SBI Easy Ride Scheme: ದ್ವಿಚಕ್ರಕ್ಕಾಗಿ ಲೋನ್ ಪಡೆಯುವುದು ಇನ್ನು ಸುಲಭ, ಮನೆಯಲ್ಲಿ ಕುಳಿತೇ ಪಡೆಯಿರಿ 3 ಲಕ್ಷಗಳವರೆಗೆ ಲೋನ್

SBI ಯ YONO ಅಪ್ಲಿಕೇಶನ್ ಮೂಲಕ 'ಎಂಡ್-ಟು-ಎಂಡ್ ಡಿಜಿಟಲ್ ಟೂ-ವೀಲರ್ ಲೋನ್' ಪಡೆಯಬಹುದು. ಈ ಯೋಜನೆಯಡಿ, ಗ್ರಾಹಕರು ಗರಿಷ್ಠ 3 ಲಕ್ಷ ರೂ.ವರೆಗೆ ದ್ವಿಚಕ್ರ ವಾಹನ ಸಾಲವನ್ನು ಪಡೆಯುವುದು ಸಾಧ್ಯವಾಗುತ್ತದೆ.

Written by - Ranjitha R K | Last Updated : Nov 8, 2021, 02:59 PM IST
  • SBI ಪ್ರೀ ಅಪ್ರೂವ್ಡ್ ಟೂ ವ್ಹೀಲರ್ ಸಾಲ ಯೋಜನೆಯನ್ನು ಪ್ರಾರಂಭಿಸಿದೆ
  • ಎಸ್‌ಬಿಐ ಈಸಿ ರೈಡ್ ಅನ್ನು ಪ್ರಾರಂಭಿಸುವುದಾಗಿ ಬ್ಯಾಂಕ್ ಪ್ರಕಟಿಸಿದೆ
  • ಇದರ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ದೊರೆಯಲಿದೆ.
SBI Easy Ride Scheme: ದ್ವಿಚಕ್ರಕ್ಕಾಗಿ ಲೋನ್ ಪಡೆಯುವುದು ಇನ್ನು ಸುಲಭ, ಮನೆಯಲ್ಲಿ ಕುಳಿತೇ ಪಡೆಯಿರಿ  3 ಲಕ್ಷಗಳವರೆಗೆ ಲೋನ್  title=
SBI Easy Ride Scheme (file photo)

ನವದೆಹಲಿ : SBI Easy Ride Scheme: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  (SBI) ಪ್ರೀ ಅಪ್ರೂವ್ಡ್ ಟೂ ವ್ಹೀಲರ್ ಸಾಲ ಯೋಜನೆ ‘SBI Easy Ride ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿ, ಬ್ಯಾಂಕ್ ಶಾಖೆಗೆ ಭೇಟಿ ನೀಡದೆಯೇ ಸಾಲವನ್ನು ಪಡೆಯಬಹುದು.

ನೀವು SBI ಯ YONO ಅಪ್ಲಿಕೇಶನ್ ಮೂಲಕ 'ಎಂಡ್-ಟು-ಎಂಡ್ ಡಿಜಿಟಲ್ ಟೂ-ವೀಲರ್ ಲೋನ್' ಪಡೆಯಬಹುದು. ಈ ಯೋಜನೆಯಡಿ, ಗ್ರಾಹಕರು ಗರಿಷ್ಠ 3 ಲಕ್ಷ ರೂ.ವರೆಗೆ ದ್ವಿಚಕ್ರ ವಾಹನ ಸಾಲವನ್ನು (Vehicle loan) ಪಡೆಯುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಗರಿಷ್ಠ 4 ವರ್ಷಗಳ ಅವಧಿಗೆ 3 ಲಕ್ಷ ಸಾಲದ ಮೇಲೆ ಶೇ.10.5 ಬಡ್ಡಿ ವಿಧಿಸಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಸಾಲದ ಮೊತ್ತವನ್ನು 20,000 ರೂ.ಗೆ ನಿಗದಿಪಡಿಸಲಾಗಿದೆ. 

ಇದನ್ನೂ ಓದಿ :  Hero Maestro: ಕೇವಲ 29 ಸಾವಿರಕ್ಕೆ ಖರೀದಿಸಿ ಈ ಉತ್ತಮ ಹೀರೋ ಸ್ಕೂಟರ್, ಸಿಗಲಿದೆ ಅದ್ಭುತ ಕೊಡುಗೆ

ಎಸ್‌ಬಿಐ ಈಸಿ ರೈಡ್‌ನ ವೈಶಿಷ್ಟ್ಯಗಳು :
1.'ಎಸ್‌ಬಿಐ ಈಸಿ ರೈಡ್' (SBI Easy Ride) ರ್ಹತೆಗೆ ಅನುಗುಣವಾಗಿ ವಾಹನದ ಆನ್-ರೋಡ್ ಬೆಲೆಯ 85% ವರೆಗೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. 
3. ಈ ಸಾಲವನ್ನು ಗರಿಷ್ಠ 48 ತಿಂಗಳ ಅವಧಿಗೆ ನೀಡಲಾಗುವುದು. 
4. ಸಾಲದ ಮೊತ್ತವನ್ನು (loan amount) ತರಕರ ಖಾತೆಗೆ ವರ್ಗಾಯಿಸಲಾಗುತ್ತದೆ.
5. SBI ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ YONO ಅಪ್ಲಿಕೇಶನ್ ಮೂಲಕ ಎಂಡ್-ಟು-ಎಂಡ್ ಡಿಜಿಟಲ್ ದ್ವಿಚಕ್ರ ವಾಹನ ಸಾಲವನ್ನು ಪಡೆಯಬಹುದು.

ಪ್ರಸ್ತುತ ಡಿಜಿಟಲ್ ರೂಪಾಂತರದ ಮಧ್ಯೆ, SBI  YONO ಅಪ್ಲಿಕೇಶನ್ ಮೂಲಕ, ಗ್ರಾಹಕರ  ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸಲು ಪ್ರಯತ್ನಗಳನ್ನು ಮುಂದುವರೆಸಿದೆ ಎಂದು SBI ಹೇಳಿದೆ. ನವೆಂಬರ್ 2017 ರಲ್ಲಿ ಪ್ರಾರಂಭಿಸಲಾದ YONO ಅಪ್ಲಿಕೇಶನ್ 89 ಮಿಲಿಯನ್ ಡೌನ್‌ಲೋಡ್‌ಗಳನ್ನು ಮತ್ತು 42 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ. SBI YONO ನಲ್ಲಿ 20 ಕ್ಕೂ ಹೆಚ್ಚು ವಿಭಾಗಗಳಲ್ಲಿ 110 ಕ್ಕೂ ಹೆಚ್ಚು ಇ-ಕಾಮರ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಇದನ್ನೂ ಓದಿ :  Paytm IPO: ಹೂಡಿಕೆಗಾಗಿ ತೆರೆದುಕೊಂಡ ಅತಿ ದೊಡ್ಡ IPO! ನಿಮ್ಮ ಹೂಡಿಕೆ ಹೇಗಿರಲಿದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News