Prophet Mohammad row: ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ಪೋಸ್ಟ್‌, ಯೂಟ್ಯೂಬರ್ ಅರೆಸ್ಟ್‌

ಕಾಶ್ಮೀರಿ ಯೂಟ್ಯೂಬರ್‌ ಫೈಸಲ್‌ ವಾನಿ, ಡಿಜಿಟಲ್ ಮೂಲಕ ರಚಿಸಲಾದ ಗ್ರಾಫಿಕ್ ವೀಡಿಯೊವೊಂದನ್ನ ಪೋಸ್ಟ್ ಮಾಡಿದ್ದ. ಅದರಲ್ಲಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಮೆಯ ಶಿರಚ್ಛೇದ ಮಾಡುವಂತೆ ತೋರಿಸಲಾಗಿತ್ತು. ಇನ್ನು ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಭಯಗೊಂಡ ಫೈಸಲ್‌ ಅದನ್ನು ಡಿಲೀಟ್‌ ಮಾಡಿ ಹೊಸ ವಿಡಿಯೋವೊಂದನ್ನು ಕ್ರಿಯೇಟ್‌ ಮಾಡಿ, ಆ ಮೂಲಕ ಕ್ಷಮೆಯಾಚಿಸಿದ್ದಾನೆ. 

Written by - Bhavishya Shetty | Last Updated : Jun 11, 2022, 04:47 PM IST
  • ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ವಿಡಿಯೋ ಪೋಸ್ಟ್
  • ಕಾಶ್ಮೀರಿ ಯೂಟ್ಯೂಬರ್ ಫೈಸಲ್ ವಾನಿ ಬಂಧನ
  • ಐಪಿಸಿ ಸೆಕ್ಷನ್ 505, 506 ಅಡಿಯಲ್ಲಿ ಪ್ರಕರಣ ದಾಖಲು
Prophet Mohammad row: ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ಪೋಸ್ಟ್‌, ಯೂಟ್ಯೂಬರ್ ಅರೆಸ್ಟ್‌ title=
Prophet Mohammad Row

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ವೀಡಿಯೊ ಪೋಸ್ಟ್ ಮಾಡಿದ ಕಾಶ್ಮೀರಿ ಯೂಟ್ಯೂಬರ್ ಫೈಸಲ್ ವಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಫೈಸಲ್ ಆಕ್ಷೇಪಾರ್ಹ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದನು. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ  ಪೊಲೀಸರು ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ. 

ಆರೋಪಿ ಫೈಸಲ್ ವಿರುದ್ಧ ಶ್ರೀನಗರದ ಸಫಾ ಕಡಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ನೂಪುರ್ ಶರ್ಮಾ ವಿರುದ್ಧ ವಿವಾದಾತ್ಮಕ ವಿಡಿಯೋ ಪೋಸ್ಟ್: 
ಕಾಶ್ಮೀರಿ ಯೂಟ್ಯೂಬರ್‌ ಫೈಸಲ್‌ ವಾನಿ, ಡಿಜಿಟಲ್ ಮೂಲಕ ರಚಿಸಲಾದ ಗ್ರಾಫಿಕ್ ವೀಡಿಯೊವೊಂದನ್ನ ಪೋಸ್ಟ್ ಮಾಡಿದ್ದ. ಅದರಲ್ಲಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಮೆಯ ಶಿರಚ್ಛೇದ ಮಾಡುವಂತೆ ತೋರಿಸಲಾಗಿತ್ತು. ಇನ್ನು ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಭಯಗೊಂಡ ಫೈಸಲ್‌ ಅದನ್ನು ಡಿಲೀಟ್‌ ಮಾಡಿ ಹೊಸ ವಿಡಿಯೋವೊಂದನ್ನು ಕ್ರಿಯೇಟ್‌ ಮಾಡಿ, ಆ ಮೂಲಕ ಕ್ಷಮೆಯಾಚಿಸಿದ್ದಾನೆ. 

"ನಾನು ನೂಪುರ್ ಶರ್ಮಾ ಬಗ್ಗೆ ವಿಎಫ್‌ಎಕ್‌ ಮೂಲಕ ವೀಡಿಯೊವನ್ನು ಮಾಡಿದ್ದೆ. ಅದು ಭಾರತದಾದ್ಯಂತ ವೈರಲ್ ಆಗಿದೆ. ಆ ಮೂಲಕ ನಾನು ವಿವಾದಕ್ಕೆ ಸಿಲುಕಿಕೊಂಡಿದ್ದೇನೆ. ಇತರ ಧರ್ಮದವರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ನನಗಿಲ್ಲ" ಎಂದು ವಾನಿ ಕ್ಷಮೆಯಾಚನೆಯ ವಿಡಿಯೋದಲ್ಲಿ ಹೇಳಿದ್ದಾನೆ. ನೂಪುರ್ ಶರ್ಮಾ ವಿರುದ್ಧ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವಿವಾದಾತ್ಮಕ ವೀಡಿಯೊವನ್ನು ತೆಗೆದುಹಾಕಿರುವುದಾಗಿ ಯೂಟ್ಯೂಬರ್ ಸ್ಪಷ್ಟಪಡಿಸಿದ್ದಾನೆ. 

ನೂಪುರ್ ಶರ್ಮಾ ಅಮಾನತು: 
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಕಾರಣದಿಂದ ನೂಪುರ್ ಶರ್ಮಾ ಅವರನ್ನು ಬಿಜೆಪಿ ಕಳೆದ ಕೆಲ ದಿನಗಳ ಹಿಂದೆ ಅಮಾನತುಗೊಳಿಸಿದೆ. ಅಷ್ಟೇ ಅಲ್ಲದೆ, ದೆಹಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಜಿಂದಾಲ್ ಅವರನ್ನು ಸಹ ಸಸ್ಪೆಂಡ್‌ ಮಾಡಲಾಗಿದೆ. 

ನೂಪುರ್ ಶರ್ಮಾ ವಿರುದ್ಧ ಎಫ್‌ಐಆರ್: 
ಶರ್ಮಾ ಮತ್ತು ಜಿಂದಾಲ್ ಮಾಡಿದ ಕಾಮೆಂಟ್‌ಗಳ ಬಳಿಕ ದೇಶ ಸೇರಿದಂತೆ ವಿದೇಶಗಳಲ್ಲೂ ಸಹ ವಿವಾದ ವಭುಗಿಲೆದ್ದಿದೆ. ಹಲವಾರು ಗಲ್ಫ್ ದೇಶಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿವೆ. ಸದ್ಯ ವಿವಿಧ ರಾಜ್ಯಗಳಲ್ಲಿ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಹಲವಾರು ಎಫ್‌ಐಆರ್‌ಗಳು ದಾಖಲಾಗಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News