Video: ಮದುವೆಯಲ್ಲಿ ಅಳಿಯನಿಗೆ ‘AK 47 ಗನ್’ ಗಿಫ್ಟ್ ಕೊಟ್ಟ ಅತ್ತೆ..!

ಅಳಿಯನಿಗೆ ಯಾರು ಕೊಡದ ಗಿಫ್ಟ್ ಅನ್ನೇ ನೀಡಿದ ಅತ್ತೆ!

Last Updated : Nov 28, 2020, 01:00 PM IST
  • ಅಳಿಯನಿಗೆ ಯಾರು ಕೊಡದ ಗಿಫ್ಟ್ ಅನ್ನೇ ನೀಡಿದ ಅತ್ತೆ!
  • ಮದುವೆಯಲ್ಲಿ ಅಳಿಯನಿಗೆ ಅತ್ತೆ-ಮಾವ ವರದಕ್ಷಿಣೆ ಅಂತ ಚಿನ್ನ, ಬೆಳ್ಳಿ, ಕಾರು, ಬೈಕ್ ಅನ್ನು ಗಿಫ್ಟ್ ಕೊಡುತ್ತಾರೆ
  • ಎಕೆ-47 ಗನ್ ಅನ್ನು ಉಡುಗೊರೆಯಾಗಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾಳೆ ಅತ್ತೆ!
Video: ಮದುವೆಯಲ್ಲಿ ಅಳಿಯನಿಗೆ ‘AK 47 ಗನ್’ ಗಿಫ್ಟ್ ಕೊಟ್ಟ ಅತ್ತೆ..! title=

ಮದುವೆಯಲ್ಲಿ ಅಳಿಯನಿಗೆ ಅತ್ತೆ-ಮಾವ ವರದಕ್ಷಿಣೆ ಅಂತ ಚಿನ್ನ, ಬೆಳ್ಳಿ, ಕಾರು, ಬೈಕ್ ಅನ್ನು ಗಿಫ್ಟ್ ಆಗಿ ನೀಡುತ್ತಾರೆ. ಆದರೆ ಇಲ್ಲೊಬ್ಬರು ಅತ್ತೆ ಅಳಿಯನಿಗೆ ಯಾರು ಕೊಡದ ಗಿಫ್ಟ್ ಅನ್ನೇ ನೀಡಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

 

ಮದುವೆ ಮುಗಿದ ಬಳಿಕ ವಧು-ವರ ಚೇರ್ ಮೇಲೆ ಕುಳಿತಿರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ವಧುವಿನ ತಾಯಿ ಮೊದಲಿಗೆ ವರನ ಹಣೆಗೆ ಮುತ್ತಿಡುತ್ತಾಳೆ. ನಂತರ ಆತನಿಗೆ ಎಕೆ-47 ಗನ್(AK-47 Rifle) ಅನ್ನು ಉಡುಗೊರೆಯಾಗಿ ನೀಡಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾಳೆ. ನಂತರ ಆಕೆ ವಧು-ವರರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆ. ಇದನೆಲ್ಲ ನೋಡಿದ ಜನ ಕೇಕೆ ಹಾಕುತ್ತಿರುವದು ವಿಡಿಯೋ ದಲ್ಲಿ ನೋಡಬಹುದಾಗಿದೆ.

ಕೊರೊನಾ​ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ 'ಶಾಕಿಂಗ್'​ ಕಾರಣ ಹೀಗಿದೆ!

ಈ ವಿಡಿಯೋವನ್ನು ಶೇರ್ ಮಾಡಿರುವ ವ್ಯಕ್ತಿ ನಮ್ಮನ್ನು ಅರ್ಥ ಮಾಡಿಕೊಳ್ಳುವ ಅತ್ತೆ ಸಿಗಬೇಕು ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ವಿಡಿಯೋ ಪಾಕಿಸ್ತಾನದಿಂದ ಟ್ವಿಟ್ಟರಿಗೆ ಅಪ್ಲೋಡ್ ಆಗಿದ್ದು, ಯಾವಾಗ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.

ವಿಶ್ವದ ಈ ನಗರದಲ್ಲಿ ಕತ್ತಲಾಗುತ್ತಿದ್ದಂತೆ ನೇರಳೆ ಬಣ್ಣಕ್ಕೆ ತಿರುಗುವ ಆಕಾಶ

Trending News