Viral video : ಮನೆಯ ಒಳಗೆ ನುಗ್ಗಲು ಯತ್ನಿಸುವ ಹಾವಿನ ವಿರುದ್ದ ಭಯಂಕರವಾಗಿ ಕಾದಾಡುವ ಬೆಕ್ಕು

ಬೆಕ್ಕು ಅನೇಕ ಪ್ರಾಣಿಗಳೊಂದಿಗೆ ಜಗಳವಾಡುವುದನ್ನು ನಾವು ನೋಡಿರುತ್ತೇವೆ.  ಹಾಗೆಯೇ ಹಾವು ಕೂಡಾ ಇತರ ಪ್ರಾಣಿಗಳೊಂದಿಗೆ ಕಾದಾಟಕ್ಕೆ ನಿಲ್ಲುತ್ತದೆ. ಆದರೆ ಬೆಕ್ಕು ಮತ್ತು ಹಾವಿನ ಜಗಳ ನೋಡುವುದಕ್ಕೆ ಸಿಗುವುದು ವಿರಳ.  

Written by - Ranjitha R K | Last Updated : Apr 5, 2022, 04:24 PM IST
  • ಬೆಕ್ಕು ಹಾವಿನ ಕಾದಾಟದ ವಿಡಿಯೋ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಫುಲ್ ವೈರಲ್
  • ಅಪಾರ ಸಂಖ್ಯೆಯ ಜನರಿಂದ ವಿಡಿಯೋ ವೀಕ್ಷಣೆ
Viral video : ಮನೆಯ ಒಳಗೆ ನುಗ್ಗಲು ಯತ್ನಿಸುವ ಹಾವಿನ ವಿರುದ್ದ ಭಯಂಕರವಾಗಿ ಕಾದಾಡುವ ಬೆಕ್ಕು  title=
Viral video (Photo instagram)

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವಿಡಿಯೋಗಳು ಕಾಲಕಾಲಕ್ಕೆ ವೈರಲ್ ಆಗುತ್ತಿರುತ್ತವೆ (Viral video). ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ವೀಡಿಯೊಗಳನ್ನು ಸಾಮಾಜಿಕ್ ಮಾಧ್ಯಮಗಳಲ್ಲಿ ಅತಿ ಹೆಚ್ಚು ಬಾರಿ ವೀಕ್ಷಿಸಲಾಗುತ್ತಿದೆ.   ಅಂಥದ್ದೇ ಒಂದು ವಿಡಿಯೋ ಇದೀಗ  ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಪ್ರಾಣಿಗಳ ಕಾದಾಟಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚು ವೈರಲ್ ಆಗುತ್ತಿವೆ. ಬೆಕ್ಕು ಅನೇಕ ಪ್ರಾಣಿಗಳೊಂದಿಗೆ ಜಗಳವಾಡುವುದನ್ನು ನಾವು ನೋಡಿರುತ್ತೇವೆ.  ಹಾಗೆಯೇ ಹಾವು ಕೂಡಾ ಇತರ ಪ್ರಾಣಿಗಳೊಂದಿಗೆ ಕಾದಾಟಕ್ಕೆ ನಿಲ್ಲುತ್ತದೆ (Snake video). ಆದರೆ ಬೆಕ್ಕು ಮತ್ತು ಹಾವಿನ ಜಗಳ ನೋಡುವುದಕ್ಕೆ ಸಿಗುವುದು ವಿರಳ.  

ಇದನ್ನೂ ಓದಿ : video : ದಿನಕ್ಕೆ ೫೦೦ ರೂ ಸಂಬಳ ನೀಡಿ ಬೆಳೆ ಕಾಯಲು ಕರಡಿ ನೇಮಿಸಿದ ರೈತ

ಹಾವು ಬೆಕ್ಕಿನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.  ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮನೆಯಲ್ಲಿ ಬೆಕ್ಕು ಇರುವುದನ್ನು ಕಾಣಬಹುದು (Animal video). ಬೆಕ್ಕಿನ ಪಕ್ಕದಲ್ಲಿಯೇ ನಾಯಿಯೂ ಕಾಣಿಸುತ್ತದೆ. ಹಾವು ಮನೆಯ ಒಳಗೆ ಬರಲು ಪ್ರಯತ್ನಿಸುತ್ತಿರುವಂತೆಯೇ ಬೆಕ್ಕು ಅದರ ಮೇಲೆ ಹಾರಿ ಬಿಡುತ್ತದೆ. ಇಲ್ಲಿ ಹಾವು ಮತ್ತು ಬೆಕ್ಕಿನ ನಡುವೆ ನಡೆಯುವ ಕಾದಾಟದ ಭಯಾನಕ ವಿಡಿಯೋವನ್ನು ಕಾಣಬಹುದು (Viral video).   ಒಂದು ಕ್ಷಣಕ್ಕೆ ಈ ವಿಡಿಯೋ ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು ಹಾಡಿನ ದೃಶ್ಯವನ್ನೇ ನೆನಪಿಸುತ್ತದೆ.  

 

ಬೆಕ್ಕಿನ ಆವೇಶಭರಿತ ಕಾದಾಟ ಎಂಥವರನ್ನು ಕೂಡಾ ಬೆರಗಾಗಿಸುತ್ತದೆ. ಈ ವೀಡಿಯೊವನ್ನು rasal_viper ನ Instagram ಖಾತೆಗೆ ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊ ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ : Snake Birth Video: ಹಾವಿನ ಜನನದ ವಿಡಿಯೋ..! ಅಬ್ಬಬ್ಬಾ, ಇದನ್ನೊಮ್ಮೆ ನೋಡಿ...

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News