ನೋಯ್ಡಾ: ಅನುಮತಿ ಇಲ್ಲದೆ ಸುಮಾರು 200 ದಿನಗಳವರೆಗೆ ಕೆಲಸಕ್ಕೆ ಗೈರಾಗಿದ್ದ ಪೊಲೀಸ್ ಕಾನ್ಸ್​​ಟೇಬಲ್ ಒಬ್ಬರನ್ನು ಕರ್ತವ್ಯದಿಂದಲೇ ವಜಾಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 30 ವರ್ಷದ ಚಿತ್ರಸೇನ್ ಕುಮಾರ್ ಅವರನ್ನು ನೋಯ್ಡಾದ ಗೌತಮ್ ಬುದ್ಧ ನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸರ್ಕಾರಿ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  


COMMERCIAL BREAK
SCROLL TO CONTINUE READING

ಗೌತಮ್‌ ಬುದ್ದ ನಗರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಚಿತ್ರಸೇನ್ 2020ರ ಜುಲೈ 25ರಿಂದ 2021ರ ಫೆಬ್ರವರಿ 3ರವರೆಗೆ ಒಟ್ಟು 193 ದಿನಗಳ ಕಾಲ ಅನುಮತಿ ಇಲ್ಲದೆ ರಜೆ ತೆಗೆದುಕೊಂಡಿದ್ದ. ಈ ಅವಧಿಯಲ್ಲಿ ಆತ 2ನೇ ಮದುವೆ ಆಗಿದ್ದಾನೆ ಅನ್ನೋ ಮಾಹಿತಿ ಸಹ ಬಹಿರಂಗವಾಗಿದೆ.


ಇದನ್ನೂ ಓದಿ: ಗಾಯಗೊಂಡಿದ್ದ ಪಕ್ಷಿ ಕಾಪಾಡಲು ಹೋದವರಿಗೆ ಕಾರು ಡಿಕ್ಕಿ: ಇಬ್ಬರ ಪ್ರಾಣಪಕ್ಷಿ ಹಾರೇಹೋಯ್ತು!


ಮೊದಲ ಹೆಂಡತಿ ಜೀವಂತವಾಗಿರುವಾಗಲೇ ಚಿತ್ರಸೇನ್ ಬೇರೊಂದು ಮದುವೆಯಾಗಿದ್ದಾನೆ. 2012ರಲ್ಲಿ ಸೇವೆಗೆ ಸೇರ್ಪಡೆಗೊಂಡಿದ್ದ ಚಿತ್ರಸೇನ್ ಉತ್ತರಪ್ರದೇಶ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ರಜೆ ತೆಗೆದುಕೊಂಡು ಕರ್ತವ್ಯಲೋಪ ಎಸಗಿದ್ದಾನೆ. ಅನುಮತಿ ಇಲ್ಲದೆ 193 ದಿನಗಳ ಕಾಲ ಕೆಲಸಕ್ಕೆ ಗೈರುಹಾಜರಾಗಿರುವ ಆತನ ವಿರುದ್ಧ ಸರ್ಕಾರಿ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  


‘ಕಾನ್ಸ್ಟೇಬಲ್ ಚಿತ್ರಸೇನ್ ತನ್ನ ಮೊದಲ ಹೆಂಡತಿ ಬದುಕಿರುವಾಗಿರುವಾಗಲೇ 2ನೇ ಬಾರಿಗೆ ಮದುವೆಯಾಗಿದ್ದಾನೆ. ಮದುವೆಗೆ ಸಂಬಂಧಿಸಿದಂತೆ ಆತ 1956ರ ಉತ್ತರ ಪ್ರದೇಶ ಸರ್ಕಾರಿ ಸೇವಕ ನಡವಳಿಕೆ ನಿಯಮಗಳ ನಿಯಮ 29ರ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.


ಇದನ್ನೂ ಓದಿ: Prophet Mohammad row: ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ಪೋಸ್ಟ್‌, ಯೂಟ್ಯೂಬರ್ ಅರೆಸ್ಟ್‌


ಇಲಾಖಾ ಪ್ರಕ್ರಿಯೆಗಳು ಯುಪಿ ಅಧೀನ ವರ್ಗದ ಪೊಲೀಸ್ ಅಧಿಕಾರಿಗಳ (ಶಿಕ್ಷೆ ಮತ್ತು ಮೇಲ್ಮನವಿ) ನಿಯಮಗಳು, 1991ರ ನಿಯಮ-14 (1)ರ ಅಡಿಯಲ್ಲಿ ಚಿತ್ರಸೇನ್ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.