ಶೀಘ್ರದಲ್ಲೇ COVID-19 Vaccine ಲಭ್ಯ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ
ವಿಜ್ಞಾನಿಗಳು ಹಸಿರು ಸಂಕೇತ ನೀಡಿದ ಕೂಡಲೇ ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಪಿಎಂ ನರೇಂದ್ರ ಮೋದಿ ಪ್ರತಿಪಾದಿಸಿದರು.
ನವದೆಹಲಿ: ಮುಂದಿನ ಕೆಲವು ವಾರಗಳಲ್ಲಿ ಕರೋನವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ತಜ್ಞರು ಭರವಸೆ ವ್ಯಕ್ತಪಡಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದರು. ವಿಜ್ಞಾನಿಗಳು ಹಸಿರು ಸಂಕೇತ ನೀಡಿದ ಕೂಡಲೇ ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಪಿಎಂ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
Coronavirus) ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ವಿವಿಧ ರಾಜಕೀಯ ಸಂಘಟನೆಗಳ ಮುಖಂಡರು ಮತ್ತು ಉನ್ನತ ಕೇಂದ್ರ ಸಚಿವರೊಂದಿಗೆ ಸರ್ವಪಕ್ಷ ಸಭೆ (All Party Meeting) ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ. ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ಜಗತ್ತು ನಿಗಾ ಇಡುತ್ತಿದೆ. ಅದಕ್ಕಾಗಿಯೇ ಇಡೀ ವಿಶ್ವದ ಕಣ್ಣು ಭಾರತದ ಮೇಲೆ ನೆಟ್ಟಿದೆ ಎಂದು ಹೇಳಿದರು.
ಡಾರ್ಕ್ ಚಾಕೊಲೇಟ್, ಗ್ರೀನ್ ಟೀ, ದ್ರಾಕ್ಷಿಯಿಂದ Covid-19 ತಡೆಯಬಹುದಂತೆ!
ಇದೇ ಸಂದರ್ಭದಲ್ಲಿ ಕೋವಿಡ್ -19 ಲಸಿಕೆಯ (Covid 19 Vaccine) ಬೆಲೆ ಕುರಿತಂತೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
Covid 19) ಲಸಿಕೆ ಸಿದ್ಧವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳು ಗ್ರೀನ್ ಸಿಗ್ನಲ್ ನೀಡಿದ ತಕ್ಷಣ, ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಕರೋನಾ ವಾರಿಯರ್ಸ್ ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧರಿಗೆ ವ್ಯಾಕ್ಸಿನೇಷನ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಪಿಎಂ ಮೋದಿ ಸಭೆಯಲ್ಲಿ ಹೇಳಿದರು.
ಶಾಲೆಗಳು ತೆರೆಯಲಿವೆ! ದೇಶಾದ್ಯಂತ ಶಾಲೆಗಳನ್ನು ತೆರೆಯಲು ನಡೆದಿದೆಯೇ ಸಿದ್ಧತೆ, ಇದನ್ನು ಓದಿ
ಎಲ್ಲಾ ನಾಯಕರು ತಮ್ಮ ಸಲಹೆಗಳನ್ನು ಲಿಖಿತವಾಗಿ ಕಳುಹಿಸುವಂತೆ ಸಭೆಯಲ್ಲಿ ಮನವಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ನಾಯಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
HD Devegowda) ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದಾರೆ.