ಭೀಕರ ಕಾಳಗದ Viral Video: ಕೋಳಿಯೇ ಗಿಡುಗವನ್ನು ನುಂಗಿತ್ತಾ..!
ಗಿಡುಗವು ಮೀನು, ಇಲಿ, ಮೊಲಗಳು, ಅಳಿಲುಗಳು ಮತ್ತು ಕೋಳಿಗಳನ್ನು ಬೇಟೆಯಾಡುತ್ತದೆ. ನರಿ ಮತ್ತು ಜಿಂಕೆ ಮರಿಗಳನ್ನು ಸಹ ರಣಹದ್ದು ಬೇಟೆಯಾಡುತ್ತದೆ. ಆದರೆ ಇಂತಹ ಭಯಾನಕ ಬೇಟೆಗಾರ ಹಕ್ಕಿ ಕೋಳಿಗೆ ಬಲಿಯಾಗಬಹುದೆಂದು ಎಂದಾದರೂ ನೀವು ಊಹಿಸಿದ್ದೀರಾ..?
ನವದೆಹಲಿ: ಗಿಡುಗ(Falcon)ವನ್ನು ವಿಶ್ವದ ಅತ್ಯಂತ ‘ಪರಭಕ್ಷಕ ಪಕ್ಷಿ’ ಎಂದು ಪರಿಗಣಿಸಲಾಗಿದೆ. ವೇಗದ ಕಾರಣದಿಂದ ಚಿರತೆಗಳನ್ನು ಸಾಮಾನ್ಯವಾಗಿ ಭೂಮಿ ಮೇಲಿನ ಅತ್ಯಂತ ವೇಗದ ಪ್ರಾಣಿ ಎಂದು ಹೇಳಲಾಗುತ್ತದೆ. ಆದರೆ ಗಿಡುಗಗಳು ಸಹ ತಮ್ಮ ವೇಗದ ಕಾರಣಕ್ಕೆ ಹೆಸರುವಾಸಿಯಾಗಿವೆ. ಹದ್ದು ಗಂಟೆಗೆ 320 ಕಿಲೋಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದ ಅತ್ಯಂತ ವೇಗದ ಹಕ್ಕಿ ಮಾತ್ರವಲ್ಲದೆ ಭೂಮಿಯ ಮೇಲೆ ವೇಗವಾಗಿ ಓಡುವ ಹಕ್ಕಿಯೂ ಹೌದು.
ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಯನ್ನೇ ಬೇಟೆಯಾಡಲಾಗಿದೆ!
ಗಿಡುಗ(Hawk) ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ಎಂದು ಪರಿಗಣಿಸಲಾಗಿದೆ. ಹದ್ದು ಸುಮಾರು 6 ಕೆ.ಜಿ ತೂಕವನ್ನು ಎತ್ತಿ ಆಕಾಶದಲ್ಲಿ ಹಾರಬಲ್ಲದು. ಹದ್ದು ಮೀನು, ಇಲಿಗಳು, ಮೊಲಗಳು, ಅಳಿಲುಗಳು ಮತ್ತು ಕೋಳಿಗಳನ್ನು ಬೇಟೆಯಾಡುತ್ತದೆ. ನರಿ ಮತ್ತು ಜಿಂಕೆ ಮರಿಗಳನ್ನು ಸಹ ಅವರು ಬೇಟೆಯಾಡುತ್ತವೆ. ಆದರೆ ಇಂತಹ ಭಯಾನಕ ಬೇಟೆಯ ಹಕ್ಕಿ ಕೋಳಿಗೆ ಬಲಿಯಾಗಬಹುದು ಎಂದು ಎಂದಾದರೂ ನೀವು ಊಹಿಸಿದ್ದೀರಾ..?
ಇದನ್ನೂ ಓದಿ: Viral video : ಮನೆಯ ಒಳಗೆ ನುಗ್ಗಲು ಯತ್ನಿಸುವ ಹಾವಿನ ವಿರುದ್ದ ಭಯಂಕರವಾಗಿ ಕಾದಾಡುವ ಬೆಕ್ಕು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವಿಡಿಯೋವೊಂದು ವೈರಲ್(Viral Video) ಆಗುತ್ತಿದೆ. ಈ ವಿಡಿಯೋದಲ್ಲಿ ಬೇಟೆಯ ಅನ್ವೇಷಣೆಯಲ್ಲಿದ್ದ ಗಿಡುಗವೇ ಸ್ವತಃ ಬಲಿಪಶುವಾಗಿದೆ. ಈ ವಿಡಿಯೋದಲ್ಲಿ ಕೋಳಿಮರಿಗಳನ್ನು ಬೇಟೆಯಾಡಲು ಬಂದಿದ್ದ ಗಿಡುಗವೇ ಕೋಳಿಗೆ ಬಲಿಯಾಗಿದೆ. ಹೌದು, ಗಿಡುಗವೊಂದು ಕೋಳಿ ಮರಿಗಳನ್ನು ಬೇಟೆಯಾಡಲು(Hawk Attack On Chicken) ಕೆಳಗಿಳಿದ ತಕ್ಷಣವೇ ತಾಯಿ ಕೋಳಿ ತನ್ನ ಮರಿಗಳನ್ನು ರಕ್ಷಿಸಲು ಅದರ ಮೇಲೆಯೇ ದಾಳಿ ನಡೆಸಿದೆ. ಹದ್ದನ್ನು ಅಟ್ಟಾಡಿಸಿಕೊಂಡು ಹೋಗಿ ಕೋಳಿ ದಾಳಿ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಭೀಕರ ದಾಳಿಯ ವಿಡಿಯೋ ವೈರಲ್!
ಕೋಳಿಯ ಹಠಾತ್ ದಾಳಿಯಿಂದ ಗಿಡುಗ(Hawk Attack Chicken)ಕ್ಕೆ ಹಾರಲು ಸಾಧ್ಯವಾಗಿಲ್ಲ. ಕೋಳಿಯು ತನ್ನ ಪಾದಗಳಿಂದ ಹದ್ದನ್ನು ಹಿಡಿದು ತನ್ನ ಕೊಕ್ಕಿನಿಂದ ಚುಚ್ಚಿ ಚುಚ್ಚಿ ಕೊಲ್ಲುತ್ತದೆ. ಪರಿಣಾಮ ಗಿಡುಗ ತನ್ನ ಪ್ರಾಣವನ್ನೇ ಕಳೆದುಕೊಂಡಿದೆ. ನೇಚರ್‌ಗೋಸ್ಮೆಟಲ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚುಮಂದಿ ವೀಕ್ಷಿಸಿದ್ದಾರೆ. ಕೋಳಿ ದಾಳಿಗೆ ಬಲಿಯಾದ ಗಿಡುಗವನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಮಂಟಪದಲ್ಲಿಯೇ ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ ವರ, ವಧು ಮಾಡಿದ್ದೇನು..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.