Teacher with Gun: ಶಿಕ್ಷಕಿಯ ಬಳಿಯಿಂದ ದೇಸಿ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು, Video ನೋಡಿ

Teacher with Gun: ಶಾಲಾ ಶಿಕ್ಷಕಿಯ ಬಳಿಯಿಂದ ಪೊಲೀಸರು ನಾಡ ಪಿಸ್ತೂಲ್ (Illegal Weapons) ಅನ್ನು ವಶಕ್ಕೆಪಡೆಯುತ್ತಿರುವ ವಿಡಿಯೋವೊಂದು ಬಹಿರಂಗಗೊಂಡಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.  

Written by - Nitin Tabib | Last Updated : Apr 12, 2022, 09:07 PM IST
  • ತನ್ನ ಬಳಿ ಪಿಸ್ತೂಲ್ ಇಟ್ಟುಕೊಂಡು ತಿರುಗುತ್ತಿದ್ದ ಟೀಚರಮ್ಮ
  • ಪಿಸ್ತೂಲ್ ಅನ್ನು ವಶಕ್ಕೆ ಪಡೆದ ಪೊಲೀಸರು
  • ಅಷ್ಟಕ್ಕೂ ನಡೆದಿದ್ದಾದರು ಏನು? ತಿಳಿಯಲು ವಿಡಿಯೋ ವೀಕ್ಷಿಸಿ
Teacher with Gun: ಶಿಕ್ಷಕಿಯ ಬಳಿಯಿಂದ ದೇಸಿ ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು, Video ನೋಡಿ title=
Teacher With Gun

Teacher With Illegal Weapon - ಟೀಚರ್ (Teacher) ಎಂಬ ಪದ ಕೇಳುತ್ತಿದ್ದಂತೆಯೇ ಕೈಯಲ್ಲಿ ಪೆನ್ನು ಹಿಡಿದ ವ್ಯಕ್ತಿಯ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಆದರೆ ಇಂದು ಕಾಲ ಬದಲಾಗಿದೆ, ಏಕೆಂದರೆ ಈಗ ಒಬ್ಬ ಶಿಕ್ಷಕಿ ಪೆನ್ ಅಲ್ಲ ಗನ್ ಇಟ್ಕೊಂಡು ಸಿಕ್ಕಿಬಿದ್ದಿದ್ದಾಳೆ. ಇದನ್ನು ಕೇಳಿ ನಿಮಗೂ ಆಶ್ಚರ್ಯವಾಗಬಹುದು. ಆದರೆ, ಇದು ನಿಜ, ಮಂಗಳವಾರ ಮೈನ್‌ಪುರಿಯಲ್ಲಿ ಮಹಿಳಾ ಶಿಕ್ಷಕಿಯೋರ್ವಳ ಬಳಿಯಿಂದ ಬಂದೂಕು ವಶಪಡಿಸಿಕೊಳ್ಳಲಾಗಿದೆ.

ಅಚ್ಚರಿಗೊಂಡ ಜನಸಮೂಹ
ಮೈನ್‌ಪುರಿಯ ಈ ಶಿಕ್ಷಕಿಯಿಂದ ಬಂದೂಕು ವಶಪಡಿಸಿಕೊಳ್ಳುವ ಲೈವ್ ವೀಡಿಯೊ (Teacher Cought Red Handed Possessing Illegal Gun) ನಮ್ಮ ಇನ್ನೊಂದು ವೆಬ್ ಸೈಟ್ ಆಗಿರುವ ZEE NEWS ಗೆ ಸಿಕ್ಕಿದೆ. ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಸದರ್ ಕೊತ್ವಾಲಿಯ ಜೈಲ್ ತಿರಾಹಾದಿಂದ ಪೊಲೀಸರು ಮಹಿಳೆ ಬಳಿಯಿಂದ ಈ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ವೀಡಿಯೊದಲ್ಲಿ, ಸುತ್ತಮುತ್ತಲಿನ ಜನರು ಮಹಿಳೆಯನ್ನು ಆಶ್ಚರ್ಯದಿಂದ ನೋಡುತ್ತಿರುವುದನ್ನು ನೀವು ನೋಡಬಹುದು. ವಿಡಿಯೋ ವೀಕ್ಷಿಸಿ... 

ಇದನ್ನೂ ಓದಿ-UGC Big Announcement: ಇನ್ಮುಂದೆ ಏಕಕಾಲಕ್ಕೆ ವಿದ್ಯಾರ್ಥಿಗಳು ಎರಡೆರಡು ಫುಲ್ ಟೈಮ್ ಡಿಗ್ರಿ ಕೋರ್ಸ್ ಗಳ ಅಧ್ಯಯನ ನಡೆಸಬಹುದು

ಪ್ಯಾಂಟ್ ನ ಬೆಲ್ಟ್ ಗೆ ಬಂದೂಕು ಹಾಕಲಾಗಿತ್ತು
ಈ ವಿಡಿಯೋದಲ್ಲಿ ಪೊಲೀಸರು ಶಿಕ್ಷಕಿಯಿಂದ ನಾಡ ಪಿಸ್ತೂಲ್ ಅನ್ನು ಹೇಗೆ ವಶಕ್ಕೆ (Policeman Got A Gun) ಪಡೆದಿದ್ದಾರೆ ಎಂಬುದನ್ನು ನೀವು ನೋಡಬಹುದಾಗಿದೆ. ಶಿಕ್ಷಕಿ ಸಾಮಾನ್ಯ ಮಹಿಳೆಯಂತೆ ಕಾಣುತ್ತಾಳೆ, ಆಕೆ ಜೀನ್ಸ್ ಮತ್ತು ಕುರ್ತಾ ಧರಿಸಿದ್ದಾರೆ. ಆದರೆ, ಪಿಸ್ತೂಲ್ ಅನ್ನು ಆಕೆ ತನ್ನ ಜೀನ್ಸ್‌ನಲ್ಲಿ ಇಟ್ಟುಕೊಂಡಿದ್ದಾಳೆ. ಅದನ್ನು ಮಹಿಳಾ ಪೊಲೀಸರು ತಮ್ಮ ಕೈಯಾರೆ ಹೊರತೆಗೆದಿದ್ದಾರೆ.

ಇದನ್ನೂ ನೋಡಿ-IMD Weather Update: ಶೀಘ್ರದಲ್ಲಿಯೇ ದೇಶದ ನಾಗರಿಕರಿಗೆ ಬಿರುಬಿಸಿಲಿನಿಂದ ನೆಮ್ಮದಿ ಸಿಗಲಿದೆ! ಎಲ್ಲೆಲ್ಲಿ ಮಳೆಯ ಸಿಂಚನ?

ಶಿಕ್ಷಕಿಯ ರುದ್ಧ ಪ್ರಕರಣ ದಾಖಲಾಗಿದೆ
ಬಂದೂಕು ಪತ್ತೆಯಾದ ನಂತರ ಪೊಲೀಸರು ಆರೋಪಿ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿಕ್ಷಕಿಯನ್ನು ಎಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು ಮತ್ತು ಆಕೆ ಗನ್ ಹಿಡಿದು ಎಲ್ಲಿಗೆ ಹೋಗುತ್ತಿದ್ದಳು ಎಂಬ ಮಾಹಿತಿ ಕಲೆಹಾಕುವಲ್ಲಿ ಇದೀಗ ಪೊಲೀಸರು ನಿರತರಾಗಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News