ಶ್ರೀನಗರ: ಮುಜಫರ್ ಅಹ್ಮದ್ ವಾನಿ ಎಂದು ಗುರುತಿಸಲ್ಪಟ್ಟ ಮೋಸ್ಟ್ ವಾಂಟೆಡ್ ಹಿಜ್ಬುಲ್ ಮುಜಾಹಿದ್ದೀನ್(Hizbul Mujahideen) ಸಹಚರ, ಕಾಶ್ಮೀರ ಗಡಿನಾಡಿನ ಗಡಿ ಭದ್ರತಾ ಪಡೆ ಮುಂದೆ ಬೇಷರತ್ತಾಗಿ ಶರಣಾಗಿದ್ದಾನೆ. 34 ವರ್ಷದ ಭಯೋತ್ಪಾದಕ ವಾನಿ ಅಬ್ದುಲ್ ಗಫರ್ ವಾನಿಯ ಮಗ ಮತ್ತು ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಪುಲ್ವಾಮಾ ಜಿಲ್ಲೆಯ ಬ್ರಾ ಬಂದಿನಾ ಪ್ರದೇಶಕ್ಕೆ ಸೇರಿದವನು ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ನವೆಂಬರ್ 25, 2019 ರಂದು ಪುಲ್ವಾಮಾ ಜಿಲ್ಲೆಯ ಡ್ರಾಬ್ಗಮ್ ಗ್ರಾಮದಲ್ಲಿ ನಡೆದ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಮುಖಾಮುಖಿಯಲ್ಲಿ ಆತನನ್ನು ಹುಡುಕಲಾಗುತ್ತಿತ್ತು. ಇರ್ಫಾನ್ ಅಹ್ಮದ್ ಶೇಖ್ ಮತ್ತು ಇರ್ಫಾನ್ ಅಹ್ಮದ್ ರಾಥರ್ ಎಂಬ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತರಾದರು. ಈ ಭಯೋತ್ಪಾದಕರು ಕಾಶ್ಮೀರದಿಂದ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಹಿಜ್ಬುಲ್ ನಾಯಕರು ಎಂದು ನಂಬಲಾಗಿತ್ತು.


ವಾನಿ ತಮ್ಮ ಭಯೋತ್ಪಾದಕ ಯೋಜನೆಗಳನ್ನು ಕೈಗೊಳ್ಳಲು ಕೊಲ್ಲಲ್ಪಟ್ಟ ಭಯೋತ್ಪಾದಕರು ಬಳಸುತ್ತಿದ್ದ ವಾಹನವನ್ನು ಚಾಲನೆ ಮಾಡುತ್ತಿದ್ದ, ಹಾಗಾಗಿ ಆತನಿಗೆ ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿದೆ ಎಂದು ಹೇಳಲಾಗುತ್ತಿದೆ.


ನವೆಂಬರ್ 25 ರಂದು ದಕ್ಷಿಣ ಕಾಶ್ಮೀರ ಜಿಲ್ಲೆಯ ಶಾದಿಮಾರ್ಗ್‌ನಲ್ಲಿರುವ ವಾಹನ ತಪಾಸಣಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ಭುಗಿಲೆದ್ದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.