Video : ಪೂಜೆಗೆಂದು ದೇವಸ್ಥಾನಕ್ಕೆ ತಂದಿದ್ದ Royal Enfield ಬಾಂಬ್ ರೀತಿ ಸಿಡಿದೇ ಹೋಯಿತು..!

ವ್ಯಕ್ತಿಯೊಬ್ಬರು ತಮ್ಮ ಹೊಸ ಬುಲೆಟ್‌ ಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ದೇವಸ್ಥಾನಕ್ಕೆ ತೆರಳಿದ್ದರು.  ಅಲ್ಲಿ ಇದ್ದಕ್ಕಿದ್ದಂತೆ ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡು ಒಮ್ಮೆಲೇ ಸ್ಪೋಟಿಸಿದೆ. 

Written by - Ranjitha R K | Last Updated : Apr 4, 2022, 04:04 PM IST
  • ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ ಬೆಂಕಿ ಹೊತ್ತಿಕೊಂಡಿದೆ
  • ಬೆಂಕಿಯ ನಂತರ ಭಾರೀ ಸ್ಫೋಟ
  • ವಿದ್ಯುತ್ ಸ್ಕೂಟರ್ ಸುಟ್ಟ ಅನೇಕ ಪ್ರಕರಣಗಳು
Video : ಪೂಜೆಗೆಂದು ದೇವಸ್ಥಾನಕ್ಕೆ ತಂದಿದ್ದ Royal Enfield ಬಾಂಬ್ ರೀತಿ ಸಿಡಿದೇ ಹೋಯಿತು..!   title=
royal enfield fire (Photo twitter)

ಬೆಂಗಳೂರು : ಕಳೆದ ಹಲವು ದಿನಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಈಗ ನಾವು ಹೇಳುತ್ತಿರುವ ಸುದ್ದಿ ನಿಮ್ಮನ್ನು ನಿಜಕ್ಕೂ ಬೆಚ್ಚಿ ಬೀಳಿಸುತ್ತವೆ.  ಇದೀಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು( (electric Scooter)ಹೆಚ್ಚು ಟ್ರೆಂಡ್‌ನಲ್ಲಿಲ್ಲ, ಆದರೆ ರಾಯಲ್ ಎನ್‌ಫೀಲ್ಡ್ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ. ಈ ಬಾರಿ ರಾಯಲ್ ಎನ್ ಫೀಲ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ವರದಿಯಾಗಿದೆ (Royal enfield fire). ವ್ಯಕ್ತಿಯೊಬ್ಬರೂ ತನ್ನ ಹೊಸ ಬುಲೆಟ್‌ ಗೆ ಪೂಜೆ ಮಾಡಿಸುವ ಉದ್ದೇಶದಿಂದ  ದೇವಸ್ಥಾನಕ್ಕೆ ಕರೆ ತಂದಿದ್ದರು. 

ಪೂಜೆ ತಯಾರಿ ನಡೆಸುತ್ತಿದ್ದ ವೇಳೆ ಹೊತ್ತಿಕೊಂಡ ಬೆಂಕಿ : 
ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ ಬೆಂಕಿ ಹೊತ್ತಿಕೊಂಡ ಪ್ರಕರಣ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿದೆ (Royal Enfield Bullet).  ಇಲ್ಲಿನ ರವಿಚಂದ್ರ ಎಂಬವರು ತಮ್ಮ ಹೊಸ ಬುಲೆಟ್‌ಗೆ ಪೂಜೆ ಸಲ್ಲಿಸಲು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು. ಇಲ್ಲಿ ರಸ್ತೆ ಬದಿಯಲ್ಲಿ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿ ಪೂಜೆಗೆ ಸಿದ್ಧತೆ ನಡೆಸಿದ್ದರು (Bullet fire). ಅಷ್ಟರಲ್ಲಿ ಬೈಕ್ ನಿಂದ ಹೀಗೆ ಬರುವುದುಂನು ಅಲ್ಲಿರುವವರು ಗಮನಿಸಿದ್ದಾರೆ. ಏಕಾಏಕಿ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ತಗುಲಿದ ನಂತರ ಬೈಕ್ ಬಾಂಬ್ ನಂತೆ ಸ್ಫೋಟಗೊಂಡಿದೆ. 

ಇದನ್ನೂ ಓದಿ:  Indian Railway : ರೈಲ್ವೆ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್ : ಈ ರೈಲುಗಳ ಪ್ರಯಾಣ ದರ ₹50 ಹೆಚ್ಚಳ!

ಇತ್ತೀಚೆಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ :
ರಾಯಲ್ ಎನ್‌ಫೀಲ್ಡ್ ಬುಲೆಟ್ (Royal enfield fire) ಹೊರತುಪಡಿಸಿ, ಕಳೆದ ಕೆಲವು ದಿನಗಳಲ್ಲಿ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆಗಳು ನಡೆದಿವೆ. ಮೊದಲಿಗೆ ಪುಣೆಯಲ್ಲಿ ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ (ola electric scooter) ಸುಟ್ಟು ಕರಕಲಾದ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ತಮಿಳುನಾಡಿನ ವೆಲ್ಲೂರಿನಲ್ಲಿ ಮನೆಯಲ್ಲಿ ಚಾರ್ಜ್ ಆಗುತ್ತಿದ್ದ ಓಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಉಸಿರುಗಟ್ಟಿ ಇಬ್ಬರು  ಸಾವನ್ನಪ್ಪಿದ್ದಾರೆ. ಇದಾದ ನಂತರ ಪ್ಯೂರ್ ಇವಿಯ ಎಲೆಕ್ಟ್ರಿಕ್ ಸ್ಕೂಟರ್‌ನ ಘಟನೆಯೂ ಇತ್ತೀಚೆಗೆ ಮುಂಚೂಣಿಗೆ ಬಂದಿದೆ. ಈ ಪ್ರಕರಣಗಳ ತನಿಖೆಗೆ ಸರ್ಕಾರ ಆದೇಶಿಸಿದೆ ಮತ್ತು ಈ ತನಿಖೆಯನ್ನು ಡಿಆರ್‌ಡಿಒದ ಅಗ್ನಿಶಾಮಕ ಮತ್ತು ಪರಿಸರ ಸುರಕ್ಷತೆ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ:   Ram Mandir : ಅಯೋಧ್ಯೆಯಲ್ಲಿ 'ರಾಮ ಮಂದಿರ' ನಿರ್ಮಾಣ ಕಾರ್ಯ ಹೇಗಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News