Vinesh Phogat Julana election Result 2024 : ಹರಿಯಾಣದಲ್ಲಿ ಇನ್ನೂ ಹಲವು ಸ್ಥಾನಗಳ ಎಣಿಕೆ ನಡೆಯುತ್ತಿದೆ. ಆದರೆ ಇಡೀ ದೇಶವೇ ಕಣ್ಣಿಟ್ಟಿದ್ದ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್ ಗೆದ್ದಿದ್ದಾರೆ. ಮೊದಲಿನಿಂದಲೂ ಅವರು ಬಿಜೆಪಿ ಅಭ್ಯರ್ಥಿ ಯೋಗೀಶ್ ಕುಮಾರ್ ಅವರಿಗಿಂತ ಭಾರೀ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. 14ನೇ ಸುತ್ತಿನ ಮತ ಎಣಿಕೆಯವರೆಗೂ ಅವರು ಸಾವಿರಾರು ಮತಗಳಿಂದ ಮುನ್ನಡೆಯಲ್ಲಿದ್ದರು. ಬೆಳಗ್ಗೆ 8 ಗಂಟೆಯಿಂದ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ ಅವರಿಗಿಂತ ವಿನೇಶ್ ಫೋಗಟ್ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೆ 14 ಸುತ್ತಿನ ಮತ ಎಣಿಕೆ ಮುಗಿದಿದ್ದು, ವಿನೇಶ್ 6000 ಮತಗಳಿಂದ ಮುಂದಿದ್ದಾರೆ. 


COMMERCIAL BREAK
SCROLL TO CONTINUE READING

ಜುಲಾನಾ ಜನಸಂಖ್ಯೆ : 
ಜುಲಾನಾ ಎಂಬುದು ಹರಿಯಾಣದ ಜಿಂದ್ ಜಿಲ್ಲೆಯ ಒಂದು ಪಟ್ಟಣವಾಗಿದೆ. ಈ ಪ್ರದೇಶವು ಗೋಧಿ ಮತ್ತು ಕಬ್ಬನ್ನು ಮುಖ್ಯವಾಗಿ ಉತ್ಪಾದಿಸುವ ಕೃಷಿಗೆ ಹೆಸರುವಾಸಿಯಾಗಿದೆ. 2011ರಲ್ಲಿ ನಡೆಸಿದ ಜನಗಣತಿಯ ಪ್ರಕಾರ, ಜುಲಾನಾ  ಪಟ್ಟಣದ ಒಟ್ಟು ಜನಸಂಖ್ಯೆಯು 16,570 ಆಗಿದೆ.ಇಲ್ಲಿ ಸಾಕ್ಷರತೆಯ ಪ್ರಮಾಣವು 74.77% ರಷ್ಟಿತ್ತು. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.


ಇದನ್ನೂ ಓದಿ : ಬಹಳ ಜನ ಸೋತಿದ್ದಾರೆ ನೀವು ಜಾಣರಾಗಿದ್ದರೆ..! ಈ ಸರೋವರದಲ್ಲಿ ಅಡಗಿರುವ ಮೊಸಳೆ ಕಂಡುಹಿಡಿಯಿರಿ ನೋಡೋಣ...


2019 ರ ವಿಧಾನಸಭಾ ಚುನಾವಣೆ:
2019 ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡುವುದಾದರೆ, ಜುಲಾನಾದಿಂದ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ಪರ್ಮಿಂದರ್ ಸಿಂಗ್ ಧುಲ್ ಗೆದ್ದಿದ್ದರು. ಅವರ ಮುಂದೆ ಬಿಜೆಪಿಯ ಅಮರ್ಜೀತ್ ಧಂಡಾ ಮತ್ತು ಕಾಂಗ್ರೆಸ್‌ನ ಕುಲದೀಪ್ ಶರ್ಮಾ ಚುನಾವಣಾ ಕಣದಲ್ಲಿ ನಸೋಲು ಕಂಡಿದ್ದರು. 


2014ರಲ್ಲಿ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಲೋಕ ದಳದ (ಐಎನ್‌ಎಲ್‌ಡಿ) ಬೀರೇಂದ್ರ ಸಿಂಗ್ ಧುಲ್ ಗೆದ್ದಿದ್ದರು. ಕಾಂಗ್ರೆಸ್ ಪಕ್ಷದಿಂದ ಕುಲದೀಪ್ ಶರ್ಮಾ ಮತ್ತು ಬಿಜೆಪಿಯಿಂದ ಅಮರಜೀತ್ ಧಂಡಾ ಅವರು ಬೀರೇಂದ್ರ ಸಿಂಗ್ ವಿರುದ್ಧ ಚುನಾವಣಾ ಸಮರದಲ್ಲಿದ್ದರು.


ಇದನ್ನೂ ಓದಿ : ನದಿಯಲ್ಲಿ ಉದ್ಭವಿಸಿದ ಭಜರಂಗಿ..! ರಾಮಧೂತನ ಮೂರ್ತಿ ಕಂಡು ಬೆಚ್ಚಿ ಬಿತ್ತು ಗ್ರಾಮ.. ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.