ಈ ವಧು-ವರ ಪಡೆದುಕೊಂಡ್ರು "ಅಮೂಲ್ಯ" ಉಡುಗೊರೆ... ಏನದು ಗೊತ್ತಾ?

ಪೆಟ್ರೋಲ್‌ ಮತ್ತು ಡೀಸೆಲ್‌ ತುಂಬಿರುವ ಬಾಟಲಿಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಕುಮಾರ್‌ ಮತ್ತು ಕೀರ್ತನಾ ಸ್ವಲ್ಪ ಗೊಂದಲಕ್ಕೆ ಒಳಗಾದರೂ ಸಹ, ತಮಗೆ ದೊರೆತ ಅಮೂಲ್ಯವಾದ ಉಡುಗೊರೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ್ದಾರೆ. 

Written by - Zee Kannada News Desk | Last Updated : Apr 8, 2022, 01:29 PM IST
  • ವಧು-ವರನಿಗೆ ಪೆಟ್ರೋಲ್‌-ಡೀಸೆಲ್‌ ಗಿಫ್ಟ್‌ ಕೊಟ್ಟ ಫ್ರೆಂಡ್ಸ್‌
  • ಉಡುಗೊರೆ ಸ್ವೀಕರಿಸಿದ ಕುಮಾರ್‌ ಮತ್ತು ಕೀರ್ತನಾ
  • ತಮಿಳುನಾಡಿನ ಮದುವೆ ಮನೆಗೂ ತಲುಪಿದ ಇಂಧನ ತೈಲ ಬೆಲೆ ಏರಿಕೆ ವಿಚಾರ
ಈ ವಧು-ವರ ಪಡೆದುಕೊಂಡ್ರು "ಅಮೂಲ್ಯ" ಉಡುಗೊರೆ... ಏನದು ಗೊತ್ತಾ?  title=
Marriage

ತಮಿಳುನಾಡು: ದೇಶದಲ್ಲಿ ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿದೆ. ದರ ಏರಿಕೆಯ ವಿಚಾರ ಈಗ ಮದುವೆ ಮನೆಗೂ ಕಾಲಿಟ್ಟಿದ್ದು, ವಧು-ವರನಿಗೆ ಅವರ ಸ್ನೇಹಿತರು ಪೆಟ್ರೋಲ್‌ (Petrol)-ಡೀಸೆಲ್‌ (Diesel) ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 

ಇದನ್ನು ಓದಿ: Harassment:ಪತ್ರಕರ್ತರು ಸೇರಿ 8 ಮಂದಿ ಬಂಧನ: ಅರೆನಗ್ನಗೊಳಿಸಿ ಕಿರುಕುಳ ನೀಡಿದ ಪೊಲೀಸರು!

ಪೆಟ್ರೋಲ್‌ ಮತ್ತು ಡೀಸೆಲ್‌ ತುಂಬಿರುವ ಬಾಟಲಿಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ ಕುಮಾರ್‌ ಮತ್ತು ಕೀರ್ತನಾ ಸ್ವಲ್ಪ ಗೊಂದಲಕ್ಕೆ ಒಳಗಾದರೂ ಸಹ, ತಮಗೆ ದೊರೆತ ಅಮೂಲ್ಯವಾದ ಉಡುಗೊರೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ್ದಾರೆ. 

ಇದನ್ನು ಓದಿ: CNG ಬಳಕೆದಾರರಿಗೆ ಬಿಗ್ ಶಾಕ್ : ಎರಡೇ ದಿನದಲ್ಲಿ ₹5 ಏರಿಕೆ!

ಕಳೆದ 16 ದಿನಗಳಿಂದ ಮತ್ತೆ ತೈಲಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಸದ್ಯ  ಪೆಟ್ರೋಲ್‌ ಮತ್ತು ಡೀಸೆಲ್‌ ದರ 14 ಬಾರಿ ಪರಿಷ್ಕರಣೆಯಾಗಿ ಪ್ರತಿ ಲೀಟರ್‌ಗೆ ತಲಾ 10 ರೂಪಾಯಿಯಷ್ಟು ಏರಿಕೆಯಾಗಿದೆ. ಇನ್ನು ತಮಿಳುನಾಡಿನಲ್ಲಿ ಎರಡೂ ಇಂಧನಗಳ ದರ 100 ರೂಪಾಯಿ ದಾಟಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News