ನವದೆಹಲಿ: ನಾಯಿ ಮತ್ತು ಬೆಕ್ಕುಗಳು ಮನುಷ್ಯರ ಅತ್ಯಂತ ನೆಚ್ಚಿನ ಸಾಕುಪ್ರಾಣಿಗಳಾಗಿವೆ. ನಿಷ್ಠೆಗೆ ನಾಯಿಗಳು ಹೆಸರುವಾಸಿ, ಅದೇ ರೀತಿ ಬೆಕ್ಕುಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಅವುಗಳನ್ನು ಮುದ್ದಿಸಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ನೀವು ಸೋಷಿಯಲ್ ಮೀಡಿಯಾದಲ್ಲಿ ಬೆಕ್ಕುಗಳ ಅನೇಕ ವಿಡಿಯೋಗಳನ್ನು ನೋಡಿರಬೇಕು.


COMMERCIAL BREAK
SCROLL TO CONTINUE READING

ಕೆಲವು ಬೆಕ್ಕುಗಳು ತಮ್ಮ ಮುದ್ದಾದ ವರ್ತನೆಗಳಿಂದ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತವೆ. ಆದರೆ, ಅನೇಕ ಬೆಕ್ಕುಗಳು ತಮ್ಮ ಕಿಡಿಗೇಡಿತನದಿಂದ ಜನರ ಗಮನ ಸೆಳೆಯುತ್ತವೆ. ಇತ್ತೀಚಿನ ದಿನಗಳಲ್ಲಿ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.


ಇದನ್ನೂ ಓದಿ: ಈ ವಧು-ವರ ಪಡೆದುಕೊಂಡ್ರು "ಅಮೂಲ್ಯ" ಉಡುಗೊರೆ... ಏನದು ಗೊತ್ತಾ?


ಬೆಕ್ಕಿನ ವಿಡಿಯೋ ನೋಡಿದ್ರೆ ನಂಬಲಾಗುತ್ತಿಲ್ಲ!


Booster Dose ಬೆಲೆ ಇಳಿಕೆ ಮಾಡಿದ ವ್ಯಾಕ್ಸಿನ್ ಕಂಪನಿಗಳು, ಹೊಸ ಬೆಲೆಗಳು ಇಂತಿವೆ


ಬೆಕ್ಕು ಹುರುಪಿನಲ್ಲಿಯೇ ಮೇಲಕ್ಕೆ ನೆಗೆದು ಆ ವಸ್ತುಗಳನ್ನು ತನ್ನ ಎರಡು ಕೈಗಳ ಮೂಲಕ ಹಿಡಿಯುತ್ತದೆ. ಇದು ಒಂದು ರೀತಿ ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಡೈವ್ ಹೊಡೆದು ಕ್ಯಾಚ್ ಹಿಡಿಯುತ್ತಾರಲ್ಲ ಆ ರೀತಿ ಇದೆ. ಮೇಲಕ್ಕೆ ಎಸೆದ ವಸ್ತುವನ್ನು ಬೆಕ್ಕು ಹಾರಿ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ಇದನ್ನು ನೋಡಿ ಅನೇಕರು ಅಚ್ಚರಿಪಟ್ಟಿದ್ದಾರೆ.


ಗೋಲ್‌ಕೀಪರ್‌ನಂತೆ ಜಿಗಿದ ಬೆಕ್ಕು!


ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬೆಕ್ಕು ಮೇಲಕ್ಕೆ ನೆಗೆದು ವಸ್ತುವನ್ನು ಹಿಡಿಯಲು ಪ್ರಯತ್ನಿಸಿದೆ. ಈ ವೇಳೆ ಅದು ತನ್ನ ಗುರಿ ತಪ್ಪದೇ ಇರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅದರ ಸಾಹಸವನ್ನು ಕಣ್ತುಂಬಿಕೊಂಡ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. @Yoda4ever ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರು ಜನರು ವೀಕ್ಷಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.