ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಾದ ಬಳಿಕ ಅನೇಕರ ಲೈಫ್ ಸ್ಟೈಲ್ ಬದಲಾಗಿಬಿಟ್ಟಿದೆ. ಬಹುತೇಕ ಕಂಪನಿಗಳ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ನಲ್ಲಿ ಬ್ಯುಸಿಯಾಗಿದ್ದಾರೆ. ಕೋವಿಡ್ ಸೋಂಕು ವ್ಯಾಪಿಸುತ್ತಿದ್ದಂತೆ ಮನೆಯಿಂದಲೇ ಕೆಲಸ ಮಾಡುವುದು ಅನಿವಾರ್ಯವಾಯಿತು. ಕೊರೊನಾ ನಿರ್ಬಂಧಗಳು ಸಡಿಲವಾಗಿದ್ದರೂ ಕೂಡ ಅನೇಕರು ಈಗಲೂ ಮನೆಯಿಂದಲೇ ಕೆಲಸ ಮುಂದುವರೆಸಿದ್ದಾರೆ.


COMMERCIAL BREAK
SCROLL TO CONTINUE READING

ಸೋಷಿಯಲ್ ಮೀಡಿಯಾದಲ್ಲಿ ವರ್ಕ್‌ ಫ್ರಮ್ ಹೋಮ್‌(Work From Home)ನ ಅನೇಕ ತಮಾಷೆ, ಹಾಸ್ಯದ ವಿಡಿಯೋಗಳನ್ನು ನಾವು ನೋಡಿದ್ದೇವೆ.  ಜೂಮ್, ಗೂಗಲ್ ಮೀಟ್ ನಡೆಯುತ್ತಿದ್ದ ವೇಳೆಯೇ ನಡೆದ ಅವಾಂತರಗಳ ಅನೇಕ ವಿಡಿಯೋಗಳು ಸಖತ್ ವೈರಲ್ ಆಗಿವೆ. ಕೆಲ ಪ್ರಸಂಗಗಳಂತೂ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿವೆ. ಸದ್ಯ ಅಂತಹದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದವರು ನಕ್ಕು ನಕ್ಕು ಸುಸ್ತಾಗಿದ್ದಾರೆ.


ಇದನ್ನೂ ಓದಿ: Oxygen shortage:"ಎಲ್ಲವನ್ನೂ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ" ಕೇಂದ್ರದ ವಿರುದ್ಧ ರಾಹುಲ್ ಕಿಡಿ




ಈ ವಿಡಿಯೋದಲ್ಲಿ ವರ್ಕ್‌ ಫ್ರಮ್ ಹೋಮ್‌(Work From Home)ಗೆ ಅಂಟಿಕೊಂಡಿರುವ ವ್ಯಕ್ತಿಯೊಬ್ಬ ತನ್ನ ಮದುವೆ ಇದೇ ಎನ್ನುವುದನ್ನೂ ಮರೆತು ಮದುವೆ ಮಂಟಪದಲ್ಲಿಯೇ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ್ದಾನೆ. ಹೌದು, ವಿವಾಹ ನಡೆಯುತ್ತಿರುವಾಗಲೇ ಮದುವೆ ಮಂಟಪ(Wedding Function)ದಲ್ಲಿ ಕುಳಿತುಕೊಂಡಿದ್ದ ವರ ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡಿದ್ದಾನೆ. ಮದುವೆ ಮರೆತು ಲ್ಯಾಪ್‌ಟಾಪ್‌ ಹಿಡಿದು ಕೆಲಸ ಮಾಡುತ್ತಿದ್ದ ತನ್ನ ಸಂಗಾತಿಯ ದೃಶ್ಯವನ್ನು ನೋಡಿ ವಧು ಬಿದ್ದು ಬಿದ್ದು ನಕ್ಕಿದ್ದಾಳೆ.


ಮದುವೆ ಮಂಟಪದಲ್ಲಿ ವರ ಕುಳಿತಿದ್ದ ವೇಳೆ ವಿವಾಹದ ಆಚರಣೆಗಳು ನಡೆಯುತ್ತಿದ್ದವು. ಈ ವೇಳೆ ಲ್ಯಾಪ್‌ಟಾಪ್‌ ಹಿಡಿದುಕೊಂಡು ವರ ಏನೇನೋ ಮಾಡುತ್ತಿದ್ದ. ಅನತಿ ದೂರದಲ್ಲಿಯೇ ಕುಳಿತಿದ್ದ ವಧು ತನ್ನ ಸ್ನೇಹಿತೆಯರೊಂದಿಗೆ ನಗುತ್ತಿದ್ದಳು. ಸಂಬಂಧಿಕರು ಕೂಡ ಈ ದೃಶ್ಯ ಕಂಡು ನಗುತ್ತಿರುವುದನ್ನು ವಿಡಿಯೋ(Viral Video)ದಲ್ಲಿ ಕಾಣಬಹುದಾಗಿದೆ.


ಇದನ್ನೂ ಓದಿ: ಭಾರತದಲ್ಲಿ 42 ಕೋಟಿ ಜನರಿಗೆ ಕರೋನವೈರಸ್ ಲಸಿಕೆ -ಆರೋಗ್ಯ ಸಚಿವಾಲಯ


ದುಲ್ಹಾನಿಯಾ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಅಪ್ಲೋಡ್ ಆದ ಕೆಲ ಗಂಟೆಗಳಲ್ಲಿಯೇ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮದುವೆ ದಿನವೂ ತನ್ನ ಕೆಲಸ ಮರೆಯದ ವರನ ಪ್ರಾಮಾಣಿಕತೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆ ದಿನವೂ ಹಾಯಾಗಿರುವುದು ಬಿಟ್ಟು ಕೆಲಸ ಕೆಲಸ ಅಂತಾ ಲ್ಯಾಪ್‌ಟಾಪ್‌(Laptop) ಹಿಡಿದು ಕುಳಿತಿದ್ದಾನೆ ಅಂತಾ ಕೆಲವರು ನಗೆ ಚಟಾಕಿ ಹಾರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.