Upahar Fire Tragedy: ಸಾಕ್ಷಾಧಾರಗಳನ್ನು ತಿರುಚಿದ ಪ್ರಕರಣದಲ್ಲಿ ಅಂಸಲ್ ಬಂಧುಗಳಿಗೆ 7 ವರ್ಷ ಜೈಲು ಶಿಕ್ಷೆ, ಕೋಟ್ಯಂತರ ರೂ. ದಂಡ
Uphaar Fire Tragedy : 1997 ರ ಉಪಹಾರ್ ಅಗ್ನಿ ಅವಘಡ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ (Sushil Ansal) ಮತ್ತು ಗೋಪಾಲ್ ಅನ್ಸಾಲ್ (Gopal Ansal) ಮತ್ತು ಇತರರಿಗೆ ದೆಹಲಿ ನ್ಯಾಯಾಲಯವು (Delhi Court) ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
Uphaar Fire Tragedy: 1997 ರ ಉಪಹಾರ್ ಅಗ್ನಿ ಅವಘಡ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ತಿರುಚಿದ್ದಕ್ಕಾಗಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ (Sushil Ansal) ಮತ್ತು ಗೋಪಾಲ್ ಅನ್ಸಾಲ್ (Gopal Ansal) ಮತ್ತು ಇತರರಿಗೆ ದೆಹಲಿ ನ್ಯಾಯಾಲಯವು (Delhi Court) ಸೋಮವಾರ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ನ್ಯಾಯಾಲಯವು ಅನ್ಸಾಲ್ ಸಹೋದರರ (Ansal Brothers) ವಿರುದ್ಧ 2.25 ಕೋಟಿ ರೂಪಾಯಿ ದಂಡವನ್ನೂ ಸಹ ವಿಧಿಸಿದೆ.
ಈ ಕುರಿತು ಬಂದ ಮಾಹಿತಿ ಪ್ರಕಾರ, ಪಟಿಯಾಲ ಹೌಸ್ ಕೋರ್ಟ್‌ನ (Patiala House Court) ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರ ನ್ಯಾಯಾಲಯವು ಇಂದು ಉಪಹಾರ್ (Upahar Grand) ಅಗ್ನಿಕಾಂಡ ಪ್ರಕರಣದಲ್ಲಿ ಅಪರಾಧಿಗಳಾದ ಸುಶೀಲ್ ಮತ್ತು ಗೋಪಾಲ್ ಅನ್ಸಾಲ್‌ಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸುಶೀಲ್ ಮತ್ತು ಗೋಪಾಲ್ ಅನ್ಸಾಲ್ ಅವರಿಗೆ ನ್ಯಾಯಾಲಯ 2.25 ಕೋಟಿ ರೂಪಾಯಿ ದಂಡ ವಿಧಿಸಿ ಕಸ್ಟಡಿಗೆ ಆದೇಶಿಸಿದೆ. ಇವರಲ್ಲದೆ, ನ್ಯಾಯಾಲಯದ ಮಾಜಿ ಉದ್ಯೋಗಿ ದಿನೇಶ್ ಚಂದ್ ಶರ್ಮಾ ಮತ್ತು ಇತರ ಇಬ್ಬರು ಪಿಪಿ ಬಾತ್ರಾ ಮತ್ತು ಅನೂಪ್ ಸಿಂಗ್ ಅವರಿಗೂ 7 ವರ್ಷ ಜೈಲು ಶಿಕ್ಷೆ ಮತ್ತು ತಲಾ ಮೂರು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಹಲವು ದಿನಗಳ ಚಿಂತನೆಯ ಬಳಿಕ ಐವರು ಅಪರಾಧಿಗಳು ಕಠಿಣ ಶಿಕ್ಷೆಗೆ ಅರ್ಹರು ಎಂಬ ತೀರ್ಮಾನಕ್ಕೆ ನ್ಯಾಯಪೀಠ ಬಂದಿದೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಈ ಪ್ರಕರಣದ ತೀರ್ಪಿನ ನಂತರ, ಜಾಮೀನಿನ ಮೇಲೆ ಹೊರಗಿದ್ದ ಐವರು ಅಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
Whatsappನಲ್ಲಿ Block ಮಾಡಲೇ ಬೇಕೆಂದಿಲ್ಲ, ಹೀಗೆ ಮಾಡಿದರೂ ಮೆಸೇಜ್ ಮಾಡಿ ಕಿರಿ ಕಿರಿ ಉಂಟು ಮಾಡುವವರಿಂದ ತಪ್ಪಿಸಿಕೊಳ್ಳಬಹುದು
ಉಪಹಾರ್ ಗ್ರಾಂಡ್ ಅಗ್ನಿ ಆಕಸ್ಮಿಕ ಪ್ರಕರಣದಲ್ಲಿ ಒಟ್ಟು 59 ಜನರು ಸಾವನ್ನಪ್ಪಿದ್ದರು, ಇದರಲ್ಲಿ ಅನ್ಸಲ್ ಸಹೋದರರನ್ನು ದೋಷಿಗಳೆಂದು ಘೋಷಿಸಲಾಗಿತ್ತು ಮತ್ತು ಸುಪ್ರೀಂ ಕೋರ್ಟ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಜೈಲಿನಲ್ಲಿ ಕಳೆದ ಸಮಯವನ್ನು ಪರಿಗಣಿಸಿ, ರಾಜಧಾನಿ ದೆಹಲಿಯಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಇಬ್ಬರೂ ತಲಾ 30 ಕೋಟಿ ರೂಪಾಯಿ ಪಾವತಿಸಬೇಕು ಎಂಬ ಷರತ್ತಿನ ಮೇಲೆ ಸುಪ್ರೀಂ ಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು. ಇನ್ನಿಬ್ಬರು ಆರೋಪಿಗಳಾದ ಹರ್ ಸ್ವರೂಪ್ ಪನ್ವಾರ್ ಮತ್ತು ಧರ್ಮವೀರ್ ಮಲ್ಹೋತ್ರಾ ಅವರು ವಿಚಾರಣೆಯ ವೇಳೆ ಸಾವನ್ನಪ್ಪಿದ್ದಾರೆ.
ಜೂನ್ 13, 1997 ರಂದು, ಬಾರ್ಡರ್ ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಉಪಹಾರ್ ಚಿತ್ರಮಂದಿರದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಇದರಲ್ಲಿ 59 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಈ ಅಪಘಾತದಲ್ಲಿ ನೂರಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ನ್ಯಾಯಾಲಯದ ಈ ತೀರ್ಪನ್ನು ಉಪಹಾರ್ ಸಂತ್ರಸ್ತರ ಸಂಘದ ಪರವಾಗಿ ಸ್ವಾಗತಿಸಲಾಗಿದೆ. ಈ ನಿರ್ಧಾರಕ್ಕೆ ಒಕ್ಕೂಟ ತೃಪ್ತಿ ವ್ಯಕ್ತಪಡಿಸಿದೆ.
ಇದನ್ನೂ ಓದಿ-Hero Maestro: ಕೇವಲ 29 ಸಾವಿರಕ್ಕೆ ಖರೀದಿಸಿ ಈ ಉತ್ತಮ ಹೀರೋ ಸ್ಕೂಟರ್, ಸಿಗಲಿದೆ ಅದ್ಭುತ ಕೊಡುಗೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.