ಮುಂಬೈ: ಕೆಲವೊಮ್ಮೆ ಯಾವ ಕ್ಷಣದಲ್ಲಿ ಏನಾಗುತ್ತದೆ ಅನ್ನೋದನ್ನು ಊಹಿಸೋದಕ್ಕೂ ಆಗೋದಿಲ್ಲ. ಅಂತಹ ಒಂದು ಘಟನೆ ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲು ಹತ್ತೋದಕ್ಕೆ ಓಡಿ ಬಂದ ಮಹಿಳೆಯೊಬ್ಬರು ಕಾಲು ಜಾರಿ ಬೀದಿದ್ದಾರೆ. ಆ ನಂತರ ನಡೆದಿದ್ದೇ ವಿಸ್ಮಯ.


COMMERCIAL BREAK
SCROLL TO CONTINUE READING

ಹೌದು, ವಾಣಿಜ್ಯ ನಗರಿ ಮುಂಬೈನ ವಸಾಯಿ ರಸ್ತೆ ರೈಲ್ವೆ ಜಂಕ್ಷನ್(Mumbai Vasai Road Railway Junction)ನಲ್ಲಿ ಭಾನುವಾರ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅದರಡಿ ಬೀಳುತ್ತಿದ್ದ ಮಹಿಳೆಯೊಬ್ಬರನ್ನು ಸಹಪ್ರಯಾಣಿಕರು ರಕ್ಷಿಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವ ಸುಮಾರು 1 ನಿಮಿಷದ ವಿಡಿಯೋ ತುಣುಕಿನಲ್ಲಿ ಮಹಿಳೆ ಚಲಿಸುತ್ತಿರುವ ರೈಲು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.   


ಇದನ್ನೂ ಓದಿ: ವಾಹನ ಚಲಾಯಿಸುವಾಗ ಸದಾ ಜೊತೆಗಿರಲಿ ಈ ದಾಖಲೆ, ಇಲ್ಲವಾದರೆ ಬೀಳಲಿದೆ 10 ಸಾವಿರ ರೂ ದಂಡ


ರೈಲು ಪ್ಲಾಟ್​ಫಾರ್ಮ್(Railway Platform)ನಿಂದ ಹೊರಡುತ್ತಿರುವಾಗಲೇ ಮಹಿಳೆ ಹತ್ತಲು ಪ್ರಯತ್ನಿಸಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ ರೈಲಿನಡಿ ಸಿಲುಕುತ್ತಿದ್ದರು. ಕೂಡಲೇ ಸ್ಥಳದಲ್ಲಿದ್ದ ಸಹಪ್ರಯಾಣಿಕರು ಆಕೆಯನ್ನು ಹೊರಗಳೆದು ಜೀವ ಉಳಿಸಿದ್ದಾರೆ. ಮಹಿಳೆ ರೈಲಿನಡಿ ಸಿಲುಕುತ್ತಿದ್ದಂತೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಕೆಲ ಪ್ರಯಾಣಿಕರು ಸಹಾಯಕ್ಕೆ ಧಾವಿಸಿದ್ದಾರೆ. ಪೊಲೀಸರು ಕೂಡ ಮಹಿಳೆಯನ್ನು ರಕ್ಷಿಸಲು ಓಡೋಡಿ ಬಂದಿದ್ದಾರೆ. ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದಂತೆ ಚಾಲಕ ರೈಲು ನಿಲ್ಲಿಸಿದ್ದಾನೆ.  


Vasai Road Railway Junction) ಪಶ್ಚಿಮ ಉಪಮಾರ್ಗ ಮತ್ತು ಮುಂಬೈ ಉಪನಗರ ರೈಲ್ವೆ ಜಾಲದ ವಸಾಯಿ ರಸ್ತೆ-ರೋಹಾ ಮಾರ್ಗದಲ್ಲಿದೆ. ಕಳೆದ ವಾರ ಸ್ಥಳೀಯ ರೈಲು ವೇಗವಾಗಿ ಬರುತ್ತಿದ್ದಾಗ ರೈಲ್ವೆ ಟ್ರ್ಯಾಕ್ ಮಧ್ಯದಲ್ಲಿ ನಿಂತಿದ್ದ ಮಹಿಳೆಯೊಬ್ಬರನ್ನು  ವಸಾಯಿ ರೋಡ್ ರೈಲ್ವೆ ಜಂಕ್ಷನ್‌ನಲ್ಲಿ ಪೋಲಿಸರು ರಕ್ಷಿಸಿದ್ದರು.


ಇದನ್ನೂ ಓದಿ: 'Bureaucracy ಯಾವುದೇ ಸ್ಥಾನಮಾನ ಇಲ್ಲ, ಕೇವಲ ಚಪ್ಪಲಿ ಎತ್ತುವುದೆ Bureaucracy ಕೆಲಸ'


ದಹನು-ಅಂಧೇರಿ ಲೋಕಲ್ ರೈಲು(Dahanu-Andheri local train) ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ ಏಕನಾಥ ನಾಯಕ್, ಮಹಿಳೆ ಹಳಿಗಳ ಮಧ್ಯದಲ್ಲಿ ನಿಂತಿದ್ದನ್ನು ನೋಡಿದ್ದರು. ಕೂಡಲೇ ಅವರು ಚಾಲಕನಿಗೆ ರೈಲು ನಿಲ್ಲಿಸುವಂತೆ ಸೂಚಿಸಿದ್ದರು. ಬಳಿಕ ಸ್ಥಳದತ್ತ ಓಡಿ ಹೋಗಿ ಮಹಿಳೆಯನ್ನು ರಕ್ಷಿಸಿದ್ದರು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.