Viral Video: ಪಂಕ್ಚರ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಏನಾಗಿದೆ ನೋಡಿ..!
ರಾಜಸ್ಥಾನದ ಜೈಸಲ್ಮೇರ್ನ ಪಂಕ್ಚರ್ ಅಂಗಡಿಯೊಂದರಲ್ಲಿ ನಡೆದಿರುವ ಭಯಾನಕ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನವದೆಹಲಿ: ನಿಮ್ಮ ಸ್ನೇಹಿತರೊಂದಿಗೆ ಮೈಮರೆತು ಹರಟೆ ಹೊಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ನೀವು ನಿಂತ ಜಾಗ ದಿಢೀರ್ ಆಗಿ ಕುಸಿದುಬಿದ್ದರೆ ಏನಾಗಬೇಡ..? ಹೌದು, ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇದೇ ರೀತಿಯ ಭಯಾನಕ ಘಟನೆಯೊಂದು ನಡೆದಿದೆ. ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಘಟನೆಯ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಏನಿದು ಭಯಾನಕ ಘಟನೆ..?
Ghaziabad Fire: ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾದ 30ಕ್ಕೂ ಹೆಚ್ಚು ಹಸುಗಳು
ವಿಡಿಯೋ ಸಖತ್ ವೈರಲ್ ಆಗುತ್ತಿದೆ!
ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ವರದಿಗಳ ಪ್ರಕಾರ ಜೈಸಲ್ಮೇರ್ ರೈಲು ನಿಲ್ದಾಣದ ಮುಂಭಾಗದ ಬಾಬಾ ಬಾವಡಿ ಬಳಿಯ ಮುಖ್ಯ ರಸ್ತೆಯಲ್ಲಿ ಟೈರ್ ಪಂಕ್ಚರ್ ಅಂಗಡಿ ಇದೆ. ಬೈಕ್ ಪಂಕ್ಚರ್ ಹಾಕಿಸಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಮೆಕ್ಯಾನಿಕ್ ಕೆಳಗಡೆ ಕುಳಿತುಕೊಂಡು ಬೈಕ್‍ನ ಟೈರ್‍ಗೆ ಪಂಕ್ಚರ್ ಹಾಕುತ್ತಿರುತ್ತಾನೆ. ಈ ವೇಳೆ ನಾಲ್ವರು ಮಾತನಾಡುತ್ತಾ ನಿಂತಿದ್ದಾರೆ. ನೋಡನೋಡುತ್ತಿದ್ದಂತೆಯೇ ಅವರು ನಿಂತುಕೊಂಡಿದ್ದ ಜಾಗವೇ ಕುಸಿದುಬಿದ್ದಿದೆ. ಪರಿಣಾಮ ಬೈಕ್ ಸಮೇತ ಐವರು ಆ ಗುಂಡಿಯೊಳಗೆ ಬಿದ್ದುಬಿಟ್ಟಿದ್ದಾರೆ.
ಪ್ರಾಣಾಪಾಯದಿಂದ ಪಾರು
ಆಳವಾದ ಗುಂಡಿಯೊಳಗೆ ಬಿದ್ದಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಷಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿದ್ದ ಕೂಡಲೇ ಒಬ್ಬೊಬ್ಬರೇ ಗುಂಡಿಯಿಂದ ಮೇಲಕ್ಕೆ ಬಂದಿದ್ದಾರೆ. ಶೇರ್ ಆದ ಕೆಲವೇ ಗಂಟೆಯಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಇದನ್ನೂ ಓದಿ: Teacher with Gun: ಶಿಕ್ಷಕಿಯ ಬಳಿಯಿಂದ ದೇಸಿ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು, Video ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.