಬಂದರು, ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡಲಾಯಿತು. ಈ ಸಮಯದಲ್ಲಿ ಅನೇಕರನ್ನು ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರನ್ನು ಮನೆಗೆ ಕಳುಹಿಸಲಾಗಿದೆ. ಆದರೆ ದುರದೃಷ್ಟವಶಾತ್ ಹೋಂ ಕ್ವಾರಂಟೈನ್ ನಲ್ಲಿದ್ದವರಲ್ಲಿ ಕೆಲವರಿಂದ ಕರೋನಾ ಹರಡಿತು. ಮೇ ಅಂತ್ಯದಲ್ಲಿ ಲಾಕ್‌ಡೌನ್ ತೆರೆದಾಗ, ಈಗ ಕರೋನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದೆ ಎಂದು ಕೇಜ್ರಿವಾಲ್ ತಿಳಿಸಿದರು.

ಜೂನ್ ಮೊದಲ ವಾರದಲ್ಲಿಯೇ ರಾಜ್ಯದಲ್ಲಿ ಹಾಸಿಗೆಗಳ ಕೊರತೆಯನ್ನು ನಾವು ನೋಡಲಾರಂಭಿಸಿದ್ದೇವೆ ಎಂದು ತಿಳಿಸಿದ ಸಿಎಂ ಕೇಜ್ರಿವಾಲ್ ಈ ಸಮಯದಲ್ಲಿ ನಮಗೆ ಕೇವಲ ಎರಡು ಆಯ್ಕೆಗಳಿವೆ. ಒಂದೋ ಲಾಕ್‌ಡೌನ್ (Lockdown) ಅನ್ನು ಮರುಸ್ಥಾಪಿಸುವುದು ಅಥವಾ ಕರೋನಾ ವಿರುದ್ಧ ಹೋರಾಡುವುದು ಎಂದು ತಿಳಿಸಿದರು.

Trending News