Video : ಪಕ್ಕದಲ್ಲಿ ಕುಳಿತುಕೊಂಡ ಸ್ನೇಹಿತ ಹಾಕೇ ಬಿಟ್ಟ ವರನಿಗೆ ಪಂಗನಾಮ..!

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಮದುವೆ ಸಮಾರಂಭದಲ್ಲಿ  ಸ್ನೇಹಿತನೇ ವರನ ಹಣವನ್ನು ಬಹಳ ನಾಜೂಕಾಗಿ ಕದಿಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು .  

Written by - Ranjitha R K | Last Updated : Apr 7, 2022, 03:08 PM IST
  • ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.
  • ವರನ ಹಣವನ್ನೇ ಎಗರಿಸಿಬಿಟ್ಟ ಸ್ನೇಹಿತ
  • ಭಾರೀ ಸಂಖ್ಯೆಯಲ್ಲಿ ವೀಕ್ಷಿಸುತ್ತಿರುವ ಜನ
Video : ಪಕ್ಕದಲ್ಲಿ ಕುಳಿತುಕೊಂಡ ಸ್ನೇಹಿತ ಹಾಕೇ ಬಿಟ್ಟ ವರನಿಗೆ ಪಂಗನಾಮ..!   title=
Viral video (Photo instagram)

ಬೆಂಗಳೂರು : ಕಳ್ಳತನದ ಘಟನೆಗಳು ಪ್ರಪಂಚದಾದ್ಯಂತ ನಡೆಯುತ್ತಲೇ ಇರುತ್ತವೆ. ಪ್ರತಿ ಕಳ್ಳತನಕ್ಕೂ ಕಳ್ಳರು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಕಳ್ಳತನಕ್ಕೆ ಸಂಬಂಧಿಸಿದ ವಿವಿಧ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಪೋಸ್ಟ್ ಆಗುತ್ತಿರುತ್ತವೆ (Social media video). ಕೆಲವೊಮ್ಮೆ ಕಳ್ಳರು ಪಿಕ್ ಪಾಕೆಟ್ ಮಾಡಿದರೆ ಇನ್ನು ಕೆಲವೊಮ್ಮೆ, ಎದುರಿಗಿದ್ದ ದುಬಾರಿ ವಸ್ತುಗಳನ್ನೇ ಎಗರಿಸಿ ಬಿಡುತ್ತಾರೆ.  

ಸಾಮಾಜಿಕ ಜಾಲತಾಣಗಳಲ್ಲಿ (Social media) ವಿಡಿಯೋವೊಂದು ಹರಿದಾಡುತ್ತಿದೆ. ಮದುವೆ ಸಮಾರಂಭದಲ್ಲಿ  ಸ್ನೇಹಿತನೇ ವರನ ಹಣವನ್ನು ಬಹಳ ನಾಜೂಕಾಗಿ ಕದಿಯುವುದನ್ನು ಈ ವಿಡಿಯೋದಲ್ಲಿ ಕಾಣಬಹುದು (Theft video). 

ಇದನ್ನೂ ಓದಿ : Amazing Theft Video: ಚಲಿಸುತ್ತಿರುವ ವಾಹನದಲ್ಲಿ ಕೈಚಳಕ ತೋರಿಸಿದ ಕಳ್ಳ, Video ನೋಡಿ

ವರನ ಸ್ನೇಹಿತನಿಂದಲೇ ಕಳ್ಳತನ : 
ಈ ವೀಡಿಯೋದಲ್ಲಿ ವರನನ್ನು ಕಾಣಬಹುದು. ಅ ವರ ಸುತ್ತ ಮುತ್ತ ಸ್ನೇಹಿತರು ಮತ್ತು ಸಂಬಂಧಿಕರು ಕುಳಿತಿರುವುದನ್ನು ಕೂಡಾ ನೋಡಬಹುದು. ವರನ ಕೊರಳಲ್ಲಿ ಹಣದ ಮಾಲೆಯೂ ಕಾಣಿಸುತ್ತಿದೆ. ಈ ವರನ ಪಕ್ಕದಲ್ಲಿ ಕುಳಿತ ಸ್ನೇಹಿತ ಪದೇ ಪದೇ ವರನ ಬಳಿಯಿರುವ ಹಣ ಕಡಿಯಲು ಪ್ರಯತ್ನಿಸುತ್ತಿರುತ್ತಾನೆ (Viral video). ಕೊನೆಗೂ  ಹಣ ಕದಿಯುವಲ್ಲಿ ಯಶಸ್ಸು ಕೂಡಾ ಆತನಿಗೆ ಸಿಗುತ್ತದೆ. ಸ್ನೇಹಿತ ಎಂದು ಪಕ್ಕದಲ್ಲಿ ಕುಳಿತುಕೊಂದು ಕನ್ನ ಹಾಕಿ ಬಿಟ್ಟಿದ್ದಾನೆ. 

ವೀಡಿಯೋ ಇಲ್ಲಿದೆ ನೋಡಿ: 

 
 
 
 

 
 
 
 
 
 
 
 
 
 
 

A post shared by Meemlogy (@meemlogy)

ಈ ಕಳ್ಳತನದ ವೀಡಿಯೊವನ್ನು meemlogyandghantaa ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.  ಈ ವೀಡಿಯೊವನ್ನು ಇಲ್ಲಿಯವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಮಾತ್ರವಲ್ಲ ಅನೇಕ ಮಂದಿ ವಿವಿಧ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ . 

ಇದನ್ನೂ ಓದಿ : Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News