ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ; ಏನು ಮಾತನಾಡಬಹುದು?

ದೇಶದಲ್ಲಿ  COVID-19  ಶುರುವಾದ ಬಳಿಕ ಇದು ಪ್ರಧಾನ ಮಂತ್ರಿ ಮಾಡುತ್ತಿರುವ ಆರನೇ ಭಾಷಣವಾಗಿದೆ. 

Yashaswini V Yashaswini V | Updated: Jun 30, 2020 , 06:24 AM IST
ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಮೋದಿ; ಏನು ಮಾತನಾಡಬಹುದು?

ನವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಅವರು ಮಾತನಾಡಬಹುದು ಎಂಬ ಕುತೂಹಲ ನಿರ್ಮಾಣವಾಗಿದೆ. ಇಂದಿಗೆ ಅನ್ ಲಾಕ್ 1 ಮುಕ್ತಾಯವಾಗಿ ನಾಳೆಯಿಂದ ಅನ್ ಲಾಕ್ 2 ಜಾರಿಗೊಳ್ಳಲಿದೆ.‌ ಜೊತೆಗೆ ದೇಶದಲ್ಲಿ ಕೋವಿಡ್-19 (COVID-19)  ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ  ಮೋದಿ (Narendra Modi) ಭಾಷಣ ಮಾಡಬಹುದು ಎಂದು ಹೇಳಲಾಗುತ್ತಿದೆ. 

ಅಲ್ಲದೆ ಭಾರತ-ಚೀನಾ (Indo-China) ಗಡಿಯ ಗಾಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದರ ಬಳಿಕವೂ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಗಡಿಪ್ರದೇಶದಲ್ಲಿ ಎರಡೂ ದೇಶಗಳ ಸೇನಾ ಬಲಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿವೆ. ಇದರ ಬಗ್ಗೆಯೂ ಮಾತನಾಡಬಹುದು.

ಅನ್ಲಾಕ್ 2 ಕುರಿತ ಕೇಂದ್ರ ಗೃಹ ಸಚಿವಾಲಯದ (MHA) ಮಾರ್ಗಸೂಚಿಗಳನ್ನು ಹೊರ ಬೀಳುತ್ತಿದ್ದಂತೆ  "ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ" ಎಂದು ಪ್ರಧಾನಿ ಕಚೇರಿ ಸೋಮವಾರ ರಾತ್ರಿ ಟ್ವೀಟ್ ಮಾಡಿದೆ.

ಚೀನಾ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಶಾಕ್

ದೇಶದಲ್ಲಿ  COVID-19  ಶುರುವಾದ ಬಳಿಕ ಇದು ಪ್ರಧಾನ ಮಂತ್ರಿ ಮಾಡುತ್ತಿರುವ ಆರನೇ ಭಾಷಣವಾಗಿದೆ. ಕರೋನಾವೈರಸ್ (Coronavirus)  ಪ್ರೇರಿತ ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆಯನ್ನು ಹೆಚ್ಚಿಸಲು ಮೋದಿ ಮೇ 12 ರಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನ್ನಾಡಿದ್ದರು. ಆಗ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರು.

ಕಳೆದ ಭಾನುವಾರ ತಮ್ಮ ಮಾಸಿಕ "ಮನ್ ಕಿ ಬಾತ್" ಭಾಷಣದಲ್ಲಿ, ಲಡಾಖ್ನಲ್ಲಿ ತನ್ನ ಭೂಪ್ರದೇಶದ ಮೇಲೆ ಕೆಟ್ಟ ಕಣ್ಣು ಹಾಕುವವರಿಗೆ ಭಾರತ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದ್ದರು. ಜೊತೆಗೆ COVID-19 ವಿಷಯದಲ್ಲಿ ಜನರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದರು, ಹಾಗೆ ಮಾಡದಿರುವುದು ಅವರ ಜೀವ ಮತ್ತು ಇತರರ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಒತ್ತಿ ಹೇಳಿದ್ದರು.

ಮೋದಿ ಸರ್ಕಾರದ 5 ಪ್ರಮುಖ ನಿರ್ಧಾರದಿಂದ ಕೋಟ್ಯಾಂತರ ಜನರಿಗೆ ಸಿಗಲಿದೆ ಜಬರ್ದಸ್ತ್ ಲಾಭ

ಜೂನ್ 18ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಂವಾದದ ನಡೆಸಿದ್ದ ಅವರು, COVID-19 ಸಾಂಕ್ರಾಮಿಕ ಮತ್ತು ರಾಷ್ಟ್ರವ್ಯಾಪಿ ಬೀಗಮುದ್ರಣದಿಂದ ಪೀಡಿತ ಆರ್ಥಿಕತೆಯನ್ನು ಹೆಚ್ಚಿಸಲು ಅನ್ಲಾಕ್ ಮಾಡುವ 2 ನೇ ಹಂತದ ಬಗ್ಗೆ ಯೋಚಿಸುವಂತೆ ತಿಳಿಸಿದ್ದರು. ಮಾರ್ಚ್ 19ರಂದು ತಮ್ಮ ಭಾಷಣದಲ್ಲಿ ಪ್ರಧಾನಿ ಮಾರ್ಚ್ 22ರಂದು "ಜನತಾ ಕರ್ಫ್ಯೂ" ಘೋಷಿಸಿದ್ದರು.

ಮಾರ್ಚ್ 24ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್‌ (Lockdown) ಘೋಷಿಸಿದ್ದರು. ಏಪ್ರಿಲ್ 14ರಂದು ಲಾಕ್‌ಡೌನ್‌ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಿದ್ದರು. ಏಪ್ರಿಲ್ 3ರಂದು ನೀಡಿದ ವೀಡಿಯೊ ಸಂದೇಶದಲ್ಲಿ ಏಪ್ರಿಲ್ 5ರಂದು ಕರೋನಾ ಯೋಧರಿಗೆ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಿದ್ದರು.