ಡಾರ್ಕ್ ಚಾಕೊಲೇಟ್, ಗ್ರೀನ್ ಟೀ, ದ್ರಾಕ್ಷಿಯಿಂದ Covid-19 ತಡೆಯಬಹುದಂತೆ!

ಹಸಿರು ಚಹಾ (Green Tea), ದ್ರಾಕ್ಷಿ ಮತ್ತು ಡಾರ್ಕ್ ಚಾಕೊಲೇಟ್‌ನಲ್ಲಿನ ರಾಸಾಯನಿಕ ಸಂಯುಕ್ತವು ಕರೋನಾ ಕಿಣ್ವದ ಮುಖ್ಯ ಪ್ರೋಟೀನ್ (ಎಂಪ್ರೊ) ಅನ್ನು ನಿರ್ಬಂಧಿಸುತ್ತದೆ. ಅದು ನೋವೆಲ್ ಕರೋನಾವೈರಸ್ ಹರಡಲು ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 

Last Updated : Dec 3, 2020, 11:45 AM IST
  • ಕರೋನಾ ತಡೆಗಟ್ಟಲು ಆಹಾರದಲ್ಲಿ ಹಸಿರು ಚಹಾ ಸೇರಿಸಿ
  • ದ್ರಾಕ್ಷಿಯನ್ನು ಸೇವಿಸುವುದರಿಂದ ಕೋವಿಡ್ -19 ಅನ್ನು ತಡೆಯಲು ಸಹಕಾರಿ
  • ಸಾಂಕ್ರಾಮಿಕ ರೋಗವನ್ನು ತಡೆಯಲು ಹಸಿರು ಚಹಾ ಪರಿಣಾಮಕಾರಿ
ಡಾರ್ಕ್ ಚಾಕೊಲೇಟ್, ಗ್ರೀನ್ ಟೀ, ದ್ರಾಕ್ಷಿಯಿಂದ Covid-19 ತಡೆಯಬಹುದಂತೆ! title=

ಬೆಂಗಳೂರು: ಈ ದಿನಗಳಲ್ಲಿ ವಿಶ್ವದಾದ್ಯಂತ ಜನರು ಕರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಈ ಯುದ್ಧದಲ್ಲಿ ಗೆಲ್ಲಲು ಕೋವಿಡ್ -19 ಲಸಿಕೆಗಾಗಿ (Covid 19 Vaccine) ಎಲ್ಲರೂ ಕಾಯುತ್ತಿದ್ದಾರೆ. ಆದಾಗ್ಯೂ ಈ ಮಧ್ಯೆ ಹೊಸ ಸಂಶೋಧನೆಯು ಈ ಮಾರಕ ವೈರಸ್‌ನಿಂದ ಸುರಕ್ಷಿತವಾಗಿರಲು ಬಯಸುವ ಜನರಿಗೆ ಕೆಲವು ಮನೆಮದ್ದುಗಳು ಪ್ರಯೋಜನಕಾರಿ ಎಂದು ಹೇಳಿದೆ.

ಹೌದು, ಇದಕ್ಕಾಗಿ ನೀವು ಹೆಚ್ಚಾಗಿ ಏನೂ ಮಾಡಬೇಕಾಗಿಲ್ಲ, ಈ  3-4 ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ವಾಸ್ತವವಾಗಿ ಇತ್ತೀಚಿನ ಸಂಶೋಧನೆಯ ಪ್ರಕಾರ ಹಸಿರು ಚಹಾ, ಡಾರ್ಕ್ ಚಾಕೊಲೇಟ್ ಮತ್ತು ದ್ರಾಕ್ಷಿಗಳು ಕೋವಿಡ್ -19 (Covid 19) ಸೋಂಕನಿಂದ ರಕ್ಷಿಸುತ್ತವೆ ಎಂದು ಸಂಶೋಧನೆಯೊಂದು ಕಂಡು ಹಿಡಿದಿದೆ.

