ವಾಹನ ಚಲಾಯಿಸುವಾಗ ಸದಾ ಜೊತೆಗಿರಲಿ ಈ ದಾಖಲೆ, ಇಲ್ಲವಾದರೆ ಬೀಳಲಿದೆ 10 ಸಾವಿರ ರೂ ದಂಡ

ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಚಾಲಕನು ಪಿಯುಸಿ ಪ್ರಮಾಣಪತ್ರವನ್ನು  ಹೊಂದಿಲ್ಲದಿದ್ದರೆ, ವಾಹನ ಮಾಲೀಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.  

Written by - Ranjitha R K | Last Updated : Sep 20, 2021, 07:41 PM IST
  • ಪೊಲ್ಯುಶನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು
  • ನಿಯಮಗಳನ್ನು ಉಲ್ಲಂಘಿಸಿದರೆ, ಪರವಾನಗಿ ರದ್ದಾಗಬಹುದು
  • ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ವಿಧಿಸಬಹುದು
ವಾಹನ ಚಲಾಯಿಸುವಾಗ ಸದಾ ಜೊತೆಗಿರಲಿ ಈ ದಾಖಲೆ, ಇಲ್ಲವಾದರೆ ಬೀಳಲಿದೆ 10 ಸಾವಿರ ರೂ ದಂಡ title=
ಪೊಲ್ಯುಶನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು (file photo)

ನವದೆಹಲಿ : ಚಳಿಗಾಲದಲ್ಲಿ ಮಾಲಿನ್ಯದ ಮಟ್ಟವನ್ನು ನಿರ್ವಹಿಸಲು ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಚಾಲನೆ ಮಾಡುವಾಗ ವ್ಯಾಲಿಡ್ ಪೊಲ್ಯುಶನ್ ಅಂಡರ್ ಕಂಟ್ರೋಲ್ ಪ್ರಮಾಣಪತ್ರವನ್ನು (PUC) ಹೊಂದಿರಬೇಕು ಎಂದು ವಾಹನ ಮಾಲೀಕರಿಗೆ ದೆಹಲಿ ಸಾರಿಗೆ ಇಲಾಖೆಯು ಮನವಿ ಮಾಡಿದೆ. ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ, ಶಿಕ್ಷೆಗೆ ಪಾತ್ರರಾಗಬೇಕಾಗುತ್ತದೆ. 

ಆರು ತಿಂಗಳವರೆಗೆ ಜೈಲು ಶಿಕ್ಷೆ :
ರಾಜ್ಯ ಸಾರಿಗೆ ಇಲಾಖೆಯ ಪ್ರಕಾರ, ಚಾಲಕನು ಪಿಯುಸಿ ಪ್ರಮಾಣಪತ್ರವನ್ನು (Pollution under control certificate) ಹೊಂದಿಲ್ಲದಿದ್ದರೆ, ವಾಹನ ಮಾಲೀಕರು ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10,000 ರೂ.ವರೆಗೆ ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ.  ಮಾಲಿನ್ಯವನ್ನು ನಿಯಂತ್ರಿಸುವ ಮತ್ತು ದೆಹಲಿಯ ವಾಯು ಗುಣಮಟ್ಟವನ್ನು ಸುಧಾರಿಸುವ ಪ್ರಯತ್ನದಲ್ಲಿ, ದೆಹಲಿಯಲ್ಲಿರುವ ಎಲ್ಲಾ ಮೋಟಾರು ವಾಹನ ಮಾಲೀಕರು ತಮ್ಮ ವಾಹನಗಳನ್ನು ನಿಯಂತ್ರಣದಲ್ಲಿಡುವಂತೆ, ಸರ್ಕಾರವು ಹೊರಡಿಸಿದ ನೋಟಿಸ್‌ನಲ್ಲಿ,  ಸಾರಿಗೆ ಇಲಾಖೆ ಹೇಳಿದೆ. 

ಇದನ್ನೂ ಓದಿ: "ಮಮತಾ ದೀದಿ ಹೇಳಿದ್ದೆಲ್ಲವೂ ನನ್ನ ಕಿವಿಗೆ ಸಂಗೀತದಂತೆ"

ಸರ್ಕಾರದ ನೋಟಿಸ್ :
ಈ ಸೂಚನೆ ಪ್ರಕಾರ, 'ಎಲ್ಲಾ ನೋಂದಾಯಿತ ವಾಹನ ಮಾಲೀಕರು ಯಾವುದೇ ರೀತಿಯ ದಂಡ/ಜೈಲುವಾಸ/ಚಾಲನಾ ಪರವಾನಗಿ (Driving License) ರದ್ದಾಗುವುದನ್ನು ತಪ್ಪಿಸಲು ಸಾರಿಗೆ ಇಲಾಖೆಯಿಂದ ಗುರುತಿಸಲ್ಪಟ್ಟ ಅಧಿಕೃತ ಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ. 

ಪಿಯುಸಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಹೇಗೆ ? 
ಪಿಯುಸಿ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ, ಅದನ್ನು ತಕ್ಷಣವೇ ಪಡೆಯಬೇಕಾಗುತ್ತದೆ. ವಾಹನಗಳನ್ನು ಪರೀಕ್ಷಿಸಲು, ಸಾರಿಗೆ ಇಲಾಖೆಯಿಂದ ಗುರುತಿಸಲ್ಪಟ್ಟಿರುವ 900 ಕ್ಕೂ ಹೆಚ್ಚು ಮಾಲಿನ್ಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬಹುದು. ಇವುಗಳನ್ನು ಪೆಟ್ರೋಲ್ ಪಂಪ್‌ಗಳು (Petrol pump)ಮತ್ತು ವರ್ಕ್ ಶಾಪ್ ಗಳಲ್ಲಿ ಸ್ಥಾಪಿಸಲಾಗಿದೆ.  

ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಸಿಹಿಸುದ್ದಿ..! ಸರ್ಕಾರವು ಇದೇ ಮೊದಲ ಬಾರಿಗೆ ನೀಡುತ್ತಿದೆ ಈ ಅದ್ಭುತ ಸೌಲಭ್ಯ, ಪ್ರತಿಯೊಬ್ಬರಿಗೂ ಸಿಗಲಿದೆ ಪ್ರಯೋಜನ

ಪಿಯುಸಿ ಪ್ರಮಾಣಪತ್ರ ಶುಲ್ಕ :
ಪೆಟ್ರೋಲ್ ಮತ್ತು ಸಿಎನ್‌ಜಿಯಲ್ಲಿ (CNG)ಚಲಿಸುವ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ 60 ರೂ. ನಾಲ್ಕು ಚಕ್ರದ ವಾಹನಗಳಿಗೆ 80 ರೂ. ವಿಧಿಸಲಾಗುತ್ತದೆ. ಡೀಸೆಲ್ ವಾಹನಗಳಿಗೆ ಮಾಲಿನ್ಯ ಪರೀಕ್ಷಾ ಪ್ರಮಾಣಪತ್ರದ ಶುಲ್ಕ 100 ರೂ. ಆಗಿರುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News