ಈ ದೇಶಕ್ಕೆ Corona Vaccine ಅಗತ್ಯವೇ ಇಲ್ಲವಂತೆ

MPro ಎನ್ಜೈಮ್ ಕೋವಿಡ್ -19 ಅನ್ನು ಹರಡುತ್ತಂತೆ :
ಹಸಿರು ಚಹಾ (Green Tea), ದ್ರಾಕ್ಷಿ ಮತ್ತು ಡಾರ್ಕ್ ಚಾಕೊಲೇಟ್‌ನಲ್ಲಿನ ರಾಸಾಯನಿಕ ಸಂಯುಕ್ತವು ಕರೋನಾ ಕಿಣ್ವದ ಮುಖ್ಯ ಪ್ರೋಟೀನ್ (ಎಂಪ್ರೊ) ಅನ್ನು ನಿರ್ಬಂಧಿಸುತ್ತದೆ. ಅದು ನೋವೆಲ್ ಕರೋನಾವೈರಸ್ ಹರಡಲು ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 

ವಾಸ್ತವವಾಗಿ ಕರೋನಾವೈರಸ್ (Coronavirus) ಪ್ರೋಟಿಯೇಸ್ ಕಿಣ್ವದ ಸಹಾಯದಿಂದ ದೇಹದಿಂದ ದೇಹಕ್ಕೆ ಸೋಂಕನ್ನು ಹರಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಿಣ್ವವನ್ನು ನಿರ್ಬಂಧಿಸಿದರೆ  ದೇಹದಲ್ಲಿನ ಕರೋನಾವು ಅದರ ಸಂಖ್ಯೆಯನ್ನು ಹೆಚ್ಚಿಸುವುದನ್ನು ತಡೆಯಬಹುದು. ಈ ರೀತಿಯ ಕಿಣ್ವವು ದ್ರಾಕ್ಷಿ, ಹಸಿರು ಚಹಾ ಮತ್ತು ಡಾರ್ಕ್ ಚಾಕೊಲೇಟ್‌ನಲ್ಲಿ ಕಂಡುಬರುತ್ತದೆ ಎಂದು ಅಮೆರಿಕಾದ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಪ್ರತಿಪಾದಿಸಿದ್ದಾರೆ.

ವಿಮಾನಯಾನಕ್ಕೂ ಮೊದಲು ಈ ಸುದ್ದಿಯನ್ನು ತಪ್ಪದೇ ಓದಿ

ಈ ಸಮಯದಲ್ಲಿ ಕೋವಿಡ್ -19 ವೈರಸ್ ತಡೆಗಟ್ಟುವಲ್ಲಿ ಡಾರ್ಕ್ ಚಾಕೊಲೇಟ್ ಮತ್ತು ಹಸಿರು ಚಹಾ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು ಎಂದು ಸಂಶೋಧನೆ ನಡೆಸಿದ ಅಮೆರಿಕದ ಉತ್ತರ ಕೆರೊಲಿನಾ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕ ಡಿ-ಯು ಕ್ಸಿ ಹೇಳುತ್ತಾರೆ.  ಕೆಲವು ಆಹಾರಗಳು ಮತ್ತು ಪಾನೀಯಗಳಾದ ಡಾರ್ಕ್ ಚಾಕೊಲೇಟ್, ಗ್ರೀನ್ ಟೀ ಮತ್ತು ದ್ರಾಕ್ಷಿ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿರುವ ರಾಸಾಯನಿಕ ಸಂಯುಕ್ತಗಳನ್ನು ಹೊಂದಿರುತ್ತವೆ ಎಂದು ಸಂಶೋಧನೆಯು ತೋರಿಸಿದೆ. ಇದು ವೈರಸ್‌ನ ಮುಖ್ಯ ಕಿಣ್ವವಾದ ಪ್ರೋಟಿಯೇಸ್‌ನ ಕಾರ್ಯವನ್ನು ತಡೆಯುತ್ತದೆ. ಡಾರ್ಕ್ ಚಾಕೊಲೇಟ್ ಮತ್ತು ಹಸಿರು ಚಹಾ ಬಣ್ಣದಲ್ಲಿರುವ ಫೈಟೊನ್ಯೂಟ್ರಿಯೆಂಟ್ಸ್ ವೈರಸ್ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾವಣೆಯಾಗುವುದನ್ನು ತಡೆಯಬಹುದು ಎಂದು ಸಂಶೋಧನೆಯಲ್ಲಿ ವಿವರಿಸಲಾಗಿದೆ.

Trending News